ಕಲಬುರಗಿ: ‘ಸಿರಿನುಡಿ’ ಕಾರ್ಯಕ್ರಮ: ಸಾಧಕರಿಗೆ ಪ್ರಶಸ್ತಿ ಪ್ರದಾನ

0
200

ಕಲಬುರಗಿ: ದೇಶ, ಗಡಿಗಳ ಎಲ್ಲೆಯನ್ನು ಮೀರಿದ ಕುವೆಂಪುರವರ ಅನಿಕೇತನದ ಕಲ್ಪನೆಯನ್ನು ನಾವು ಮೈಗೂಡಿಸಿಕೊಳ್ಳಬೇಕು. ಹಣ ಮನುಷ್ಯರ ನಡುವಿನ ಸಂಬಂಧಗಳನ್ನು ಹಾಳು ಮಾಡುತ್ತಿರುವ ಈ ಸಂದರ್ಭದಲ್ಲಿ ಜನರ ಮನಸ್ಸುಗಳನ್ನು ಒಂದುಗೂಡಿಸುವ ಚಿಂತನೆ, ಶಿಕ್ಷಣ, ಸಂಸ್ಕೃತಿಗಳನ್ನು ಸಂರಕ್ಷಿಸಬೇಕಾಗಿದೆ. ನಮ್ಮ ಬದುಕು ಇತರರಿಗೆ ಸಹಾಯ ಮಾಡುವ ದಾರಿ ದೀಪದಂತೆ ಬೆಳಕು ನೀಡಬೇಕಾಗಿದೆ. ಅದರಂತೆ ಕನ್ನಡ ಭಾಷೆಯನ್ನು ನಾವು ಬಳಸಿದಷ್ಟೂ ಅದು ತಾನಾಗಿಯೇ ಬೆಳೆಯುತ್ತದೆ. ಕನ್ನಡ ಉಳಿವಿಗೆ ಪ್ರತಿಯೊಬ್ಬರೂ ಶ್ರಮಿಸಬೇಕಾಗಿದೆ ಎಂದು ಸಾಹಿತಿ-ಸಾಂಸ್ಕೃತಿಕ ಸಂಘಟಕ ವಿಜಯಕುಮಾರ ತೇಗಲತಿಪ್ಪಿ ಹೇಳಿದರು.

ವಿಶ್ವಜ್ಯೋತಿ ಪ್ರತಿಷ್ಠಾನ ನಗರದ ಎಕೆಆರ್ ದೇವಿ ಪಿಯು ಕಾಲೇಜಿನ ಆವರಣದಲ್ಲಿ ಆಯೋಜಿಸಿದ ‘ಸಿರಿನುಡಿ ಸಂಭ್ರಮ-೨೦೨೦’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

Contact Your\'s Advertisement; 9902492681

ಸಮಾರಂಭದ ಸಾನಿಧ್ಯವಹಿಸಿ ಆಶೀರ್ವಚನ ನೀಡಿದ ಶ್ರೀನಿವಾಸ ಸರಡಗಿಯ ಶ್ರೀ ರೇವಣಸಿದ್ಧ ಶಿವಾಚಾರ್ಯರು, ಕನ್ನಡ ಭಾಷೆ ನಮಗೆಡ ಪ್ರತಿಯೊಂದನ್ನು ಕೊಟ್ಟಿದೆ. ತಂದೆ-ತಾಯಿಯಂತೆ ಕನ್ನಡದ ಋಣವನ್ನು ತೀರಿಸಲು ಸಾಧ್ಯವಿಲ್ಲ. ಇಂದಿನ ಯುವ ಜನತೆ ನಮ್ಮ ಪರಂಪರೆಯ ವಾರಸುದಾರರಾಗಿ, ಕನ್ನಡತನವನ್ನು ಬದುಕಿನಲ್ಲಿಅಳವಡಿಸಿಕೊಳ್ಳಬೇಕು. ಹಾಗಾದಾಗ ಮಾತ್ರ ಕನ್ನಡದ ಉಳಿವು ಸಾಧ್ಯ ಎಂದು ಅಭಿಪ್ರಾಯಪಟ್ಟರು. ಈ ನಿಟ್ಟಿನಲ್ಲಿ ಸಾಂಸ್ಕೃತಿಕ ಸಂಘಟಕ ವಿಜಯಕುಮಾರ ತೇಗಲತಿಪ್ಪಿ ಅವರು ತಮ್ಮ ನಿತ್ಯ ನೂತನ ಕನ್ನಡದ ಕಾರ್ಯಕ್ರಮಗಳನ್ನು ಅಯೋಜಿಸುವ ಮೂಲಕ ಸಾಹಿತ್ಯ ಪ್ರಚಾರಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದರು.

ವೈದ್ಯ ಸಾಹಿತಿ ಡಾ. ಎಸ್.ಎಸ್.ಪಾಟೀಲ ಮಂದರವಾಡ, ಗುರೂಜಿ ಡಿಗ್ರಿ ಕಾಲೇಜು ಸಂಸ್ಥಾಪಕ ಕಲ್ಯಾಣಕುಮಾರ ಶೀಲವಂತ, ಎಕೆಆರ್ ದೇವಿ ಪಿಯು ಕಾಲೇಜಿನ ಆಡಳಿತಾಧಿಕಾರಿ ವಿದ್ಯಾಸಾಗರ ದೇಶಮುಖ, ಹಾಸ್ಯ ಕಲಾವಿದ ಗುಂಡಣ್ಣ ಡಿಗ್ಗಿ, ರವೀಂದ್ರಕುಮಾರ ಭಂಟನಳ್ಳಿ, ಜಗದೀಶ ಮರಪಳ್ಳಿ, ಜಗನ್ನಾಥರೆಡ್ಡಿ ಚಿಮ್ಮನಚೋಡ, ಮನೋಹರ ಪೊದ್ದಾರ, ಶ್ರೀಕಾಂತ ಪಾಟೀಲ ತಿಳಗೂಳ, ಶಿವರಾಜ ಅಂಡಗಿ, ವಿನೋದ ಜೇನವೇರಿ, ಪರಮೇಶ್ವರ ಶಟಕಾರ, ಸತೀಶ ಸಜ್ಜನ್, ಜಗನ್ನಾಥ ತರನಳ್ಳಿ, ರವಿ ಎಲ್. ಹೂಗಾರ, ಪ್ರಭುಲಿಂಗ ಮೂಲಗೆ, ವಿಶ್ವನಾಥ ತೊಟ್ನಳ್ಳಿ, ದೇವೇಂದ್ರಪ್ಪ ಗಣಮುಖಿ, ಎಸ್.ಎಂ.ಪಟ್ಟಣಕರ್, ನಾಗೇಂದ್ರಪ್ಪ ಮಾಡ್ಯಾಳೆ, ಸವಿತಾ ಪಾಟೀಲ, ಶರಣರಾಜ್ ಛಪ್ಪರಬಂದಿ, ಪ್ರಬುದೇವ ಯಳವಂತಗಿ, ಎಂ.ವಿ.ಎಸ್.ಸುಬ್ರಹ್ಮಣ್ಯಂ, ಶಿವಮೂರ್ತಿ ಕಾಚೂರ, ಅನೀಲಕುಮಾರ ಪಾಟೀಲ ತೇಗಲತಿಪ್ಪಿ ಇತರರು ಉಪಸ್ಥಿತರಿದ್ದರು.

ಖ್ಯಾತ ವಿನ್ಯಾಸಗಾರ ಸಿದ್ಧಾರಾಮ ಹಂಚನಾಳ ಅವರನ್ನು ‘ಸಿದ್ಧ ಚಿತ್ರ’ ಹಾಗೂ ಇಡೀ ವಿಶ್ವವೇ ಬೆಚ್ಚಿ ಬೀಳಿಸಿದ ಕೊರೊನಾ ರೋಗದ ಆಪತ್ತು ಎದುರಿಸುತ್ತ ಸ್ವಾಸ್ಥ್ಯ ಸಮಾಜಕ್ಕಾಗಿ ಸಾಹಸದ ಕಾರ್ಯ ಮಾಡುತ್ತ ಆರೋಗ್ಯ ವಿಜಯಕ್ಕೆ ಹಾತೊರೆಯುವ ಕನ್ನಡ ಮನಸ್ಸಿನ ಜಿಲ್ಲೆಯ ವಿವಿಧ ಕ್ಷೇತ್ರದ ಸಾಧಕರಾದ ಸೇಡಂನ ಬಸವಪ್ರಸಾದ ಕಾಚೂರ, ಗುಂಜ ಬಬಲಾದನ ಪ್ರೊ.ಎಚ್.ಬಿ.ಪಾಟೀಲ, ನ್ಯಾಯವಾದಿ ಚಂದ್ರಕಾಂತ ಕಾಳಗಿ, ಮಾಡಿಯಾಳನ ಸುಭಾಷ ಪೊಲೀಸ್ ಪಾಟೀಲ, ಖಜೂರಿಯ ಹಣಮಂತ ಶೇರಿ, ಶ್ರೀಶೈಲ ಬಂಡೆ, ಚಿಂಚೋಳಿಯ ವೀರಣ್ಣ ಸುಗಂದಿ, ರೇವಣಸಿದ್ದಪ್ಪ ಮುಕರಂಬಿ, ಹಣಮಂತರಾವ ಪೆಂಚನಪಳ್ಳಿ ತೇಗಲತಿಪ್ಪಿ, ಕವಲಗಾ ಗ್ರಾಮದ ಸಿದ್ಧಲಿಂಗಯ್ಯ ಮಠಪತಿ (ಶೇಖರ ಸ್ವಾಮಿ), ಸಾಗರ ವಿ.ಕುಲಕರ್ಣಿ, ಚಿತ್ತಾಪೂರಿನ ರಾಜಶೇಖರ ಬಳ್ಳಾ, ಕಾಳಗಿಯ ಬಾಬಾಗೌಡ ಬಿರಾದಾರ, ಆಳಂದನ ಆನಂದ ದೇಶಮುಖ, ನಾಗೇಶ ರೆಡ್ಡಿ, ಜೇವರ್ಗಿಯ ಸುನಂದಾ ಕಲ್ಲಾ ರವರನ್ನು ‘ಕಾರ್ಯ ವಿಜಯ’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here