ಪ್ರತಿ ಗ್ರಾಮಕ್ಕೆ ಕುಡಿಯುವ ನೀರು ಯೋಜನೆ: ಶಾಸಕ ಗುತ್ತೇದಾರ

0
303

ಆಳಂದ: ತಾಲೂಕಿನ ಎಲ್ಲ ಹಳ್ಳಿಗಳಿಗೆ ಕುಡಿಯುವ ನೀರು ಒದಗಿಸುವ ಯೋಜನೆಗೆ ಸರ್ಕಾರದಿಂದ ಅನುಮೋದನೆ ಸಿಗುವ ನಿರೀಕ್ಷೆಯಿದೆ ಎಂದು ಆಳಂದ ಶಾಸಕ ಸುಭಾಷ್ ಆರ್ ಗುತ್ತೇದಾರ ಹೇಳಿದರು.

ಮಂಗಳವಾರ ಆಳಂದ ಪಟ್ಟಣದಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹಾಗೂ ಆಳಂದ ಪುರಸಭೆಯ ವತಿಯಿಂದ ಹಮ್ಮಿಕೊಂಡಿದ್ದ ನಗರೋತ್ಥಾನ ಹಂತ ೩ ಯೋಜನೆಯಡಿ ೬೩೭.೫೦ ಲಕ್ಷ.ರೂ.ಗಳ ನೀರು ಸರಬರಾಜು ಕಾಮಗಾರಿಯ ಅಡಿಗಲ್ಲು ಸಮಾರಂಭ ಉದ್ಘಾಟಿಸಿ ಮಾತನಾಡಿದರು.

Contact Your\'s Advertisement; 9902492681

ಆಳಂದ ಪಟ್ಟಣಕ್ಕೆ ಸಧ್ಯ ಕುಡಿಯುವ ನೀರಿನ ಸಮಸ್ಯೆಯಿದ್ದು ಮುಂದಿನ ದಿನಗಳಲ್ಲಿ ಆ ಸಮಸ್ಯೆ ಇಲ್ಲವಾಗಲಿದೆ ಈ ಯೋಜನೆಯಿಂದ ಆಳಂದ ಪಟ್ಟಣಕ್ಕೆ ಉತ್ತಮ ಗುಣಮಟ್ಟದ ಶುದ್ಧ ಕುಡಿಯುವ ನೀರು ದೊರಕಲಿದೆ ಈ ನಿಟ್ಟಿನಲ್ಲಿ ಯೋಜನೆ ಸಿದ್ಧಪಡಿಸಲಾಗಿದ್ದು ಅದರಲ್ಲಿ ಟ್ಯಾಂಕ್‌ನ ಸಾಮರ್ಥ್ಯ ಹೆಚ್ಚಳ, ಶುದ್ಧ ಕುಡಿಯುವ ನೀರಿನ ಘಟಕ ಇರಲಿದೆ ಎಂದರು.

ಆಳಂದ ಪಟ್ಟಣಕ್ಕೆ ಎರಡು ನೀರಿನ ಟ್ಯಾಂಕಗಳ ಅವಶ್ಯಕತೆಯಿದ್ದು ನಂತರದ ದಿನಗಳಲ್ಲಿ ಇನ್ನೊಂದು ಟ್ಯಾಂಕ್ ನಿರ್ಮಾಣಕ್ಕೆ ಚಾಲನೆ ಕೊಡಲಾಗುವುದು ಅಲ್ಲದೇ ಪಟ್ಟಣದ ಪ್ರಮುಖ ಸಮಸ್ಯೆಗಳನ್ನು ಆದ್ಯತೆಯ ಮೇಲೆ ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಈಗ ಕೈಗೊಂಡಿರುವ ಯೋಜನೆಯು ೬ ತಿಂಗಳ ಕಾಲಮಿತಿಯಲ್ಲಿ ಪೂರ್ಣಗೊಳಿಸಲು ನಿರ್ಧರಿಸಲಾಗಿದೆ ಎಂದು ನುಡಿದರು.

ಕೊರಳ್ಳಿ ಹತ್ತಿರ ಇರುವ ಸರ್ಕಾರದ ೭೦ ಏಕರೆ ಗೋಮಾಳ ಜಮೀನಿನಲ್ಲಿ ಬೃಂದಾವನದ ರೀತಿಯಲ್ಲಿ ಅಭಿವೃದ್ಧಿ ಪಡಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಅದು ಕೂಡ ಮುಂದೆ ಸಾಕಾರವಾಗಲಿದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷೆ ರಾಜಶ್ರೀ ಶ್ರೀಶೈಲ ಖಜೂರಿ, ಉಪಾಧ್ಯಕ್ಷ ಈರಣ್ಣ ಹತ್ತರಕಿ, ಯೋಜನಾ ನಿರ್ದೇಶಕ ಶಿವಶರಣಪ್ಪ ನಂದಗಿರಿ, ಮುಖ್ಯ ಅಭಿಯಂತರ ದಿನೇಶ, ಕಾರ್ಯಪಾಲಕ ಅಭಿಯಂತರ ಬಸವರಾಜ ಆಲೇಗಾಂವ, ಪುರಸಭೆ ಮುಖ್ಯಾಧಿಕಾರಿ ಬಾಬುರಾವ ವಿಭೂತೆ, ಅಧಿಕಾರಿ ವಿಜಯಕುಮಾರ ಬಿಲಗುಂದಿ, ಪುರಸಭೆ ಸದಸ್ಯರಾದ ಪ್ರತಿಭಾ ಘನಾತೆ, ಶ್ರೀಶೈಲ ಪಾಟೀಲ, ಮೃತ್ಯಂಜಯ ಆಲೂರೆ, ಕವಿತಾ ಹುಸೇನಖಾನ, ಅಸ್ಮಿತಾ ಚಿಟಗುಪ್ಪಕರ್, ಫಿರ್ದೋಶ ಅನ್ಸಾರಿ, ಸಂತೋಷ ಹೂಗಾರ, ಅಮಜದ್ ಅಲಿ ಕರ್ಜಗಿ, ಸಂದೀಪ ಪಾತ್ರೆ, ನಾಮ ನಿರ್ದೇಶಿತ ಸದಸ್ಯರಾದ ಯೂಸುಫ್ ಅನ್ಸಾರಿ, ಶ್ರೀಧರ ಸಾಲೇಗಾಂವ, ಸುಭಾಷ್ ಬೆಲಸೂರೆ, ನಿಂಗಮ್ಮ ಸೂರ್ಯಕಾಂತ, ರಮೇಶ ಸಂಗಾ, ಆಳಂದ ಮಂಡಲ ಬಿಜೆಪಿ ಅಧ್ಯಕ್ಷ ಆನಂದರಾವ್ ಪಾಟೀಲ, ಮುಖಂಡರಾದ ಚೆನ್ನವೀರ ಪಾಟೀಲ, ನಿಜಲಿಂಗಪ್ಪ ಕೊರಳ್ಳಿ ರಮ್ಮು ಅನ್ಸಾರಿ, ರಾಜಕುಮಾರ ಸನ್ಮುಖ, ಸಿದ್ರಾಮಪ್ಪ ಹತ್ತರಕಿ, ಸಿದ್ದಪ್ಪ ಪೂಜಾರಿ, ಮೀರ ಅಹ್ಮದ್ ಸೇರಿದಂತೆ ಇತರರು ಇದ್ದರು.
ಕಾಂಚನಾ, ಅಫ್ರೀನ್ ಸ್ವಾಗತಿಸಿದರು. ಶ್ರೀಶೈಲ ಮಾಳಗೆ ಕಾರ್ಯಕ್ರಮ ನಿರ್ವಹಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here