ಕಲಬುರಗಿ: ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮ ಮಂಡಳಿ ರಚನೆ ಮಾಡಿ ಆದೇಶ ಹೊರಡಿಸಿದ ಮುಖ್ಯಮಂತ್ರಿ ಭಾವಚಿತ್ರಕ್ಕೆ ಕ್ಷೀರಾಭಿಷೇಕ ಮಾಡಿ ಸಮುದಾಯದ ಪರ ಜಯಘೋಷ ಹಾಕಿ ವೀರಶೈವ ಲಿಂಗಾಯತ ಯುವ ವೇದಿಕೆ ವತಿಯಿಂದ ಸಂಭ್ರಮ ಆಚರಣೆ ಮಾಡಲಾಯಿತು.
ಸಂಭ್ರಮಾಚರಣೆಯಲ್ಲಿ ಜಿಲ್ಲಾಧ್ಯಕ್ಷರಾದ ದಯಾನಂದ್ ಪಾಟೀಲ್, ರಾಜ್ಯ ಸಮಿತಿಯ ಶ್ರೀಧರ ನಾಗನಹಳ್ಳಿ, ವೇದಿಕೆಯ ಉಪಾಧ್ಯಕ್ಷರಾದ ಕಲ್ಯಾಣ್ ಪಾಟೀಲ್ ಕಣ್ಣಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಮಹಾಗಾವ್ಕರ್, ಕಾರ್ಯದರ್ಶಿ ಮಹೇಶ್ಚಂದ್ರ ಪಾಟೀಲ್ ಕಣ್ಣಿ, ಸಂಘಟನಾ ಕಾರ್ಯದರ್ಶಿ ಪರಮೇಶ್ವರ ಯಳಮೇಲಿ, ಸಹ ಸಂಘಟನಾ ಕಾರ್ಯದರ್ಶಿ ಆನಂದ ಕನಸೂರ್, ಜಿಲ್ಲಾ ಸಂಚಾಲಕರಾದ ಗುರುರಾಜ್ ಅಂಬಾಡಿ, ಸತೀಶ್ ಮಾಹೋರ್, ಸುನೀಲ್ ಕೊಳಕೂರ್, ಗುರುರಾಜ್ ಸುಂಟನೂರ, ಅವಿನಾಶ್ ಅರಳಿ, ಮಲ್ಲು ಕೊಂಡೆದ ಮತ್ತು ವೇದಿಕೆ ಸದಸ್ಯರು ಉಪಸ್ಥಿತರಿದ್ದರು.