41 ನೇ ಶರಣಕಮ್ಮಟ ಅನುಭವಮಂಟಪ ಉತ್ಸವ-೨೦೨೦ ಸಮಾರೋಪ ಸಮಾರಂಭ

0
44

ಬಸವಕಲ್ಯಾಣ: ವಿಶ್ವಬಸವಧರ್ಮ ಟ್ರಸ್ಟ್ ಅನುಭವಮಂಟಪ ಬಸವಕಲ್ಯಾಣ ಆಶ್ರಯದಲ್ಲಿ ೪೧ ನೇ ಶರಣಕಮ್ಮಟ ಅನುಭವಮಂಟಪ ಉತ್ಸವ-೨೦೨೦ ರ ಸಮಾರೋಪ ಸಮಾರಂಭ ಜರುಗಿತು.

ದಿವ್ಯಸಾನಿಧ್ಯ ವಹಿಸಿದ್ದ ಜಗದ್ಗುರು ತೋಂಟದಾರ್ಯ ಸಂಸ್ಥಾನದ ಮಠ ಗದಗ-ಡಂಬಳದ ಪೂಜ್ಯ ಜಗದ್ಗುರು ಡಾ.ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಇಂದಿನ ಪ್ರಜಾಪ್ರಭುತ್ವ ಮಾದರಿಯಲ್ಲಿಯೇ ಅಂದಿನ ಅನುಭವಮಂಟಪ ಎಂಬ ಸಂಸತ್ತು ಇತ್ತು. ಸಂವಿಧಾನದ ಮಾದರಿಯಲ್ಲಿ ಶರಣರ ವಚನಗಳು ಇವೆ. ಶೂನ್ಯಸಂಪಾದನೆ ಕನ್ನಡ ಸಾಹಿತ್ಯದ ಅಪೂರ್ವ ಗ್ರಂಥವಾಗಿದೆ. ಈ ಗ್ರಂಥದಲ್ಲಿ ಅಂದಿನ ಅನುಭವಮಂಟಪದ ಮುಕ್ತ ಚರ್ಚೆ ಅಭಿವ್ಯಕ್ತಗೊಂಡಿದೆ. ಸಾಮಾಜಿಕ, ಧಾರ್ಮಿಕ, ಸಾತ್ವಿಕ ಮೌಲ್ಯಗಳು ವಚನ ಸಾಹಿತ್ಯದಲ್ಲಿವೆ ಎಂದರು. ಹಿರೇಮಠ ಸಂಸ್ಥಾನ ಭಾಲ್ಕಿ ಪೂಜ್ಯ ಶ್ರೀ ಗುರುಬಸವ ಪಟ್ಟದ್ದೇವರು ಭಾರತವೇ ವಿಶ್ವಗುರು ಆಗುವಲ್ಲಿ ಇಂದು ಸಜ್ಜುಗೊಂಡಿರುವುದಕ್ಕೆ ಅಂದಿನ ಬಸವಾದಿ ಶರಣರ ಕಾಯಕ ದಾಸೋಹ, ಶಿವಯೋಗ ಕಾರಣವಾಗಿವೆ ಎಂದರು.

Contact Your\'s Advertisement; 9902492681

ಬಸವಕಲ್ಯಾಣ ಹರಳಯ್ಯ ಪೀಠದ ಪೂಜ್ಯ ಡಾ.ಗಂಗಾಂಬಿಕಾ ಅಕ್ಕ ಪ್ರಜಾಪ್ರಭುತ್ವ ಹುಟ್ಟಿದ ದಿನಾಚರಣೆಯ ಸಾಂಕೇತಿಕವಾಗಿ ಅನುಭವಮಂಟಪ ಉತ್ಸವ ಇಂದು ಆಚರಿಸಲಾಗುತ್ತಿದೆ. ಹಕ್ಕುಗಳ ಸಮಾನತೆ ಸರ್ವಶಿಕ್ಷಣ ಅಭಿಯಾನ ದಾಸೋಹ ತತ್ವದ ಆಶಯಗಳು ಇಂದಿನ ಅನುಭವಮಂಟಪದ ಆಶಯಗಳಾಗಿ ಮುಂದುವರೆಯಬೇಕಾಗಿದೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಸಿದ ಕರ್ನಾಟಕ ಸರಕಾರದ ಮಾನ್ಯ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೋವಿಡ್-೧೯ ಇನ್ನು ಉಲ್ಭಣಸ್ಥಿತಿಯಲ್ಲಿ ಇರುವ ಕಾರಣ ಅನುಭವಮಂಟಪ ಉತ್ಸವ ಅಂತರ್ಜಾಲ ಮೂಲಕ ಯಶಸ್ವಿಯಾಗಿ ನಡೆಸಲು ಮುಂದಾಗಿದ್ದ ಭಾಲ್ಕಿ ಶ್ರೀಗಳ ಕಾರ್ಯ ಶ್ಲಾಘನೀಯವಾಗಿದೆ ಎಂದರು.

ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಇಂದು ನಮ್ಮ ಸಮಾಜದಲ್ಲಿ ಅಸಮಾನತೆ ಮತ್ತೆ ತಾಂಡವ ಆಡುತ್ತಿದೆ. ಬಸವಾದಿ ಶರಣರು ಕಟ್ಟಬಯಸಿದ ಸಮಾಜ ಪರಿಕಲ್ಪನೆ ಇಂದು ಮತ್ತೆ ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ಬರುವುದು ಅವಶ್ಯವಾಗಿದೆ. ಬುದ್ಧ, ಬಸವ ಮತ್ತು ಅಂಬೇಡ್ಕರ್ ಅವರ ತತ್ವಗಳು ಇಂದು ಚಾಚು ತಪ್ಪದೆ ಅನುಷ್ಠಾನಕ್ಕೆ ಬಂದರೆ ಮತ್ತು ಗಾಂಧೀಜಿಯವರ ಅಹಿಂಸಾತತ್ವ ಜಾರಿಗೆ ಬಂದರೆ ಇದೀಗಲೇ ಭಾರತವು ವಿಶ್ವದಲ್ಲಿ ಎತ್ತರಕ್ಕೆ ಮಟ್ಟಕ್ಕೆ ಏರಬಹುದಾಗಿದೆ. ಆ ದಿಸೆಯಲ್ಲಿ ನಾವು ಮುಂದುವರೆಯಬೇಕಾಗಿದೆ ಎಂದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಭಾರತೀಯ ಜನತಾ ಪಕ್ಷದ ರಾಷ್ಟ್ರಿಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಶರಣರ ವಚನಗಳು ಕೈದೀವಿಗೆಗಳಾಗಿವೆ. ಆಚಾರದ ಸ್ವರ್ಗ ನಿರ್ಮಿಸಬೇಕಿದೆ. ಅನಾಚಾರದ ನರಕ ನಮಗೆ ಬೇಡ.

ಶರಣರ ಕಾಯಕ ಸಿದ್ಧಾಂತ ಮತ್ತು ನಮ್ಮ ಇಂದಿನ ಪ್ರಧಾನಿಯವರ ಆತ್ಮನಿರ್ಭರ ಭಾರತ ಎರಡೂ ಒಂದೇ ಆಶಯ ಹೊಂದಿವೆ ಎಂದರು. ತೆಲಂಗಾಣ ರಾಜ್ಯದ ಹಣಕಾಸು ಸಚಿವ ಟಿ.ಹರೀಶರಾವ್ ಅನುಭವಮಂಟಪ ಉತ್ಸವ ಯಶಸ್ವಿಯಾಗಿ ನಡೆಯಲಿ ಎಂದು ತೆಲಗು ಭಾಷೆಯಲ್ಲಿ ಹಾರೈಸಿದರು. ಕರ್ನಾಟಕ ರಾಜ್ಯದ ಪಶುಸಂಗೋಪನಾ ಸಚಿವರ ಮತ್ತು ಬೀದರ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಸರ್ವರಿಗೆ ಸಮಬಾಳು, ಸಮಪಾಲು ಎಂಬ ಶರಣರ ಆಶಯ ಅನುಷ್ಠಾನದಲ್ಲಿ ತರುವಲ್ಲಿ ಭಾಲ್ಕಿ ಶ್ರೀಗಳ ಕಾರ್ಯ ಹೆಮ್ಮೆಪಡುವಂತಿದೆ ಎಂದರು.

ಜಾಗತೀಕ ಲಿಂಗಾಯತ ಮಹಾಸಭಾ ಅಧ್ಯಕ್ಷ ಬಸವರಾಜ ಧನ್ನೂರು ಪ್ರಸ್ತಾವಿಕವಾಗಿ ಮಾತನಾಡಿದರು. ಭಾರತೀಯ ಬಸವ ಬಳಗದ ಬೀದರ ಜಿಲ್ಲಾಧ್ಯಕ್ಷ ಬಾಬು ವಾಲಿ ಸ್ವಾಗತಿಸಿದರು. ಶಿವಕುಮಾರ ಪಾಂಚಾಳ ಮತ್ತು ಸಂಗಡಿಗರಿಂದ ವಚನ ಸಂಗೀತ ನಡೆಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here