ವಿವಿಧ ಬೇಡಿಕೆಗಳನ್ನು ಒದಗಿಸಬೇಕೆಂದು ಒತ್ತಾಯಿಸಿ ಕನಕದಾಸ ಜಾಗೃತಿ ಸಮಿತಿಯಿಂದ ಶಾಸಕರಿಗೆ ಮನವಿ

0
247

ಶಹಾಬಾದ:ಹಳೆಶಹಾಬಾದನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ, ಗ್ರಂಥಾಲಯ, ಶಾಲಾ ಕಟ್ಟಡಕ್ಕೆ ಹೆಚ್ಚುವರಿ ಅನುದಾನ ನೀಡಲು ಹಾಗೂ ಶೌಚಾಲಯಗಳನ್ನು ಸಾರ್ವಜನಿಕ ಲಭ್ಯವಾಗುವಂತೆ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿ ಕನಕದಾಸ ಜಾಗೃತಿ ಸಮಿತಿಯಿಂದ ಶಾಸಕ ಬಸವರಾಜ ಮತ್ತಿಮಡು ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕನಕದಾಸ ಜಾಗೃತಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಪೂಜಾರಿ, ಹಳೆ ಶಹಾಬಾದನಲ್ಲಿ ಸುಮಾರು ಹತ್ತು ಸಾವಿರ ಜನಸಂಖ್ಯೆಯನ್ನು ಹೊಂದಿದೆ.ಇಲ್ಲಿನ ಜನರಿಗೆ ಆರೋಗ್ಯ ಸಮಸ್ಯೆ ಉಂಟಾದರೆ ಸುಮಾರು 3ಕಿಮೀ ದೂರದಲ್ಲಿರುವ ಸಮುದಾಯ ಆರೋಗ್ಯ ಕೇಂದ್ರಕ್ಕೆ ಹೋಗಬೇಕಾದ ಪರಿಸ್ಥಿತಿಯಿದೆ.ಗ್ರಾಮದ ಹಿರಿಯ ಜೀವಿಗಳು, ಕೂಲಿ ಕಾಂರ್ಇಕರು, ಗಣಿ ಕಾಮರ್ಿಕರು ಅತ್ಯಂತ ಬಡವರಾಗಿದ್ದು, ಸಣ್ಣ ಪುಟ್ಟ ಕಾಯಿಲೆಗೆ ದೂರದವರೆಗೆ ಹೋಗಲು ತೊಂದರೆಯಾಗುತ್ತಿದೆ.ಕೂಡಲೇ ಪ್ರಾಥಮಿಕ ಆರೋಗ್ಯ ಕೇಂದ್ರ ತೆರೆಯಬೇಕು ಎಂದು ಒತ್ತಾಯಿಸಿದರು.

Contact Your\'s Advertisement; 9902492681

ಅಲ್ಲದೇ ಇಲ್ಲಿನ ಜನರಿಗೆ ಗ್ರಂಥಾಲಯ ಒದಗಿಸಬೇಕು.ಈಗಾಗಲೇ ಶಾಲಾ ಕಟ್ಟಡ ನಿರ್ಮಾಣವಾಗುತ್ತಿದ್ದು, ಅದರಲ್ಲಿ ಕೇವಲ ನಾಲ್ಕು ಕೋಣೆಗಳು ಮಾತ್ರ ಇವೆ. ಈ ಕೋಣೆಗಳು ಸಾಕಾಗುವುದಿಲ್ಲ. ಆದ್ದರಿಂದ ಹೆಚ್ಚುವರಿಯಾಗಿ ಇನ್ನೂ ಆರು ಕೋಣೆಗಳ ಅವಶ್ಯಕತೆ ಇರುವುದರಿಂದ ಹೆಚ್ಚುವರಿ ಅನುದಾನ ನೀಡಬೇಕು.ಅಲ್ಲದೇ ನಾಲ್ಕು ವಾರ್ಡಗಳಲ್ಲಿ ನಗರಸಭೆಯಿಂದ ಶೌಚಾಲಯಗಳನ್ನು ನಿಮರ್ಿಸಲಾಗಿದೆ.ಆದರೆ ಎರಡು ವರ್ಷ ಗತಿಸಿದರೂ ಇನ್ನೂ ಸಾರ್ವಜನಿಕರ ಬಳಕೆಗೆ ಅವಕಾಶ ಮಾಡಿಕೊಟ್ಟಿಲ್ಲ.ಅಲ್ಲದೇಕೆಲವೊಂದಕ್ಕೆ ನೀರಿನ ವ್ಯವಸ್ಥೆ ಮಾಡಿದರೇ, ಇನ್ನೂ ಕೆಲವೊಂದಕ್ಕೆ ನೀರಿನ ವ್ಯವಸ್ಥೆಯೂ ಮಾಡಿಲ್ಲ.ಕೂಡಲೇ ಸಾರ್ವಜನಿಕರಿಗೆ ಬಳಕೆ ಮಾಡಲು ಅನುಕೂಲ ಮಾಡಿಕೊಡುವತ್ತ ಅಧಿಕಾರಿಗಳಿಗೆ ತಾಕೀತು ಮಾಡಬೇಕೆಂದು ಒತ್ತಾಯಿಸಿದರು.

ಆಶ್ರಯ ಸಮಿತಿ ಸದಸ್ಯ ಶಿವುಗೌಡ ಪಾಟೀಲ,ಸಂಗೊಳ್ಳಿ ರಾಯಣ್ಣ ಜಿಲ್ಲಾಧ್ಯಕ್ಷ ಬಸವರಾಜ ಮದ್ರಕಿ,ರಮೇಶ ಜೋಗದನಕರ್,ಕುರುಬ ಸಮಾಜದ ತಾಲೂಕಾಧ್ಯಕ್ಷ ಮಲ್ಕಣ್ಣ ಮುದ್ದಾ, ನಗರಸಭೆಯ ಸದಸ್ಯ ಮಂಜುನಾಥ ಪೂಜಾರಿ,ಕನಕಪ್ಪ ದಂಡಗುಲಕರ್, ನಾಗನಗೌಡ ಪಾಟೀಲ, ಸುಭಾಷ ಸಾಕ್ರೆ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here