ರೈತರ ಹೋರಾಟ ಬೆಂಬಲಿಸಿ ರಿಪಬ್ಲಿಕನ್ ಯೂತ್ ಫೆಡರೇಷನ್ ಪ್ರತಿಭಟನೆ

0
22

ಕಲಬುರಗಿ : ದೇಶದ ರಾಜಧಾನಿ ದೆಹಲಿಯಲ್ಲಿ ಕೇಂದ್ರ ಸರ್ಕಾರದ ಮಾರಕ ತಿದ್ದುಪಡಿ ಕಾಯ್ದೆಗಳ ಜಾರಿ ವಿರೋಧಿಸಿ ರೈತರು ಕರೆ ನೀಡಿರುವ ಭಾರತ್ ಬಂದ್‌ಗೆ ಬೆಂಬಲಿಸಿ ಮಂಗಳವಾರ ಜಿಲ್ಲಾಧಿಕಾರಿ ಕಛೇರಿ ಮುಂದೆ ರಿಪಬ್ಲಿಕನ್ ಯೂತ್ ಫೆಡರೇಷನ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಸಂಘಟನೆ ಸಂಸ್ಥಾಪ ಅಧ್ಯಕ್ಷ ಹಣಮಂತ ಇಟಗಿ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಗೌರವ ಅಧ್ಯಕ್ಷ ಸಂತೋಷ ಮೇಲ್ಮನಿ, ನಗರಾಧ್ಯಕ್ಷ ಶಿವಕುಮಾರ ಜಾಲವಾದ, ಸತೀಶ ಮಾಲೆ, ರಾಣು ಮುದ್ದನಕರ್, ವಿಜಯಕುಮಾರ ಸಿಂಧೆ, ಅಜಯ ಕೊರಳ್ಳಿ, ಮಲ್ಲಿಕಾರ್ಜುನ ಹೊಸಮನಿ, ಲಕ್ಷ್ಮಿಕಾಂತ ಬಾಲಾಜಿ, ಸಂಜು ಸಂಕನ್ ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು.

Contact Your\'s Advertisement; 9902492681

ಪ್ರತಿಭಟನೆಕಾರರು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ, ದೆಹಲಿ ಚಲೋ ಪ್ರತಿಭಟನೆಯಲ್ಲಿ ಸುಮಾರು ೩ ಲಕ್ಷ ರೈತರು ಭಾಗವಹಿಸಿದ್ದಾರೆ. ಅವರಿಗೆ ತಡೆದು ಅವರ ಮೇಲೆ ದೌರ್ಜನ್ಯ ನಡೆಸುವ ಮೂಲಕ ಚಳುವಳಿಯನ್ನು ಕೇಂದ್ರ ಸರ್ಕಾರವು ಹತ್ತಿಕ್ಕಲು ಯತ್ನಿಸಿತು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ರೈತ ಹೋರಾಟದ ನಾಯಕತ್ವದಲ್ಲಿ ಒಡಕು ತರಲು ಹಾಗೂ ಐತಿಹಾಸಿಕ ರೈತ ಹೋರಾಟವನ್ನು ದಮನಿಸಲು ಅಪಪ್ರಚಾರಗಳ ಮೂಲಕ ಜನತೆಗೆ ತಪ್ಪು ಮಾಹಿತಿಯನ್ನು ನೀಡುತ್ತಿದೆ ಎಂದು ಅವರು ದೂರಿದರು.

ಕಾರ್ಪೊರೇಟ್ ಪರ ಮೂರು ಕೃಷಿ ಕಾಯ್ದೆಗಳನ್ನು ಹಾಗೂ ವಿದ್ಯುಚ್ಛಕ್ತಿ ಮಸೂದೆಯನ್ನು ರದ್ದುಗೊಳಿಸುವ ಬೇಡಿಕೆಯಲ್ಲಿ ಯಾವುದೇ ಸಂಧಾನ ಇಲ್ಲ ಮತ್ತು ಈ ಕೂಡಲೇ ಬೇಡಿಕೆಯನ್ನು ಈಡೇರಿಸಿ ರೈತ ಹೋರಾಟವನ್ನು ಗೌರವಿಸಬೇಕೆಂದು ಅವರು ಆಗ್ರಹಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here