ವಾಡಿ: ಒಳಚರಂಡಿ-ಕೆರೆ ನಿರ್ಮಾಣಕ್ಕೆ ಖರ್ಗೆಗೆ ಮನವಿ

0
41

ವಾಡಿ: ಪಟ್ಟಣದ ಪುರಸಭೆ ವ್ಯಾಪ್ತಿಯ ಬಡಾವಣೆಗಳನ್ನು ಜಲ ಪ್ರವಾಹ ಸಂಕಷ್ಟದಿಂದ ರಕ್ಷಿಸಲು ಒಳಚರಂಡಿ ಹಾಗೂ ನಗರದ ನಾಲಿಗಳ ಅನುಪಯುಕ್ತ ನೀರು ಸಂಗ್ರಹಕ್ಕಾಗಿ ಕೆರೆ ನಿರ್ಮಾಣ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಕಾಂಗ್ರೆಸ್ ಮುಖಂಡ, ಕೋಲಿ ಸಮಾಜದ ಅಧ್ಯಕ್ಷ ನಾಗೇಂದ್ರ ಜೈಗಂಗಾ ಶಾಸಕ ಪ್ರಿಯಾಂಕ್ ಖರ್ಗೆ ಅವರಿಗೆ ಮನವಿ ಮಾಡಿದ್ದಾರೆ.

ಈ ಕುರಿತು ಶಾಸಕ ಖರ್ಗೆ ಅವರನ್ನು ಭೇಟಿ ಮಾಡಿ ನಗರದ ಪ್ರಗತಿಗಾಗಿ ಮಾತುಕತೆ ನಡೆಸುವ ಮೂಲಕ ಹತ್ತಾರು ಬೇಡಿಕೆಗಳುಳ್ಳ ಮನವಿ ಪತ್ರ ಸಲ್ಲಿಸಿರುವ ನಾಗೇಂದ್ರ ಜೈಗಂಗಾ, ಚಿತ್ತಾಪುರ ಮತಕ್ಷೇತ್ರ ವ್ಯಾಪ್ತಿಯಲ್ಲಿ ದೊಡ್ಡ ಪಟ್ಟಣವಾಗಿರುವ ವಾಡಿ ನಗರದಲ್ಲಿ ೨೩ ವಾರ್ಡ್‌ಗಳಿವೆ. ಸುಮಾರು ಐವತ್ತು ಸಾವಿರ ಜನಸಂಖ್ಯೆಯಿದೆ. ಕೈಗಾರಿಕೆ ದೃಷ್ಠಿಕೋನದಿಂದ ನಗರ ದಿನೇದಿನೆ ಬೆಳೆಯುತ್ತಿದೆ. ಇದರ ಜತೆಗೆ ನಾಗರಿಕರ ಬೇಡಿಕೆಗಳೂ ಸಹ ಬೆಳೆಯುತ್ತಿವೆ. ಅನೇಕ ಅಗತ್ಯ ಸರಕಾರಿ ಸೌಲಭ್ಯಗಳಿಂದ ನಗರ ನಲುಗುತ್ತಿದ್ದು, ಜನತೆಯ ಕೊರತೆಗಳನ್ನು ನೀಗಿಸಬೇಕು ಎಂದು ಅವರು ಕೋರಿದ್ದಾರೆ.

Contact Your\'s Advertisement; 9902492681

ಒಳಚರಂಡಿ ಸೌಲಭ್ಯ ಇಲ್ಲದ ಕಾರಣ ಇತ್ತೀಚೆಗೆ ಸುರಿದ ಮಳೆಯಿಂದ ಹಲವು ವಾರ್ಡ್‌ಗಳು ಜಲಾವೃತಗೊಂಡು ಬಡ ಕುಟುಂಬಗಳು ಆಸರೆಗೆ ಪರಿತಪಿಸುತ್ತ ತೀವ್ರ ತೊಂದರೆ ಅನುಭವಿಸಿದರು. ಅವೈಜ್ಞಾನಿಕ ಚರಂಡಿಗಳಿಂದ ಜಲ ಗಂಡಾಂತರ ಸೃಷ್ಠಿಯಾಗುತ್ತಿದೆ. ಕೂಡಲೇ ಒಳಚರಂಡಿ ಹಾಗೂ ನಗರದ ಹೊರ ವಲಯದಲ್ಲಿ ಕರೆ ನಿರ್ಮಿಸಬೇಕು.

ಪ್ರಯಾಣಿಕರ ಹಿತದೃಷ್ಠಿಯಿಂದ ಬಸ್ ನಿಲ್ದಾಣ ಸೌಲಭ್ಯ ಅತ್ಯಗತ್ಯವಾಗಿದೆ. ಇಂಗಳಗಿ ಗ್ರಾಮ ಸಮೀಪದ ಕಾಗಿಣಾ ನದಿಯಲ್ಲಿರುವ ಎಸಿಸಿ ಜಾಕವೆಲ್ ಹತ್ತಿರ ಪುರಸಭೆಗೆ ಸೇರಿದ ಹೊಸ ಜಾಕವೆಲ್ ನಿರ್ಮಿಸಿದರೆ ಶಾಸ್ವತ ಕುಡಿಯುವ ನೀರಿನ ಸೌಲಭ್ಯ ಒದಗಿಸಿದಂತಾಗುತ್ತದೆ. ನೆಮ್ಮದಿ ಕೇಂದ್ರ, ಗ್ರಾಮ ಲೆಕ್ಕಾಧಿಕಾರಿ ಕಚೇರಿ, ಪುರಸಭೆಗೆ ಹೊಸ ಕಟ್ಟಡ, ಗ್ರಂಥಾಲಯ, ಸಾರ್ವಜನಿಕ ಉದ್ಯಾನವನ, ಆಟದ ಮೈದಾನ, ಸುಲಭ ಶೌಚಾಲಯ ಸೇರಿದಂತೆ ವಿವಿಧ ನಾಗರಿಕ ಸೌಲಭ್ಯಗಳ ಕೊರತೆ ವಾಡಿ ನಗರಕ್ಕೆ ಹಲವು ವರ್ಷಗಳಿಂದ ಕಾಡುತ್ತಿವೆ ಎಂದು ಶಾಸಕರ ಗಮನ ಸೆಳೆದಿರುವ ನಾಗೇಂದ್ರ ಜೈಗಂಗಾ, ಪ್ರಗತಿಯ ದೃಷ್ಠಿಕೋನ ಹೊಂದಿರುವ ತಾವು ವಿಶೇಷ ಅನುದಾನ ಒದಗಿಸುವ ಮೂಲಕ ವಾಡಿ ನಗರವನ್ನು ಅಭಿವೃದ್ಧಿ ಪಥದತ್ತ ಮುನ್ನಡೆಸಬೇಕು ಎಂದು ಮನವಿ ಮಾಡಿದ್ದಾರೆ. ಕೋಲಿ ಸಮಾಜದ ಕಾರ್ಯದರ್ಶಿ ಬಾಬು ಕುಡಿ ಈ ಸಂದರ್ಭದಲ್ಲಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here