ಕಲ್ಯಾಣ ಕರ್ನಾಟಕದ ರಚನಾತ್ಮಕ ಪ್ರಗತಿಗೆ ಒತ್ತಾಯಿಸಿ ಬಸವರಾಜ ಪಾಟೀಲ ಸೇಡಂ ಅವರಿಗೆಪ್ರಸ್ತಾವನೆ ಸಲ್ಲಿಕೆ

0
93

ಕಲಬುರಗಿ: ಹೈದ್ರಾಬಾದ ಕರ್ನಾಟಕ ಜನಪರ ಸಂಘರ್ಷ ಸಮಿತಿಯ ನಿಯೋಗ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಲಕ್ಷಣ ದಸ್ತಿ ಅವರ ನೇತೃತ್ವದಲ್ಲಿ ಇಂದು ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಮತ್ತು ಸಾಂಸ್ಕøತಿಕ ಸಂಘದ ಅಧ್ಯಕ್ಷರಾದ ಬಸವರಾಜ ಪಾಟೀಲ ಸೇಡಂ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಕಲ್ಯಾಣ ಕರ್ನಾಟಕದ ರಚನಾತ್ಮಕ ಪ್ರಗತಿಯ ಬಗ್ಗೆ ಮತು ಆರ್ಟಿಕಲ್ 371ನೇ(ಜೆ) ಕಲಾಂ ಅನುಷ್ಠಾನದ ಕುರಿತು ಚರ್ಚಿಸಿ ಪ್ರಸ್ತಾವನೆ ಸಲ್ಲಿಸಲಾಯಿತು.

ಹೈದ್ರಾಬಾದ ಕರ್ನಾಟಕ ಜನಪರ ಸಂಘರ್ಷ ಸಮಿತಿಯ ನಿಯೋಗದಿಂದ ಸಂಘದ ಅಧ್ಯಕ್ಷರಿಗೆ ಒಟ್ಟು 371 ಜೆ ಕಲಾಂಗೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಒಟ್ಟು 7 ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಂಘದ ಅಧ್ಯಕ್ಷರಿಗೆ ಪ್ರಸ್ತಾವನೆ ಸಲ್ಲಿಸಿ ಆಗ್ರಹಿಸಿದರು.

Contact Your\'s Advertisement; 9902492681

ಸಮಿತಿಯ ಪ್ರಸ್ತಾವನೆಗೆ ಸಂಘದ ಅಧ್ಯಕ್ಷ ಬಸವರಾಜ ಪಾಟೀಲ ಸೇಡಂ ಸಕರಾತ್ಮಕವಾಗಿ ಸ್ಪಂದಿಸಿ ಸಂಘದ ವ್ಯಾಪ್ತಿಗೆ ಸಂಬಂಧಪಟ್ಟ ಸಲಹೆಗಳು ಮತ್ತು ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿರುವುದಲ್ಲದೆ ರಾಜ್ಯ ಮತ್ತು ಕೇಂದ್ರಸರಕಾರಕ್ಕೆ ಸಂಬಂಧಿಸಿದ ಭಾಗದ ನ್ಯಾಯ ಸಮ್ಮತ ಬೇಡಿಕೆಗಳ ಈಡೇರಿಕೆಗೆ ಸಮಿತಿ ಕೋರಿರುವಂತೆ ಒತ್ತಡ ತರುವ ಎಲ್ಲಾ ಪ್ರಯತ್ನಗಳು
ಮಾಡುವುದಾಗಿ ಭರವಸೆ ನೀಡಿದ್ದಾರೆ ಎಂದು ಸಮಿತಿಯ ಅಧ್ಯಕ್ಷ ಲಕ್ಷ್ಮಣ ದಸ್ತಿ ಅವರು ತಿಳಿಸಿದ್ದಾರೆ.

371ನೇ (ಜೆ)ಯಲ್ಲಿನ ದ್ವಂದ್ವ ಅರ್ಥದ ವಿಷಯಗಳ ನಿವಾರಣೆಯ ಬಗ್ಗೆ ಮತ್ತುನಿಯಮಗಳಲ್ಲಿ ಅನುಷ್ಠಾನಕ್ಕೆ ಆಗುತ್ತಿರುವ ದೋಷಗಳ ಬಗ್ಗೆ ಸರಿಪಡಿಸಲು ಮತ್ತು 371ನೇ(ಜೆ)ಕಲಂ ನಿಯಮದಲ್ಲಿ ಉಲ್ಲೇಖಿಸಿರುವಂತೆ ಕಲ್ಯಾಣ ಕರ್ನಾಟಕ ಭಾಗಕ್ಕೆ ಅನುಕೂಲವಾಗುವ ರೀತಿಯಲ್ಲಿ ಹೊಸ ನಿಯಮಾವಳಿಗಳನ್ನು ರಚಿಸಿ ಸರಕಾರದ ಅನುಮೋದನೆಯ ಮೇರೆಗೆ ಪರಿಣಾಮಕಾರಿ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳುವ ಬಗ್ಗೆ ಪ್ರಸ್ತಾವನೆ ಸಲ್ಲಿಸಿ ವಿವರಿಸಲಾಯಿತು.

371ನೇ(ಜೆ) ಪರಿಣಾಮಕಾರಿ ಅನುಷ್ಟಾನಕ್ಕೆ ಹೊಸ ನಿಯಮಗಳ ಕರಡು ಸಿದ್ಧಪಡಿಸಲುಕಲ್ಯಾಣ ಕರ್ನಾಟಕದ ಪರಿಣಿತ 3-4 ಹೋರಾಟಗಾರರನ್ನೊಳಗೊಂಡು ಕಾನೂನು ಮತ್ತುಡಿ.ಸಿ.ಎ.ಆರ್.ಕಾರ್ಯದರ್ಶಿಗಳನ್ನು ಸೇರಿಸಿ ಕರಡು ಸಮಿತಿಯನ್ನು ರಚಿಸಿ ಹೊಸ ನಿಯಮಗಳ ಕರಡು ಕಾಲಮಿತಿಯಲ್ಲಿ ರಚಿಸಲು ಸರಕಾರದಿಂದ ಅನುಮೋದನೆ ಪಡೆಯಲು ಪ್ರಸ್ತಾವನೆ
ಸಲ್ಲಿಸಲಾಯಿತು.

371ನೇ (ಜೆ)ಕಲಾಂ ನಡಿ ಪ್ರತ್ಯೇಕ ಸಚಿವಾಲಯ ಸ್ಥಾಪನೆ,ವಿಶೇಷ ಕೋಶ ಕಚೇರಿಯ ಪ್ರಾದೇಶಿಕ ಕಚೇರಿ ಕಲಬುರಗಿಯಲ್ಲಿ ಸ್ಥಾಪನೆ ಮಾಡಲು ಪ್ರಸ್ತಾವನೆ ಸಲ್ಲಿಸಿ ವಿವರಿಸಲಾಯಿತು.

371ನೇ(ಜೆ) ಕಲಂ ಖಂಡಿಕೆ 12, 13 ರಂತೆ ಸಂಬಂಧಿಸಿದ ಎಲ್ಲಾ ಕಚೇರಿಗಳುವಿಭಾಗಿಯ ಕೇಂದ್ರ ಕಲಬುರಗಿಯಲ್ಲಿ ಸ್ಥಳಾಂತರ ಮಾಡಲು, ಕಲ್ಯಾಣ ಕರ್ನಾಟಕೇತರ ಪ್ರದೇಶದಲ್ಲಿ ನೀಡಬೇಕಾದ ಮೀಸಲಾತಿ ಕಟ್ಟುನಿಟ್ಟಾಗಿನೀಡಲು ಆದೇಶಿಸಿರುವಂತೆ ತಕ್ಷಣ ಕ್ರಮ ಜರುಗಿಸಲು ಹಾಗೂ ಕಲಬುರಗಿಯ ರೈಲ್ವೆ ವಿಭಾಗಿಯ ಕಚೇರಿ, ಏಮ್ಸ್, ನೀಮ್ಝ್ ಸೇರಿದಂತೆ ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಕೇಂದ್ರದ ಮೇಲೆ ಒತ್ತಡ ತರಲುಮನವರಿಕೆ ಮಾಡಲಾಯಿತು.

ಮನೀಷ್ ಜಾಜು, ಪ್ರೊ. ಬಸವರಾಝ್ ಕುಮನೂರ, ಪ್ರೊ. ಸಂಗೀತಾ ಕಟ್ಟಿ, ಲಿಂಗರಾಜ ಸಿರಗಾಪೂರ, ಶಿವಲಿಂಗಪ್ಪ ಭಂಡಕ್, ಅಶೋಕ ಗುರುಜೀ, ಅದಿನಾಥ ಹೀರಾ, ಭದ್ರಶೆಟ್ಟಿ ಚಂದ್ರಶೇಕರ್, ಸೇರಿದಂತೆ ಅನೇಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here