ಕಲಬುರಗಿ: ಕಲಬುರಗಿ ಭ್ರಷ್ಟಾಚಾರ ನಿಗ್ರಹ ದಳ ಪೊಲೀಸ್ ಠಾಣೆಯ ಅಧಿಕಾರಿಗಳು 2021ರ ಜನವರಿ ತಿಂಗಳಲ್ಲಿ ಕಲಬುರಗಿ ಜಿಲ್ಲೆಯ ಕೆಳಕಂಡ ತಾಲೂಕುಗಳಿಗೆ ಭೇಟಿ ನೀಡಿ ಜನಸಂಪರ್ಕ ಸಭೆ ನಡೆಸಲಿದ್ದಾರೆ ಎಂದು ಕಲಬುರಗಿ ಭ್ರಷ್ಟಾಚಾರ ನಿಗ್ರಹ ದಳ ಪೊಲೀಸ್ ಠಾಣೆಯ ಆರಕ್ಷಕ ಉಪಾಧೀಕ್ಷಕರಾದ ವಿರೇಶ ಅವರು ತಿಳಿಸಿದ್ದಾರೆ.
ಪೊಲೀಸ್ ಇನ್ಸ್‍ಪೆಕ್ಟರ್ ಮಹ್ಮದ ಇಸ್ಮಾಯಿಲ್ (ಮೊಬೈಲ್ ಸಂಖ್ಯೆ 9480806309) ಜನವರಿ 15 ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಚಿತ್ತಾಪುರ ಪ್ರವಾಸಿ ಮಂದಿರ, ಅಂದು ಮಧ್ಯಾಹ್ನ 3 ರಿಂದ ಸಂಜೆ 5.30 ಗಂಟೆಯವರೆಗೆ ಶಹಾಬಾದ ಪ್ರವಾಸಿ ಮಂದಿರ ಹಾಗೂ ಜನವರಿ 18 ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 4 ಗಂಟೆಯವರೆಗೆ ಅಫಜಲಪುರ ಪ್ರವಾಸಿ ಮಂದಿರದಲ್ಲಿ ಜನಸಂಪರ್ಕ ಸಭೆ ನಡೆಸಲಿದ್ದಾರೆ.
ಪೊಲೀಸ್ ಇನ್ಸ್‍ಪೆಕ್ಟರ್ ರಾಘವೇಂದ್ರ (ಮೊಬೈಲ್ ಸಂಖ್ಯೆ 9480806310) ಅವರು ಜನವರಿ 15 ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಜೇವರ್ಗಿ ಪ್ರವಾಸಿ ಮಂದಿರ, ಅಂದು ಮಧ್ಯಾಹ್ನ 3 ರಿಂದ ಸಂಜೆ 5.30 ಗಂಟೆಯವರೆಗೆ ಯಡ್ರಾಮಿ ಪ್ರವಾಸಿ ಮಂದಿರ, ಜನವರಿ 16ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಚಿಂಚೋಳಿ ಪ್ರವಾಸಿ ಮಂದಿರ, ಅಂದು ಮಧ್ಯಾಹ್ನ 3 ರಿಂದ ಸಂಜೆ 5 ಗಂಟೆಯವರೆಗೆ ಕಾಳಗಿ ಪ್ರವಾಸಿ ಮಂದಿರ ಹಾಗೂ ಜನವರಿ 19 ರಂದು ಬೆಳಿಗ್ಗೆ 11 ರಂದು ಸಂಜೆ 4 ಗಂಟೆಯವರೆಗೆ ಕಮಲಾಪುರ ಪಂಚಾಯತ್ ಕಚೇರಿಯಲ್ಲಿ ಜನಸಂಪರ್ಕ ಸಭೆ ನಡೆಸಲಿದ್ದಾರೆ.
ಪೊಲೀಸ್ ಠಾಣೆಯ ಡಿ.ಎಸ್.ಪಿ.ಯವರಾದ ವಿರೇಶ (ಮೊಬೈಲ್ ಸಂಖ್ಯೆ 9480806240) ಅವರು ಜನವರಿ 16 ರಂದು ಬೆಳಿಗ್ಗೆ 11 ರಿಂದ ಸಂಜೆ 4 ಗಂಟೆಯರೆಗೆ ಸೇಡಂ ಪ್ರವಾಸಿ ಮಂದಿರ ಹಾಗೂ ಜನವರಿ 18 ರಂದು ಬೆಳಿಗ್ಗೆ 11 ರಿಂದ ಸಂಜೆ 4 ಗಂಟೆಯವರೆಗೆ ಆಳಂದ ಪ್ರವಾಸಿ ಮಂದಿರದಲ್ಲಿ ಜನಸಂಪರ್ಕ ಸಭೆ ನಡೆಸಲಿದ್ದಾರೆ.