ಆಳಂದ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರನೊಬ್ಬ ನಡೆಸಿದ ಆತ್ಮಾಹುತಿ ದಾಳಿಯಲ್ಲಿ ಹುತಾತ್ಮರಾದ 40 ಯೋಧರಿಗೆ ಆಳಂದ ತಾಲ್ಲೂಕಿನ ನಿಂಬರ್ಗಾ ಗ್ರಾಮದ ಶ್ರೀ ಶರಣಬಸವೇಶ್ವರ ದೇವಸ್ಥಾನ ಆವರಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಶ್ರೀ ಶರಣಬಸವೇಶ್ವರ ನವ ತರುಣ ಕಮಿಟಿ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಮೊದಲಿಗೆ ಹುತಾತ್ಮರಾದ ಯೋಧರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮೌನಾಚಾರಣೆ ಆಚರಿಸಿ ವೀರ ಯೋಧರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸಿದರು. ಗಡಿಯಲ್ಲಿ ಕಾವಲು ಕಾಯುವ ಯೋಧರು ಕರ್ಣನ ಕವಚ ಕುಂಡಲವಿದ್ದಂತೆ. ಭಯೋತ್ಪಾದಕರು ಇಂತಹ ಕವಚ ಕುಂಡಲಗಳಿಗೆ ದಕ್ಕೆ ಉಂಟುಮಾಡುವ ರೀತಿಯಲ್ಲಿ ಧಾಳಿ ಮಾಡುತ್ತಿದ್ದಾರೆ. ಇದು ಖಂಡನೀಯ.
ಸೈನಿಕರು ದಿನ ರಾತ್ರಿ ಗಡಿ ಕಾಯುವುದರಿಂದ ದೇಶದ ಜನರೆಲ್ಲರೂ ಶಾಂತಿ ಮತ್ತು ನೆಮ್ಮದಿಯಿಂದ ಮಲಗಲು ಸಾಧ್ಯ. ಉಗ್ರರ ಇಂತಹ ಅಮಾನವೀಯ ಕೃತ್ಯಗಳು ಖಂಡನೀಯ ಎಂದು ನಿಂಬರ್ಗಾ ವಲಯದ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಬಸವರಾಜ ಯಳಸಂಗಿ ಅಭಿಪ್ರಾಯ ಪಟ್ಟರು.
ಈ ಸಂದರ್ಭದಲ್ಲಿ ಶ್ರೀಶೈಲ ನಿಗಶೆಟ್ಟಿ, ಮಡಿವಾಳಪ್ಪ ಮಡಿವಾಳ,ಈರಣ್ಣ ಶರಣ, ಕ್ಷೇಮಲಿಂಗ ಕಂಭಾರ, ಭಾಗ್ಯವಂತ ನಿಗಶೆಟ್ಟಿ, ಸಚಿನ ಶೀಲವಂತ,ರಾಜು ಮಡಿವಾಳ, ಶಿವಮೂರ್ತಿ ಬಣಗಾರ, ಪರಮಾನಂದ ಎಮ್ಮಿ,ಅನಿಲ್ ಮಠಪತಿ,ವಿನೋದ್ ಕುಮಾರ್ ಗಣೇಚಾರಿ ಸೇರಿದಂತೆ ಅನೇಕರು ಶ್ರದ್ಧಾಂಜಲಿ ಸಲ್ಲಿಸಿದರು