ಆರೋಗ್ಯ ಇದ್ದರೇ ಮಾತ್ರ ನೆಮ್ಮದಿ ಬದುಕು ನಡೆಸಬಹುದು: ಸುರೇಶ ವರ್ಮಾ

2
70

ಶಹಾಬಾದ: ಮನುಷ್ಯನಿಗೆ ಆರೋಗ್ಯ ಮುಖ್ಯ.ವ್ಯಕ್ತಿ ದೈಹಿಕವಾಗಿ ಆರೋಗ್ಯದಿಂದ ಇದ್ದರೇ ಆತ ಎಲ್ಲಾ ರೀತಿಯಲ್ಲೂ ಸುಖಿ, ನೆಮ್ಮದಿಯ ಬದುಕನ್ನು ನಡೆಸಬಲ್ಲ ಎಂದು ತಹಸೀಲ್ದಾರ ಸುರೇಶ ವರ್ಮಾ ಹೇಳಿದರು.

ಅವರು ನಗರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಲಬುರಗಿ ಹಾಗೂ ಸಮುದಾಯ ಆರೋಗ್ಯ ಕೇಂದ್ರ ಶಹಾಬಾದ ಸಂಯುಕ್ತಾಶ್ರಯದಲ್ಲಿ ಉಚಿತ ದಂತ ಆರೋಗ್ಯ ಚಿಕಿತ್ಸಾ ಶಿಬಿರ ಹಾಗೂ ಆನೆಕಾಲು ರೋಗದ ಕುರಿತು ಆಯೋಜಿಸಲಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

Contact Your\'s Advertisement; 9902492681

ಮನು?ನ ಜೀವನದಲ್ಲಿ ಆರೋಗ್ಯ ಬಹಳ ಮಹತ್ವ ಪಡೆದುಕೊಂಡಿದೆ. ಸ್ವಾಸ್ಥ್ಯ ದೇಶ ನಿರ್ಮಾಣ ಮಾಡಬೇಕಾದರೇ ಆರೋಗ್ಯ ಪಾತ್ರ ಬಹಳ ಮುಖ್ಯ ವಾಗಿದೆ ಸರ್ಕಾರ ನೀಡುವ  ಮತ್ತು ಆರೋಗ್ಯ ಇಲಾಖೆ ನೀಡುವ ಸೇವೆಗಳ ಸದುಪಯೋಗ ಪಡಿಸಿಕೊಳ್ಳಬೇಕು.ಅಲ್ಲದೇ ಬಡವರು, ದೀನ ದಲಿತರು ಬಂದರೆ ವೈದ್ಯರು ಅವರನ್ನು ಪ್ರೀತಿಯಿಂದ ಕಂಡು ಚಿಕಿತ್ಸೆ ನೀಡಬೇಕೆಂದು ತಿಳಿಸಿದರು.

ಕಲಬುರಗಿ: ಬಾವಿಗೆ ಬಿದ್ದು ರೈತ ಆತ್ಮಹತ್ಯೆ

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನಗರಸಭೆಯ ಅಧ್ಯಕ್ಷೆ ಅಂಜಲಿ ಗಿರೀಶ ಕಂಬಾನೂರ, ಸರ್ಕಾರದ ಕಾರ್ಯಕ್ರಮಗಳು ಕಟ್ಟ ಕಡೆಯ ಜನರಿಗೆ ಮುಟ್ಟುವಂತೆ ಶ್ರಮವಹಿಸಿ ಕೆಲಸಗಳನ್ನು ಮಾಡಬೇಕು. ಆರೋಗ್ಯ ದೃಷ್ಟಿಯಿಂದ ಎಲ್ಲರೂ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆಯಬೇಕು ಎಂದು ಹೇಳಿದರು.

ಚಿತ್ತಾಪೂರ ತಾಲೂಕಾ ಆರೋಗ್ಯ ಅಧಿಕಾರಿ ಡಾ.ಸುರೇಶ್ ಮೇಕಿನ್ ಮಾತನಾಡಿ,ಆರೋಗ್ಯ ಭಾಗ್ಯಗಳಲ್ಲಿ ದಂತ ಆರೋಗ್ಯ ಕೂಡ ಬಹಳ ಮಹತ್ವ ಪಡೆದುಕೊಂಡಿದೆ .ಬಾಯಿ ಆರೊಗ್ಯ ಹಲ್ಲುಗಳ ಸ್ವಚ್ಚತೆ ಬಗ್ಗೆ ವಿವವರವಾಗಿ  ನಾಗರಿಕರಿಗೆ ಅರಿವು ಮೂಡಿಸಬೇಕೆಂದು ತಿಳಿಸಿದರು.

ವಾಡಿ: ಹಾವು ಕಡಿದು ಬಾಲಕ ಸಾವು

ಡಾ.ಸಂದ್ಯಾ ಕಾನೇಕರ್ ಮಾತನಾಡಿ, ಆರೋಗ್ಯ ಶಿಬಿರದ ಪರಿಚಯ ಮತ್ತು ಕಾರ್ಯಕ್ರಮದ ಗುರಿ ಉದ್ದೇಶಗಳನ್ನು ತಿಳಿಸಿದರು.  ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಡಾ ಮಹಮ್ಮದ್ ಅಬ್ದುಲ್ ರಹೀಮ್ ಅಧ್ಯಕ್ಷತೆ ವಹಿಸಿದ್ದರು. ಡಾ.ವೈಶಾಲಿ,ಡಾ.ಸಾವಿತ್ರಿ ಗಲಗಲಿ,ಡಾ.ಕನೀಜ್ ಫಾತಿಮಾ,ಡಾ.ತೈಮಿದಾ,ಡಾ.ರಾಜೇಶ, ಡಾ.ರಶೀದ್ ಮರ್ಚಂಟ್,ಡಾ.ಅಹ್ಮದ ಪಟೇಲ್,ಮೋಹನ್ ಕುಮಾರ ಗಾಯಕವಾಡ ಇತರರು ಇದ್ದರು. ಅಮರೇಶ ಇಟಗಿ ನಿರೂಪಿಸಿದರು, ಯುಸೂಫ್ ನಾಕೇದಾರ ಸ್ವಾಗತಿಸಿದರು, ರಾವುತರಾಯ ವಂದಿಸಿದರು.

ನಿರುದ್ಯೋಗ ಸಮಸ್ಯೆ: ಎಐಡಿವೈಒ ಸಹಿ ಸಂಗ್ರಹ 18 ರಂದು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here