ನೂತನ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷರ ಸನ್ಮಾನ

0
123

ಶಹಾಬಾದ: ನೂತನ ಗ್ರಾಪಂ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಕೂಡಿಕೊಂಡು ತಾಲೂಕಿನಲ್ಲಿಯೇ ಮಾದರಿ ಗ್ರಾಪಂಯನ್ನಾಗಿ ಮಾಡುವುದಕ್ಕೆ ಪ್ರಯತ್ನಿಸಬೇಕೆಂದು ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಹಾಗೂ ಕಲಬುರಗಿ ದಕ್ಷಿಣ ಕ್ಷೇತ್ರದ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಹೇಳಿದರು.

ಅವರು ತಾಲೂಕಿನ ಭಂಕೂರ ಗ್ರಾಮದಲ್ಲಿ ಆಯೋಜಿಸಲಾದ ನೂತನ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

Contact Your\'s Advertisement; 9902492681

ಗ್ರಾಪಂಯ ಅನುದಾನವನ್ನು ಸರಿಯಾಗಿ ಬಳಕೆ ಮಾಡುವ ಮೂಲಕ ಸಾರ್ವಜನಿಕರ ಸಮಸ್ಯೆ ಬಗೆಹರಿಸುವುದು ಗ್ರಾಪಂಯ ಅಧ್ಯಕ್ಷರ ಹಾಗೂ ಸರ್ವ ಸದಸ್ಯರ ಕರ್ತವ್ಯ. ಪಕ್ಷಬೇಧ ಮರೆತು ಎಲ್ಲರೂ ಕೂಡಿಕೊಂಡು, ಅಧಿಕಾರ ಸಹಕಾರಗಳಿಂದ ಉತ್ತಮ ಕೆಲಸಗಳನ್ನು ಮಾಡಬೇಕೆಂದು ಹೇಳಿದರಲ್ಲದೇ, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ವತಿಯಿಂದ ಭಂಕೂರ ಗ್ರಾಮದ ಮುಖ್ಯರಸ್ತೆಯನ್ನು ಅಗಲೀಕರಣಗೊಳಿಸುವುದಕ್ಕೆ ವ್ಯವಸ್ಥೆ ಮಾಡುತ್ತೆನೆ ಎಂದು ಭರವಸೆ ನೀಡಿದರು.

ಗಾಂಧಿ ಶರಣ ಹರ್ಡೇಕರ ಮಂಜಪ್ಪನವರ ಜಯಂತಿ

ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ ಮಾತನಾಡಿ, ಗ್ರಾಮಗಳಲ್ಲಿನ ರಸ್ತೆ, ಚರಂಡಿ, ಬೀದಿ ದೀಪ, ಕುಡಿಯುವ ನೀರು ಸೇರಿದಂತೆ ಸಾರ್ವಜನಿಕರಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವುದು ಚುನಾಯಿತ ಗ್ರಾಪಂ ಸದಸ್ಯರ ಆದ್ಯ ಕರ್ತವ್ಯ. ಅದನ್ನು ಸರಿಯಾಗಿ ನಿಭಾಯಿಸಿಕೊಂಡು ಹೋಗಬೇಕೆಂದು ತಿಳಿಸಿದರು.ಅಲ್ಲದೇ ವಿಧಾನ ಪರಿಷತ್ ಸದಸ್ಯರ ಅನುದಾನದಲ್ಲಿ ಗ್ರಾಮದಲ್ಲಿ ಯಾವುದಾದರೊಂದು ಕಾಮಗಾರಿಗೆ ಸುಮಾರು ೫ ಲಕ್ಷ ರೂ. ಅನುದಾನ ನೀಡುತ್ತೆನೆ ಎಂದು ಹೇಳಿದರು.

ಉಪಾಧ್ಯಕ್ಷ ಯಶ್ವಂತ ನೆಹರು, ಚನ್ನವೀರಪ್ಪ ಪಾಟೀಲ, ಶಶಿಕಾಂತ ಪಾಟೀಲ, ನೀಲಕಂಠ ಪಾಟೀಲ,ವಿಠ್ಠಲ್ ನಾಯಕ, ವಿಜಯಲಕ್ಷ್ಮಿ ಸುರೇಶ ಚವ್ಹಾಣ, ಪಿಡಿಓ ವೇದಾಂಗ ತುಪ್ಪದ್,ಅಣವೀರ ಇಂಗಿನಶೆಟ್ಟಿ,ರಜನಿಕಾಂತ ಕಂಬಾನೂರ, ಈರಣ್ಣ ಕಾರ್ಗಿಲ್, ಲಕ್ಷ್ಮಿಕಾಂತ ಕಂದಗೂಳ,ಪ್ರಕಾಶ ಪಾಟೀಲ,ಶಾಂತು ಸೌಕಾರ, ಉಮೇಶ ಪೂಜಾರಿ,ರವಿ ರಾಠೋಡ, ಅಮೃತ ಮಾನಕರ್,ಭೀಮಯ್ಯ ಗುತ್ತೆದಾರ,ನಿಂಗಣ್ಣ ಹುಳಗೋಳಕರ್, ಕನಕಪ್ಪ ದಂಡಗುಲಕರ್, ನಾಗರಾಜ ಮೇಲಗಿರಿ, ಯಲ್ಲಾಲಿಂಗ ಪೂಜಾರಿ,ಸಂತೋಷ ಕಲಶೆಟ್ಟಿ ಇತರರು ಇದ್ದರು.

ನರೋಣಾ ಪೊಲೀಸರ ಕಾರ್ಯಾಚರಣೆ: ಕಳ್ಳ ಅಣ್ಣತಮ್ಮಂದಿಬ್ಬರು ಅಂದರ್

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here