ಚಿತ್ತಾಪುರ: ಶಾಲಾ ಕಾಲೇಜು ಆರಂಭ ಆಗಿ ತಿಂಗಳೂ ಕಳೆಯುತ್ತಿದೆ. ಆದರೆ ಇಲ್ಲಿನ ರಾವೂರ ಗ್ರಾಮದಲ್ಲಿ ಪ್ರತಿ ನಿತ್ಯ ವಿದ್ಯಾರ್ಥಿಗಳು ಬಸ್ಸಿಗಾಗಿ ಪರದಾಡುವಂತಾಹ ಸ್ಥಿತಿ ನಿರ್ಮಾಣವಾಗಿದೆ.
ಇಂದು ಬೆಳಿಗ್ಗೆ ಶಾಹಬಾದನಿಂದ ಚಿತ್ತಾಪುರಕ್ಕೆ ಬರುವ ಬಸ್ಸು ಫುಲ್ ಆಗಿ ಬಂದಿದ್ದು, ಬಸ್ಸು ತುಂಬ ಲೋಡಾಗಿ ಹೋಗುವುದಿಲ್ಲ ಆದ್ದರಿಂದ ಬೇರೆ ಬಸ್ಸಿಗೇ ಬನ್ನಿ ಅಂತ, ರಾವೂರಿನಲ್ಲಿ ವಿದ್ಯಾರ್ಥಿಗಳು ಬಸ್ಸ್ ಹತ್ತುವಾಗ ಕಂಡಕ್ಟರ್ ತಡೆದಿರುವ ಪ್ರಸಂಗ ಜರುಗಿದೆ ಎಂದು ವಿದ್ಯಾರ್ಥಿಗಳು ಸಾರಿಗೆ ಇಲಾಖೆಯ ನಿರ್ಲಕ್ಷ್ಯದ ವಿರುದ್ಧ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈಸ್ ಆಫ್ ಡೂಯಿಂಗ್ ಬ್ಯೂಸಿನೆಸ್ ಅನುಷ್ಠಾನದಲ್ಲಿ ರಾಜ್ಯ ಮುಂಚೂಣಿ: ಸಚಿವ ಜಗದೀಶ ಶೆಟ್ಟರ್
ಆಗುತ್ತಿರುವ ತೊಂದರೆಗೆ ಸಂಬಂಧಿಸಿದಂತೆ ಕ್ರಾಂತಿವೀರ ಸಂಗ್ಗೋಳ್ಳಿ ರಾಯಣ್ಣ ಯುವ ಘರ್ಜನೆ ಸಂಘದ ಅಧ್ಯಕ್ಷರು ಜಗದೀಶ ಪೂಜಾರಿ ರಾವೂರ ಮತನಾಡಿ ವಿದ್ಯಾರ್ಥಿಗಳಿಗೆ ಶಾಲಾ ಕಾಲೇಜು ತೆರಳಲ್ಲಿ ಬಸ್ಸ್ ವ್ಯವಸ್ಥೆ ಇಲ್ಲದ ಕಾರಣ ತೊಂದರೆ ಅನುಭವಿಸುವಂತಹದಾಗಿದ್ದು, ವಿದ್ಯಾರ್ಥಿಗಳ ಜೊತೆ ಪ್ರತಿ ದಿನ ಇಂದು ನಡೆದಿರುವ ಘಟನೆಗಳು ಪ್ರತಿ ದಿನ ಅನುಭವಿಸುವಂತಹದಾಗಿದೆ.
ಬೆಳಿಗ್ಗೆ ಬರುವ ಬಸ್ ಬಿಟ್ಟರೆ ಬರೊದು 11 ಗಂಟೆಗೆ ಬರುತ್ತೆ ಅಷ್ಟೋತ್ತಿಗೆ ಕ್ಲಾಸ್ ಮುಗಿಯುತ್ತದೆ ಮತ್ತು ಶಿಕ್ಷಕರ ಸಿಟ್ಟಿಗೆ ಗುರಿಯಾಗುವ ಸನ್ನಿವೇಶಗಳು ಸಹ ನಡೆಯುತ್ತವೆ ಎಂದು ಅವರು ತಿಳಿಸಿದ್ದಾರೆ.
ರಾಯಗೇರಾ ಸೀಮೆಯಲ್ಲಿ ಕೋಳಿ ಪಂದ್ಯದ ಅಡ್ಡೆ ಮೇಲೆ ದಾಳಿ: 30 ಜನ ವಶಕ್ಕೆ
ಪ್ರತಿ ದಿನ ಈ ವೇಳೆಯಲ್ಲಿ ಎರಡು ಬಸ್ ಮತ್ತು ಗ್ರಾಮದಲ್ಲಿ ಬಸ್ ಸ್ಟ್ಯಾಂಡ್ ನಿರ್ಮಿಸ ಬೇಕು ಎಂದು ಇಲಾಖೆಗೆ ಆಗ್ರಹಿಸಿದ್ದಾರೆ.