ಕಲಬುರ್ಗಿ: ಗ್ರಾಮೀಣ ಜನರ ಬದುಕನ್ನು ಕಟ್ಟಿ ಕೊಡುವಲ್ಲಿ ಜನಪದ ಸಾಹಿತ್ಯ ಪ್ರಮುಖ ಪಾತ್ರ ವಹಿಸಿದೆ ಎಂದು ಸಾಹಿತಿ ಪತ್ರಕರ್ತ ದರ್ಮಣ್ಣ ರಚ್ ಧನ್ನಿ ಅವರು ಹೇಳಿದರು.
ತಾಲೂಕಿನ ಶರಣಸಿರಸಗಿ ಗ್ರಾಮದ ಶ್ರೀ ಶರಣಬಸವೇಶ್ವರ ದೇವಾಲಯದ ಆವರಣದಲ್ಲಿ ನಿಸರ್ಗ ಗ್ರಾಮೀಣಾಭಿವೃದ್ಧಿ ಸೇವಾ ಸಂಸ್ಥೆ ಹಾಗೂ ಗೌತಮ ಯುವಜನ ಸಾಂಸ್ಕೃತಿಕ ಸೇವಾ ಸಂಸ್ಥೆ ಇವುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ ಗ್ರಾಮೀಣ ಜನಪದ ಸಂಭ್ರಮ ಮತ್ತು ಪಂಚಾಯಿತಿ ಸದಸ್ಯರ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಬಿಜೆಪಿ ಪ್ರಶಿಕ್ಷಣ ವರ್ಗದ ಸಮಾರೋಪ ಸಮಾರಂಭ
ಜೀವನದ ಪ್ರತಿ ಹೆಜ್ಜೆಯಲ್ಲಿ ಜನಪದ ಸೊಗಡನ್ನು ಕಾಣಬಹುದು. ಅದನ್ನೆ ತಮ್ಮ ಉಸಿರಾಗಿಸಿ ಕೊಂಡ ಜನಪದ ಕಲಾವಿದರ ಜೀವನ ಮಟ್ಟ ಕುಸಿಯುತ್ತಿದೆ. ಕಲಾವಿದರಿಗೆ ಸೂಕ್ತ ವೇದಿಕೆಗಳಿಲ್ಲ. ಕಲೆಗಳು ಉಳಿದರೆ ಜನಪದರ ಸೊಗಡು ಬೆಳೆಯಲು ಸಾಧ್ಯ. ಕಲಾವಿದರಿಗೆ ಅವಕಾಶಗಳನ್ನು ಕಲ್ಪಿಸಿ ಕೊಡುವ ಮೂಲಕ ರಾಜ್ಯ ಸರ್ಕಾರ ಅರ್ಹ ಜನಪದ ಕಲಾವಿದರಿಗೆ ಮಾಶಾಸನ ಒದಗಿಸಬೇಕು ಎಂದು ಮನವಿ ಮಾಡಿದರು.
ಸಂಸ್ಥೆ ಕಾರ್ಯದರ್ಶಿ ಧೂಳಪ್ಪ ದ್ಯಾಮನಕರ ಅವರು ಅಧ್ಯಕ್ಷತೆ ವಹಿಸಿ, ಜನಪದ ಕಲೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕೆಲಸಗಳು ಕೈಗೊಳ್ಳಬೇಕಾಗಿದೆ ಎಂದರು. ಗ್ರಾಮದ ಮುಖಂಡ ಶರಣಗೌಡ ಪೊಲೀಸ್ ಪಾಟೀಲ ಉದ್ಘಟಿಸಿದರು. ಅಮೃತರಾವ ಸುಂದರಕರ ಪ್ರಾಸ್ತಾವಾಗಿ ಮಾತನಾಡಿದರು.
ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಅಂತರರಾಷ್ಟ್ರೀಯ ಸಮ್ಮೇಳನ
ಗ್ರಾಪಂ ಉಪಾದ್ಯಕ್ಷ ಅನೀಲ ಭರಣಿ, ಸದಸ್ಯರಾದ ಶಿವಕುಮಾರ ಹಂಗರಗಿ, ಸತೀಶ ತಂಬಾಕವಾಡಿ, ಬಸವರಾಜ ಆಳಂದಕರ, ಶಿವಯೋಗಿ ಹೊಸಮನಿ, ಶಿವಮೂರ್ತಿ ನಡುಗೇರಿ, ಮಡಿವಾಳಪ್ಪ, ಉಪನ್ಯಾಸಕ ಡಾ ಕರಿಗೋಳೇಶ್ವರ ಫರತಾಬಾದ, ಮುಖಂಡರಾದ ಶರಣಬಸಪ್ಪ ಯಳಸಂಗಿ,ಪೀರಪ್ಪ ಹಾದಿಮನಿ, ಶ್ರೀಶೈಲ ಹಂಗರಗಿ, ಸುರೇಶ ದೊಡ್ಡಮನಿ, ನಾಗರಾಜ ನಡುಗೇರಿ, ಪ್ರೇಮ ದೊಡ್ಡಮನಿ, ಶಿವಕುಮಾರ ಭರಣಿ, ಮಲ್ಲು ಅವರಾದಕರ, ಬಸಲಿಂಗಯ್ಯ ಸ್ವಾಮಿ,ಶರಣು ಸಾವಳಗಿ, ದೇವಾನಂದ ಯಳಸಂಗಿ ಸೇರಿ ಇತರರಿದ್ದರು.
ನಂತರ ಜನಪದ ಕಲಾವಿದರಾದ ಸುಭದ್ರಬಾಯಿ ಹಾಗೂ ತಂಡದವರಿಂದ ಸಂಪ್ರದಾಯ ಪದಗಳು ಮತ್ತು ಬಸವರಾಜ ಕಣಮಸ ತಂಡದವರಿಂದ ಹಂತಿ, ಮೋಹರಂ ಪದಗಳನ್ನು ಹಾಡಿದರು.