ಸುರಪುರ: ನಗರದ ವೆಂಕಟಾಪುರ ಬಳಿಯಲ್ಲಿನ ಹಜರತ್ ಸಯ್ಯದ್ ಬುರ‍್ಹಾನುದ್ದಿನ್ ಶಹಾ ಖಾದ್ರಿ ದರ್ಗಾ ಶರೀಫ್ ಅವರ ಉರುಸ್ ಅಂಗವಾಗಿ ಎರಡು ದಿನಗಳ ಕಾರ್ಯಕ್ರಮ ಅದ್ಧೂರಿಯಾಗಿ ಜರುಗಿದವು ಹಾಗು ಸರ್ವ ಧರ್ಮ ಸಮ್ಮೇಳನವನ್ನು ನಡೆಸಲಾಯಿತು.
ಬುಧವಾರ ರಾತ್ರಿ ನಡೆದ ಸರ್ವಧರ್ಮ ಸಮ್ಮೇಳನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶ್ರೀ ಸೈಯದ್ ಇರ್ಫಾನ್ ಅಲಿಶಹಾ ಖಾದ್ರಿ ಎಜಾಜಿ ಅವರು ಮಾತನಾಡಿ,ಶರೀಫರು ಶರಣು ಮಹಾಂತರು ಸಂತರು ಯಹೂದಿಗಳು ಎಲ್ಲರು ಈ ಲೋಕವನ್ನು ಬೆಳಗಲು ಬಂದ ಮಹಾತ್ಮರು ಹಾಗು ಅವರು ಮಾನವ ಸಮಾಜಕ್ಕೆ ನೀಡಿದ ಸಂದೇಶಗಳು ಸದಾಕಾಲ ಬೆಳಗುವ ಜ್ಯೋತಿ ಇದ್ದಂತೆ. ಅವರ ಅಮರವಾಣಿಯನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡರೆ ಅವರ ಬದುಕು ಉಜ್ವಲವಾಗಲಿದೆ ಎಂದರು.ಅಲ್ಲದೆ ಇಂದು ನಾವೆಲ್ಲರು ಸೇರಿ ಉರುಸ್ ಅಥವಾ ಜಾತ್ರೆಯನ್ನು ಆಚರಿಸುತ್ತಿರುವ ಹಜರತ್ ಸಯ್ಯದ್ ಬುರ‍್ಹಾನುದ್ದಿನ್ ಶಹಾ ಖಾದ್ರಿ ದರ್ಗಾ ಶರೀಫ್ ಒಬ್ಬ ಮಹಾನ್ ಸಂತ ಇವರು ಅಲ್ಲಾನಿಂದ ಬಂದ ದಿವ್ಯವಾಣಿಯನ್ನು ನಮಗೆಲ್ಲ ತಲುಪಿಸುವ ಮೂಲಕ ಸಮಾಜವನ್ನು ಉದ್ಧರಿಸುವ ಮಹಾನ್ ಪುರುಷರಾಗಿದ್ದರು ಎಂದರು.
ಪ್ರಧಾನಿ ಮೋದಿ, ಷಾ ಪ್ರತಿಕೃತಿ ದಹಿಸಿ ಪ್ರತಿಭಟನೆ
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಿಷ್ಠಿ ಕಡ್ಲೆಪ್ಪನವರ ಮಠದ ಶ್ರೀ ಪ್ರಭುಲಿಂಗ ಮಹಾಸ್ವಾಮಿ ಮಾತನಾಡಿ,ಮಹಾತ್ಮರು ಯಾವುದೇ ಒಂದು ಧರ್ಮಕ್ಕೆ ಜಾತಿ ಮತ ಪಂಥಕ್ಕೆ ಸೀಮಿತವಾಗಿರುವುದಿಲ್ಲ ಅವರು ಎಲ್ಲಾ ಜನರ ಒಳಿತನ್ನು ಬಯಸುತ್ತಾರೆ.ಅಂತಹ ಒಬ್ಬ ಮಹಾತ್ಮರಾದ ಹಜರತ್ ಸಯ್ಯದ್ ಬುರ‍್ಹಾನುದ್ದಿನ್ ಶಹಾ ಖಾದ್ರಿ ದರ್ಗಾ ಶರೀಫ್ ಅವರ ಜಾತ್ರೆಯನ್ನು ಯಾವುದೇ ಧರ್ಮ ಜಾತಿಯ ಹಂಗಿಲ್ಲದೆ ಎಲ್ಲರು ಸೇರಿ ಆಚರಿಸುತ್ತಿರುವುದು ಸಂತೋಷದ ಸಂಗತಿಯಾಗಿದೆ ಎಂದರು.
ಕಲಬುರಗಿ: ವಿಷ ಸೇವಿಸಿ ರೈತ ಆತ್ಮಹತ್ಯೆ
ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ:ಆರ್.ವಿ.ನಾಯಕ, ಶೋಷಿತರ ಪರ ಹೋರಾಟದ ಸಂಘಟನೆಗಳ ರಾಜ್ಯ ಕಾರ್ಯಾಧ್ಯಕ್ಷ ವೆಂಕೋಬ ದೊರೆ ಜೆಡಿಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿ ಉಸ್ತಾದ ವಜಾಹತ್ ಹುಸೇನ್ ಮಹ್ಮದ್ ಮೌಲಾ ಸೌದಾಗರ್ ಫಾದರ್ ದೀಪಕ್ ಜಪಾಮಾಲೆ ಚರ್ಚ್ ಅನ್ವರ್ ಜಮಾದಾರ್ ಸೇರಿದಂತೆ ಅನೇಕರಿದ್ದರು.