ಶಹಾಬಾದ: ರಾಜಕೀಯವಾಗಿ, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಹಾಗೂ ಶೈಕ್ಷಣಿಕವಾಗಿ ಎಲ್ಲಾ ರಂಗದಲ್ಲೂ ಕಲುಷಿತ ವಾತಾವರಣ ಮೂಡುತ್ತಿದ್ದು, ಇದರ ಬದಲಾವಣೆಯಾಗಬೇಕಾದರೆ ಯುವಕರ ಪಾತ್ರ ಬಹಳ ಮುಖ್ಯ ಎಂದು ಎಐಡಿವೈಓ ರಾಜ್ಯ ಅಧ್ಯಕ್ಷೆ ಎಂ.ಉಮಾದೇವಿ ಹೇಳಿದರು.
ಅವರು ಸೋಮವಾರ ಎಐಡಿವೈಓ ಸ್ಥಳೀಯ ಸಮಿತಿಯಿಂದ ನಗರದಲ್ಲಿ ಹಮ್ಮಿಕೊಂಡಿದ್ದ ಪ್ರಸಕ್ತ ರಾಜಕೀಯ ಪರಿಸ್ಥಿತಿ ಮತ್ತು ಯುವಜನರ ಕುರಿತು ಸಂವಾದ ಕಾರ್ಯಕ್ರಮದಲ್ಲಿ ಮುಖ್ಯಭಾ?ಣಕಾರರಾಗಿ ಮಾತನಾಡಿದರು. ಇತಿಹಾಸದ ಯಾವುದೇ ದೇಶದ ಕ್ರಾಂತಿ ಬದಲಾವಣೆಯಾಗಿದೆ ಎಂದರೆ ಅದು ಯುವಕರಿಂದ. ಯುವಕರೇ ಸಮಾಜದ ಬದಲಾವಣೆಗೆ ಬಹುಮುಖ್ಯ ಪಾತ್ರ ವಹಿಸಿದ್ದಾರೆ. ಅದೇ ರೀತಿ ನಮ್ಮ ದೇಶದಲ್ಲೂ ನಿರ್ಭಯ ಹೋರಾಟ, ಭ್ರ?ಚಾರದ ವಿರುದ್ಧ ಹೋರಾಟ, ಪ್ರಸಕ್ತ ರೈತರ ಹೋರಾಟ ಯುವಕರೇ ಮುಂಚೂಣಿಯಲ್ಲಿ ಇದ್ದಾರೆ.
ತಾಪಂ ಕಚೇರಿಯ ಮುಂದೆ ಸರದಿ ಉಪವಾಸ ಸತ್ಯಾಗ್ರಹ
ಕೇಂದ್ರ ಸರ್ಕಾರದ ಕೆಟ್ಟ ನೀತಿಗಳಿಂದ ಪ್ರಸಕ್ತ ಪರಿಸ್ಥಿತಿಯಲ್ಲಿ ನಿರುದ್ಯೋಗವು ವಿಪರೀತವಾಗುತ್ತದೆ. ಬಡತನ, ಬೆಲೆ ಏರಿಕೆ ಹೆಚ್ಚಾಗುತಿದ್ದು ಸಾರ್ವಜನಿಕರು ತ್ತರಿಸಿ ಹೋಗಿದ್ದಾರೆ.ಇನ್ನೊಂದು ಕಡೆ ಸರ್ಕಾರದ ನೀತಿಗಳು ಕಾರ್ಪೊರೇಟ್‌ರ ಪರವಾಗಿ ತರುತ್ತಿದ್ದು ಇದರ ವಿರುದ್ಧ ಹೋರಾಡಲು ಯುವಕರು ಭಗತ್‌ಸಿಂಗ್, ನೇತಾಜಿ ಯವರಂತೆ ಹೋರಾಟದಲ್ಲಿ ಮುನ್ನುಗ್ಗಬೇಕು.ಅಲ್ಲದೇ ಅನ್ಯಾಯದ ವಿರುದ್ಧ ಹೋರಾಡಲು ಸಜ್ಜಾಗಬೇಕೆಂದರು.
ನಂತರ ನಿರುದ್ಯೋಗ, ಬಡತನ, ಬೆಲೆ ಏರಿಕೆ ಪಶ್ನೆಗಳ ಕುರಿತು ಆಯೋಜಿಸಲಾದ ಸಂವಾದದಲ್ಲಿ ಯುವಜನರ ಪ್ರಶ್ನೆ ಗಳಿಗೆ ರಾಜ್ಯ ಅಧ್ಯಕ್ಷೆ ಎಂ.ಉಮಾದೇವಿ ಉತ್ತರಿಸಿದರು.
ಪಿ.ಹೆಚ್.ಡಿ. ಫೆಲೋಶೀಪ್‍ಗಾಗಿ ಅರ್ಜಿ ಆಹ್ವಾನ
ಇದೇ ಸಂದರ್ಭದಲ್ಲಿ ಎಐಡಿವೈಓ ಜಿಲ್ಲಾ ಕಾರ್ಯದರ್ಶಿ ಜಗನ್ನಾಥ.ಎಸ್.ಹೆಚ್ ಮಾತನಾಡಿ, ಸಂಘಟನೆಯು ಜಿಲ್ಲೆಯಾದ್ಯಂತ ನಿರುದ್ಯೋಗ ವಿರುದ್ಧ ಸಹಿಸಂಗ್ರಹ ಅಭಿಯಾನ ಹಾಗೂ ನೇತಾಜಿ ಭಗತಸಿಂಗ್‌ರವರ ಕಾರ್ಯಕ್ರಮ ಕೊಂಡು ಜನರಲ್ಲಿ ಜಾಗೃತಿ ಮೂಡಿಸುತ್ತಿದೆ.ಅಲ್ಲದೇ ಇನ್ನೂಕಾರ್ಯಕ್ರಮಗಳು ಹಮ್ಮಿಕೊಳ್ಳುತ್ತಿದ್ದು ಬಹಳ? ಸಂಖ್ಯೆಯಲ್ಲಿ ಯುವಜನರು ಬಾಗವಹಿಸಬೇಕೆಂದು ಹೇಳಿದರು.
ಜಿಲ್ಲಾ ಸೆಕ್ರೆಟ್ರಿಯೆಟ ಸದಸ್ಯ ಮಲ್ಲಿನಾಥ ಹುಂಡೆಕಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಐಡಿವಾಯ್‌ಓ ಅಧ್ಯಕ್ಷ ಸಿದ್ಧು ಚೌಧರಿ ಅಧ್ಯಕ್ಷತೆ ವಹಿಸಿದ್ದರು.
ಪಿಎಮ್‌ಇಜಿಪಿ ಯೋಜನೆಯಡಿ ಸಾಲ ನೀಡದ ಬ್ಯಾಂಕ್‌ಗಳ ಮೇಲೆ ಕ್ರಮ ಕೈಗೊಳ್ಳಿ: ದೊರೆ
ತಿಮ್ಮಯ್ಯ ಮಾನೆ, ನೀಲಕಂಠ ಹುಲಿ, ರಾಜು ಒಡೆಯರ್, ಪ್ರವೀಣ ಬಣಮೀಕರ್ , ವಿಶ್ವ ಸಿಂಘೆ, ಅಖ್ತರ್ ಪಟೇಲ್, ಮಹೇಶ್ವರಿ , ರಘು ಪವಾರ, ಶ್ರೀನಿವಾಸ ಇತರರು ಇದ್ದರು.