ಸುರಪುರ: ತಾಲೂಕಿನ ದೇವರಗೋನಾಲ ತಾಲೂಕು ಪಂಚಾಯತಿ ಕ್ಷೇತ್ರವನ್ನು ಸ್ಥಳಾಂತರಗೊಳಿಸಬಾರದು ಎಂದು ಆಗ್ರಹಿಸಿ ದೇವರಗೋನಾಲ ಸೇರಿದಂತೆ ವಿವಿಧ ಗ್ರಾಮಗಳ ಮತದಾರರು ಸುರಪುರ ಹುನಗುಂದ ರಾಜ್ಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ದೇವರಗೋನಾಲ ಗ್ರಾಮ ಪಂಚಾಯತಿ ಅಧ್ಯಕ್ಷ ಭೀಮಣ್ಣ ದೀವಳಗುಡ್ಡ ಸೇರಿದಂತೆ ಅನೇಕ ಮುಖಂಡರು ಮಾತನಾಡಿ, ದೇವರಗೋನಾಲ ಗ್ರಾಮವು ಐತಿಹಾಸಿಕವಾದ ಗ್ರಾಮವಾಗಿದ್ದು,ಇಲ್ಲಿ ಜಗದ್ಗುರು ಮೌನೇಶ್ವರು ಜನಸಿದ ಕ್ಷೇತ್ರವಾಗಿದೆ. ಅಲ್ಲದೆ ಇಲ್ಲಿ ಸ್ಥಳಿಯವಾಗಿ ಗ್ರಾಮ ಪಂಚಾಯತಿ ಇದೆ ಆಸ್ಪತ್ರೆ ಪ್ರೌಢಶಾಲೆ ಮೂರು ಅಂಗನವಾಡಿಗಳು ಪಶು ಆಸ್ಪತ್ರೆ ಸೇರಿ ಗ್ರಾಮದ ನೂರಾರು ಜನರು ಸರಕಾರಿ ಸೇವೆಯಲ್ಲಿದ್ದಾರೆ,ಅಷ್ಟೆ ಅಲ್ಲದೆ ಜಿಲ್ಲಾಧಿಕಾರಿಗಳ ಮಟ್ಟದ ಉನ್ನತ ಹುದ್ದೆಯಲ್ಲಿದ್ದಾರೆ.
ಬೇಸಿಗೆ ಬರುತ್ತಿದೆ ಕುಡಿಯುವ ನೀರಿನ ವ್ಯವಸ್ಥೆ ಕೈಗೊಳ್ಳಿ: ವೆಂಕಟೇಶ ಬೇಟೆಗಾರ
ಅಲ್ಲದೆ ಈ ನಮ್ಮ ಗ್ರಾಮದ ಸುತ್ತಲು ಅನೇಕ ಗ್ರಾಮಗಳಿದ್ದು ಇದು ಕೇಂದ್ರ ಸ್ಥಳವಾಗಿದೆ.ಆದ್ದರಿಂದ ಇಂತಹ ಅನೇಕ ವಿಶೇಷತೆಯುಳ್ಳ ದೇವರಗೋನಾಲ ಗ್ರಾಮಕ್ಕಿರುವ ತಾಲೂಕು ಪಂಚಾಯತಿ ಕ್ಷೇತ್ರವನ್ನು ಯಾವುದೇ ಕಾರಣಕ್ಕೂ ಸ್ಥಳಾಂತರಿಸಬಾರದು ಅಲ್ಲದೆ ಜಿಲ್ಲಾ ಪಂಚಾಯತಿ ಕ್ಷೇತ್ರವನ್ನಾಗಿ ದೇವರಗೋನಾಲವನ್ನು ಮಾಡಬೇಕು ಎಂಬುದು ನಮ್ಮ ಒತ್ತಾಯವಾಗಿದೆ.ಒಂದು ವೇಳೆ ಈ ನಮ್ಮ ಬೇಡಿಕೆ ಈಡೇರಿಸದಿದ್ದಲ್ಲಿ ಜಿಲ್ಲಾ ಪಂಚಾಯತಿ ಮುಂದೆ ಉಗ್ರ ಪ್ರತಿಭಟನೆ ನಡೆಸುವುದಲ್ಲದೆ ಸುರಪುರ ಬಂದ್ ಮಾಡಿ ಪ್ರತಿಭಟನೆ ನಡೆಸುವ ಸಂದರ್ಭವು ಬರಲಿದೆ ಎಂದು ಎಚ್ಚರಿಸಿದರು.
ಸುಮಾರು ಎರಡು ಗಂಟೆಗಳ ಕಾಲ ರಾಜ್ಯ ಹೆದ್ದಾರಿ ಬಂದ್ ಮಾಡಿದ್ದರಿಂದ ವಾಹನ ಸವಾರರು ಪರಾದಾಡುವಂತಾಯ್ತು.ನಂತರ ಜಿಲ್ಲಾಧಿಕಾರಿಗಳಿಗೆ ಬರೆದ ಮನವಿಯನ್ನು ತಹಸೀಲ್ ಕಚೇರಿಯ ಕಂದಾಯ ನಿರೀಕ್ಷಕ ಗುರುಬಸಪ್ಪ ಹಾಗು ಸಿರಸ್ತೆದಾರರ ಮೂಲಕ ಸಲ್ಲಿಸಿದರು.
ಹಿರಿಯ ಪತ್ರಕರ್ತ ಶಿವರಾಮ್ ಅಸೂಂಡಿ ವರ್ಗಾವಣೆ: ಬಿಳ್ಕೊಡಿಗೆ
ಈ ಸಂದರ್ಭದಲ್ಲಿ ತಾಲೂಕು ಪಂಚಾಯತಿ ಮಾಜಿ ಅಧ್ಯಕ್ಷ ನಿಂಗಣ್ಣ ಬಾದ್ಯಾಪುರ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ವೆಂಕಟೇಶ ಬೇಟೆಗಾರ ಮುಖಂಡರಾದ ನಾಗಪ್ಪ ಕನ್ನೆಳ್ಳಿ ಮಾರ್ಥಂಡಪ್ಪ ದೊರೆ ರಮೇಶ ದೊರೆ ಆಲ್ದಾಳ ಶಿವರಾಯ ಕಾಡ್ಲೂರ ಶಿವಮೋನಯ್ಯ ಎಲ್.ಡಿ.ನಾಯಕ ದೇವಿಂದ್ರಪ್ಪ ಚಿಕ್ಕನಳ್ಳಿ ಅಯ್ಯಪ್ಪ ಪೂಜಾರಿ ಬೈರಿಮಡ್ಡಿ ರಂಗು ಬೇರಿಮಡ್ಡಿ ಯಂಕೋಬ ದೊಡ್ಡಿ ಮಾಳಪ್ಪ ಪೂಜಾರಿ ದೇವು ಮಾಚಗುಂಡಾಳ ಸುಭಾಸ ಹಣಮಂತ್ರಾಯಗೌಡ ಬಸನಗೌಡ ನಿಂಗು ಕಿರದಹಳ್ಳಿ ಸೇರಿದಂತೆ ಅನೇಕರಿದ್ದರು.