ಸ್ತ್ರೀ ಶಕ್ತಿಯಿಂದಲೇ ನಮ್ಮ ಸಂಸ್ಥಾನಕ್ಕೆ ಯಶಸ್ಸು : ಡಾ ದಾಕ್ಷಾಯಿಣಿ ಅವ್ವಾಜಿ

1
35

ಕಲಬುರಗಿ: ನಮ್ಮ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ತ್ರೀ ಶಕ್ತಿಯೇ ನಮ್ಮ ಸಂಸ್ಥಾನದ ಯಶಸ್ಸಿಗೆ ಕಾರಣವಾಗಿದೆ. ಈ ಸ್ತ್ರೀ ಶಕ್ತಿಯ ಹಿಂದೆ ಅನೇಕ ಪುರುಷರ ಪರಿಶ್ರಮವಿದೆ ಎಂದು ಶ್ರೀ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರಪರ್ಸನರಾದ ಹಾಗೂ ಶರಣಬಸವ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ಸದಸ್ಯರಾದ ಪೂಜ್ಯ ಮಾತೋಶ್ರೀ ಡಾ. ದಾಕ್ಷಾಯಿಣಿ ಅವ್ವಾಜಿ ಶ್ಲಾಘನೆ ವ್ಯಕ್ತಪಡಿಸಿದರು.

ನಗರದ ಶರಣಬಸವ ವಿಶ್ಯವಿದ್ಯಾಲಯದ ದೊಡ್ಡಪ್ಪ ಅಪ್ಪಾ ಸಭಾಮಂಟಪದಲ್ಲಿ ಸೋಮವಾರ ಆಯೋಜಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಪ್ರತಿ ಮಹಿಳೆ ಉತ್ತಮ ಕತೃತ್ವ, ನೇತೃತ್ವ ಮತ್ತು ಮಾತೃತ್ವ ಅಂಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿರುತ್ತಾರೆ. ಉತ್ತಮ ಕಾರ್ಯಗಳನ್ನು, ಉತ್ತಮವಾದ ರೀತಿಯಲ್ಲಿ ನೇತೃತ್ವ ನಿರ್ವಹಿಸಿ ಆ ಕಾರ್ಯಯೋಜನೆಗಳನ್ನು ಸಫಲಗೊಳಿಸಿರುತ್ತಾರೆ. ಅದರಂತೆ ಮಕ್ಕಳನ್ನು ಉತ್ತಮ ರೀತಿಯಲ್ಲಿ ಪೋಷಿಸಿ ರಕ್ಷಿಸಿ ಒಳ್ಳೆಯ ಮಾತೆಯಾಗುತ್ತಾಳೆ ಎಂದು ಹೇಳಿದರು.

Contact Your\'s Advertisement; 9902492681

ಕೆ.ಕೆ.ಆರ್.ಡಿ.ಬಿ 2 ಸಾವಿರ ಕೋಟಿ ಅನುದಾನದ ನಿರೀಕ್ಷೆಗೆ ಅಪ್ಪುಗೌಡರು ಪ್ರಯತ್ನಿಸಿಲ್ಲ: ನಾಲವಾರಕರ್ ಆಕ್ರೋಶ

ಪ್ರತಿ ಗಂಡಿನ ಯಾವುದೆ ಕೆಲಸಕ್ಕೆ, ಹೆಣ್ಣಿನ ಸ್ಪರ್ಶ ಇದ್ದಾಗ ಮಾತ್ರ ಆ ಕೆಲಸ ಯಶಸ್ವಿನತ್ತ ಸಾಗುತ್ತದೆ ಮತ್ತು ಪರಿಪೂರ್ಣಗೊಳ್ಳುತ್ತದೆ ಅದೇ ರೀತಿ ಪುರುಷರ ಪ್ರೋತ್ಸಾಹದಿಂದ ಯಾವುದೇ ಕೆಲಸವನ್ನು ಆಕಾಶದೆತ್ತರಕ್ಕೆ ಕೊಂಡೊಯ್ಯಬಲ್ಲಳು ಹೆಣ್ಣು. ನಾರಿ ಶಕ್ತಿ ಸ್ವರೂಪಿಣಿಯಾಗಿದ್ದಾಳೆ. ಹೀಗಾಗಿ ನಮ್ಮ ದೇಶದಲ್ಲಿ ಹೆಣ್ಣನ್ನು ಪೂಜ್ಯನೀಯ ಸ್ಥಾನದಲ್ಲಿ ನೋಡಲ್ಪಡುತ್ತದೆ ಎಂದು ಹೇಳಿದರು.

ಲಿ. ದೊಡ್ಟಪ್ಪ ಅಪ್ಪಾರವರು ಅಂದು ಹೆಣ್ಣು ಮಕ್ಕಳಿಗಾಗಿ ಪ್ರಾರಂಭಿಸಿದ್ದ ಮಹಾದೇವಿ ಕನ್ಯಾ ಪ್ರೌಢಶಾಲೆಯ ಎಂಬ ಸಸಿ ಇಂದು ವಿಶ್ವವಿದ್ಯಾಲಯದ ಮಟ್ಟಿಗೆ ಹೆಮ್ಮರವಾಗಿ ಬೆಳೆದಿದೆ ಎಂದು ಸಂತೋಷವ್ಯಕ್ತಪಡಿಸಿದರು.

ಏಪ್ರಿಲ್ ೧೦ರ ವರೆಗೆ ಎಡದಂಡೆ ಕಾಲುವೆಗಳಿಗೆ ನೀರು ಹರಿಸಿ: ಶಾಸಕ ರಾಜುಗೌಡ

ಶ್ರೀ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದ ಹಾಗೂ ಶರಣಬಸವ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ಬಸವರಾಜ ದೇಶಮುಖ ಮಾತನಾಡಿ ಪ್ರತಿ ಕುಟುಂಬದಲ್ಲಿ ಹೆಣ್ಣು ಶ್ರೇಷ್ಠಸ್ಥಾನ ಹೊಂದಿದ್ದಾರೆ ಎಂದು ಹೇಳಿದರು.
ನಮ್ಮ ಸಂಸ್ಥೆಯಲ್ಲಿ ಕೇವಲ ಮಹಿಳೆಯರಿಗಾಗಿ ಕೆಜಿಯಿಂದ ಪಿಜಿವರೆಗೆ ಶಿಕ್ಷಣ ಪಡೆಯುವ ಅವಕಾಶಗಳಿವೆ. ಇಲ್ಲಿ ಮಹಿಳೆಯರಿಗಾಗಿ ವಿಶೇಷ ಸ್ಥಾನಮಾನವಿದೆ ಎಂದರು.

ವಿವಿ ಕುಲಪತಿ ಡಾ. ನಿರಂಜನ್ ವಿ.ನಿಷ್ಠಿ ಮಾತನಾಡಿ, ಮಗುವಾಗಿದ್ದಾಗ ತೊಟ್ಟಿಲನ್ನು ತೂಗುವ ಕೈಗಳು, ತಪ್ಪು ಮಾಡಿದಾಗ ಶಿಕ್ಷೆ ನೀಡುವ ಕೈಗಳಾಗಿ ಪರಿವರ್ತನೆಗೊಳ್ಳುತ್ತವೆ. ಹೆಣ್ಣು ಶೈಕ್ಷಣಿಕ ಕ್ಷೇತ್ರದಲ್ಲಿ , ಹಣಕಾಸಿನ ಕೇತ್ರದಲ್ಲಿ, ಗೃಹಖಾತೆ ಹೀಗೆ ವಿವಿಧ ಕೇತ್ರದಲ್ಲಿ ಸಾಧನೆ ಮಾಡಿದ್ದಾರೆ ಎಂದರು.

ಕರಾಟೆ ಕ್ಯಾಪ, ಬೆಲ್ಟ್ ಪರೀಕ್ಷೆ

ಸಮಾಜ ಸೇವಕರಾದ ಲಕ್ಷ್ಮಿ ದತ್ತಾತ್ರೇಯ ಪಾಟೀಲ ರೇವೂರ ಮಾತನಾಡಿ, ಶರಣಬಸವೇಶ್ವರ ಸಂಸ್ಥಾನದಲ್ಲಿ ಹೊಸ ಹೊಸ ಯೋಜನೆಗಳನ್ನು ಕೈಗೊಳ್ಳುವ ಮೂಲಕ ಈ ಶಿಕ್ಷಣ ಸಂಸ್ಥೆಯ ಅಭಿವೃದ್ಧಿಗೆ ಕಾರಣರಾಗಿದ್ದ ಅವ್ವಾಜಿಯವರು ನಮ್ಮೆಲರಿಗೂ ಮಾರ್ಗದರ್ಶಕರಾಗಿದ್ದಾರೆ ಎಂದರು.

ಪ್ರತಿ ಕೇತ್ರದಲ್ಲಿ ಹೆಣ್ಣು ಮಕ್ಕಳು ಸಾಧನೆ ಗೈದಿದ್ದಾರೆ. ಅರಣ್ಯ ಕೇತ್ರ, ಸೈನಿಕ ಕೇತ್ರ ಸೇರಿದಂತೆ ಪುರೋಹಿತ ಕ್ಷೇತ್ರದಲ್ಲಿಯೂ ಹೆಣ್ಣು ಮಕ್ಕಳು ಪಾದಾರ್ಪಣೆ ಮಾಡುತ್ತಿರುವುದು ಇನ್ನೂ ವಿಶೇಷ ಎಂದರು.

ಬ್ಯಾಂಕ್ ಆಫ್ ಬರೋಡಾದ ಪ್ರಾದೇಶಿಕ ವ್ಯವಸ್ಥಾಪಕರಾದ ಸುನೀಲಕುಮಾರ ಮಾತನಾಡಿ, ತಾಯಿ ಮಗುವಿಗೆ ಸಮಾಜದಲ್ಲಿ ಸದೃಢವಾಗಿ ಬಳೆಸುವಂತಹ ನಾಯಕತ್ವಗುಣಗಳನ್ನು ಹೊಂದಿರುತ್ತಾಳೆ. ನಮ್ಮ ಇತಿಹಾಸದ ಮೂಲಕ ಸ್ತ್ರೀ ಶಕ್ತಿ ಸಾಮರ್ಥ ಅರ್ಥೈಸಿಕೊಳ್ಳಬಹುದಾಗಿದೆ ಎಂದರು.

“ಸನ್ ಸಿಟಿ ಉತ್ಸವ ವಸ್ತು ಪ್ರದರ್ಶನ, ಮಾರಾಟ ಮೇಳ

ಗೋದುತಾಯಿ ಬಿ.ಇಡಿ ಶಿಕ್ಷಣ ಮಹಾವಿದ್ಯಾಲಯದ ನಿವೃತ್ತ ಪ್ರಾಚಾರ್ಯರಾದ ಸುಶೀಲಾ ನರಕೆ ಕಾಯಕ ರತ್ನ ಪ್ರಶಸ್ತಿ ಸ್ವೀಕರಿಸಿ ಮತ್ತು ಖ್ಯಾತ ವೈದ್ಯರಾದ ಡಾ.ಶಿವಲಿಂಗ ನಿಷ್ಠಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ದಾವಣಗೆರೆ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ ಪಡೆದುಕೊಂಡಿರುವ ಪೂಜ್ಯ ಮಾತೋಶ್ರೀ ಡಾ. ದಾಕ್ಷಾಯಿಣಿ ಅವ್ವಾಜಿಯವರಿಗೆ ವಿಶೇಷವಾಗಿ ಸನ್ಮಾನಿಸಲಾಯಿತು’.ಡಾ. ಸುಶೀಲಾ ನರಕೆ ಮತ್ತು ಕಮಲಾ ದೇವರಕಲ್ ಕಾಯಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಡಾ. ಜಯಶ್ರೀ ದಂಡೆ ’ಸ್ತ್ರೀ ರತ್ನ ಪ್ರಶಸ್ತಿ’ ನೀಡಿ ಸನ್ಮಾನಿಸಲಾಯಿತು. ಕಮಲಾಬಾಯಿ ಚಿಟಗುಪ್ಪಿಕರ್ ಮತ್ತು ಅಪೂರ್ವ ಬಜಾಜ ಅವರಿಗೆ ’ಸ್ತ್ರೀ ಶಕ್ತಿಪ್ರಶಸ್ತಿ’ ನೀಡಿಗೌರವಿಸಲಾಯಿತು. ಮಾಲಾ ದಣ್ಣೂರ ಮತ್ತು ಮಾಲಾ ಕಣ್ಣಿ ಅವರಿಗೆ ’ಸೇವಾ ರತ್ನ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ಶ್ರೀಧರ, ಪುಷ್ಪರಾಜ, ಸಲೀಂ, ಇರ್ಫಾನಾ ಬೇಗಂ, ಬಸಯ್ಯ ಹಿರೇಮಠ, ಸಂತೋಷ, ಮಹಾನಂದ, ಸಿದ್ರಾಮ ಚೌಹ್ವಾಣ, ಚಂದ್ರಕಾಂತ ಅತನೂರ, ಚಿದಾನಂದ ಇವರನ್ನು ’ಸೇವಾರತ್ನ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ಡಾ.ನೀಧಿಷ್ ನಿಷ್ಠಿ, ಡಾ.ಶಿವಲಿಂಗ ನಿಷ್ಠಿ ಇವರಿಗೆ ಕೋವಿಡ್ ವಾರಿಯರ್ಸ್ ಎಂದು ಗುರುತಿಸಿ ಸನ್ಮಾನಿಸಲಾಯಿತು.

ಪ್ರೊ. ಚೇತನಾ ಪಾಟೀಲ ಮತ್ತು ಪ್ರೊ. ಶೃತಿ ಕಾರ್ಯಕ್ರಮ ನಿರೂಪಿಸಿದರು. ಸಂಗೀತ ವಿಭಾಗದಿಂದ ಪ್ರಾರ್ಥನೆ ಗೀತೆ ಹಾಡಲಾಯಿತು. ವಿವಿ ಡೀನ್ ಡಾ. ಲಕ್ಷ್ಮಿ ಪಾಟೀಲ, ಮಾಕಾ ಸ್ವಾಗತಿಸಿದರು. ಡಾ. ವಾಣಿಶ್ರೀ ವಂದಿಸಿದರು. ಕಾರ್ಯಕ್ರಮದಲ್ಲಿ ವಿವಿ ಸಮಕುಲಪತಿ ಡಾ. ವಿ.ಡಿ. ಮೈತ್ರಿ, ಕುಲಸಚಿವ ಡಾ. ಅನೀಲಕುಮಾರ ಬಿಡವೆ, ಮೌಲ್ಯಮಾಪನ ಕುಲಸಚಿವ ಡಾ. ಲಿಂಗರಾಜ ಶಾಸ್ತ್ರೀ ವಿವಿ ಡೀನ್ ಡಾ. ಬಸವರಾಜ ಮಠಪತಿ ಸೇರಿದಂತೆ ವಿವಿಯ ವಿವಿಧ ವಿಭಾಗದ ಪ್ರಾಧ್ಯಾಪಕರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here