ವೀರಶೈವ ಲಿಂಗಾಯತ ಸಮಾಜ ಸಂಘಟನಾತ್ಮಕವಾಗಿ ಬೆಳವಣಿಗೆ ಮಾಡುಬೇಕು : ಪಾಟೀಲ

0
63

ಕಲಬುರಗಿ: ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಸಭೆಯಲ್ಲಿ ಸರ್ವಾನು ಮತದಿಂದ ಜೇವರ್ಗಿ ವೀರಶೈವ ಸಮಾಜದ ತಾಲೂಕ ಘಟಕದ ಅಧ್ಯಕ್ಷರನ್ನಾಗಿ ಸಿದ್ದು ಬಿ.ಅಂಗಡಿ ಅವರನ್ನು ನೇಮಕ ಮಾಡಲಾಯಿತು. ಸಭೆಯ ಅಧ್ಯಕ್ಷತೆ ವಹಿಸಿದ ಜಿಲ್ಲಾ ವೀರಶೈವ ಸಮಾಜದ ಅಧ್ಯಕ್ಷ ಅರುಣಕುಮಾರ ಪಾಟೀಲ ಕೊಡಲಹಂಗರಗಾ ಅವರು ಮಾತನಾಡಿ ವೀರಶೈವ ಲಿಂಗಾಯತ ಸಮಾಜ ಸಂಘಟನಾತ್ಮಕವಾಗಿ ಬೆಳವಣಿಗೆ ಮಾಡುವ ಅವಶ್ಯಕತೆ ಇದೆ. ಎಲ್ಲಾ ಕ್ಷೇತ್ರಗಳಲ್ಲಿ ಸಮಾಜದವರು ಮುಂದು ಬರಬೇಕು ಎಂದು ಹೇಳಿದರು.

ಈ ಸಭೆಯಲ್ಲಿ ಸಮಾಜದ ಮುಖ್ಯ ಗಣ್ಯರಾದ ಸುರೇಶ ದೇಸಾಯಿ, ಮಲ್ಕಣಾ ಹೊಸೂರ, ಸಿದ್ದಣ್ಣಾ ಅಣಬಿ, ಅನೀಲ ಭಗಶೆಟ್ಟಿ, ವೀರಭದ್ರಯ್ಯ ದೊಡ್ಡಮನಿ, ಕಿರಣ ಗಡೇದ್, ಬಸವರಾಜ ತಾಯಗೋಳ, ವಿಜಯಕುಮಾರ ಪಾಟೀಲ ಸೇಡಂ, ವಿಶ್ವನಾಥ ಇಮ್ಮಣಿ, ಶ್ರೀಶೈಲ ಕರಕಳ್ಳಿ, ನೀಲಕಂಠ ಲಕ್ಕಣಿ, ಸಂಗು ಲಕ್ಕಣಿ, ತೋಟಯ್ಯ ಹಿರೇಮಠ ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here