ಕಲಬುರಗಿ: ಕವಿ, ಸಾಹಿತಿ, ಕಲಾವಿದ, ಲೇಖಕರು ಸಮಾಜದ ಆಗುಹೋಗುಗಳಿಗೆ ಸದಾ ಸ್ಪಂದಿಸಬೇಕು. ದೇಶದ ಗಡಿ ಭಾದಲ್ಲಿ ರೈತರು ನಡೆಸುತ್ತಿರುವ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಮಾಜಿ ಮಾಜಿ ಶಾಸಕ ಬಿ.ಆರ್. ಪಾಟೀಲ ತಿಳಿಸಿದರು.
ಆಳಂದೆ ಸಾಸಿರನಾಡು ಸಾಹಿತ್ಯ, ಸಾಂಸ್ಕೃತಿಕ ವೇದಿಕೆ ಕಲಬುರಗಿ ಹಾಗೂ ಬಸವೇಶ್ವರ ಸಮಾಜ ಸೇವಾ ಬಳಗ ಕಲಬುರಗಿ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಚೇಂಬರ್ ಆಪ್ ಕಾಮರ್ಸ್ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ವಿಶ್ವನಾಥ ಭಕರೆ ರಚಿಸಿದ ’ಶಿವರುದ್ರಯ್ಯನ ಶಿವತಾಂಡವ’ ಕಥಾ ಸಂಕಲನ ಜನಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬದುಕಿನ ಅನುಭವಗಳೇ ಕಥಾವಸ್ತುವಾಗಬೇಕು ಅಂದಾಗ ಮಾತ್ರ ಆ ಕಥೆಗಳಿಗೆ ಗಟ್ಟಿತನ ಬರುತ್ತದೆ. ಪ್ರತಿಯೊಂದು ಗ್ರಾಮಕ್ಕೂ ಅದರದ್ದೇ ಆದ ಇತಿಹಾಸವಿರುತ್ತದೆ. ಅಂತಹ ಗ್ರಾಮೀಣ ಪ್ರದೇಶದ ಇತಿಹಾಸ ಹೊರತರಬೇಕು ಎಂದು ಹೇಳಿದರು.
ತಳಮಟ್ಟದಿಂದಲೇ ಬೆಳೆದು ಜನನಾಯಕರಾಗಿದ ಮಾಜಿ ಶಾಸಕ ವಾಲ್ಮೀಕಿ ನಾಯಕ
ಕೃತಿ ಜನಾರ್ಪಣೆ ಮಾಡಿ ಮಾತನಾಡಿದ ಡಾ. ಕಾಶಿನಾಥ ಅಂಬಲಗಿ, ಪುಸ್ತಕಗಳು ಜ್ಞಾನದ ಬಂಢಾರ. ಬರಹಗಾರರಾದವರು ಹೆಚ್ಚು ಓದಬೇಕು. ಸುಸಂಸ್ಕೃತ ಮತ್ತು ಶ್ರೇಷ್ಠ ಸಂಸ್ಕೃತಿಯನ್ನು ಕಟ್ಟುವ ಜವಾಬ್ದಾರಿ ಲೇಖಕರ ಮೇಲಿದೆ ಎಂದು ಹೇಳಿದರು.
ಕೃತಿ ಕುರಿತು ಮಾತನಾಡಿದ ಪತ್ರಕರ್ತ ಲೇಖಕ ಡಾ. ಶಿವರಂಜನ್ ಸತ್ಯಂಪೇಟೆ, ಶಿವರುದ್ರಯ್ಯನ ಶಿವತಾಂಡವ ಕಥಾ ಸಂಕಲನದ ಬಹುತೇಕ ಕಥೆಗಳು ನೈಜ ಘಟನೆಯನ್ನಾಧರಿಸಿದ ಕಥೆಗಳಾಗಿದ್ದು, ಗ್ರಾಮೀಣ ಬದುಕಿನ ಚಿತ್ರಣದ ಜೊತೆಗೆ ಹಳ್ಳಿಗಾಡಿನ ವಿವಿಧ ಮುಖಗಳ ಅನಾವರಣ ಮಾಡಲಾಗಿದೆ ಎಂದರು. ಇಲ್ಲಿನ ಕಥೆಗಳು ವಿವರಣಾತ್ಮಕ ಕಥೆಗಳಾಗಿದ್ದು, ದಟ್ಟವಾದ ಅನುಭವ ಹೊಂದಿರುವ ಭಕರೆಯವರು ಇತ್ತೀಚಿನ ಕಥಾಹಂದರದ ತಂತ್ರವನ್ನು ಬಳಸಿ ಕಥೆಗಳನ್ನು ಬರೆದದ್ದೇ ಆದಲ್ಲಿ ಈ ನಾಡಿನ ಭರವಸೆಯ ಕಥೆಗಾರರಾಗುವುದರಲ್ಲಿ ಸಂಶಯವಿಲ್ಲ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಪ್ರೊ. ಆರ್.ಕೆ. ಹುಡಗಿ ಮಾತನಾಡಿ, ಪರಂಪರೆ ಇತಿಹಾಸ ಅರಿಯದೆ ಹೊಸದನ್ನು ಕಟ್ಟಲಾಗುವುದಿಲ್ಲ. ಅದರಂತೆ ಕಥೆಗಳಲ್ಲಿ ಮೊನಚು, ಸಂದೇಶವಿರಬೇಕಾಗುತ್ತದೆ. ಒಂದ ಘಟನೆಯ ಸುತ್ತ ಹೆಣೆಯಲಾದ ಕಥಾ ಹಂದರವು ಸತ್ಯ ಮತ್ತು ಕಲ್ಪನೆಯನ್ನೊಳಗೊಂಡಿರುತ್ತದೆ. ಮನುಷ್ಯತ್ವಕ್ಕೆ ಬರ ಬಿದ್ದಿರುವ ಈ ಸಂದರ್ಭದಲ್ಲಿ ಮಾನವ ಸಂಬಂಧಗಳನ್ನು ಗಟ್ಟಿಗೊಳಿಸುವ ಇಂತಹ ಕಾರ್ಯಕ್ರಮಗಳು ಮೇಲಿಂದ ಮೇಲೆ ಜರುಗಬೇಕು ಎಂದು ವಿವರಿಸಿದರು.
ಶಾಸಕ ಬಸವರಾಜ ಮತ್ತಿಮಡು ಮಾಜಿ ಶಾಸಕ ವಾಲ್ಮೀಕಿ ನಾಯಕ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಕೆ
ಮುಖ್ಯ ಅತಿಥಿಯಾಗಿದ್ದ ಬಂಡಾಯ ಸಾಹಿತಿ ಡಾ. ಪ್ರಭು ಖಾನಾಪುರೆ, ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶಿವಶರಣಪ್ಪ ಮೂಳೆಗಾಂವ, ಪ್ರಕಾಶಕ ಬಸವರಾಜ ಕೊನೇಕ್ ಮಾತನಾಡಿದರು. ವೇದಿಕೆ ಹಾಗೂ ಬಳಗದ ಪದಾಧಿಕಾರಿಗಳಾದ ನರಸಪ್ಪ ಬಿರಾದಾರ, ರಾಜಶೇಖರ ಮರಡಿ, ಗಣೇಶ ಪಾಟೀಲ., ಡಾ. ಸೂರ್ಯಕಾಂತ ಪಾಟೀಲ, ಎಚ್.ಬಿ. ಪಾಟೀಲ ವೇದಿಕೆಯಲ್ಲಿದ್ದರು. ಸಂಜಯ ಪಾಟೀಲ ನಿರೂಪಿಸಿದರು. ಲಕ್ಷ್ಮೀಕಾಂತ ಬೀದಿ ವಂದಿಸಿದರು.
ಸುರೇಶ ಬಡಿಗೇರ, ಪ. ಮಾನು ಸಗರ, ಡಾ. ಚಿ.ಸಿ. ನಿಂಗಣ್ಣ, ಎಂ.ಬಿ. ನಿಂಗಪ್ಪ, ದತ್ತಾತ್ರೇಯ ಇಕ್ಕಳಕಿ, ಸಂಗಮನಾಥ ರೇವತಗಾಂವ, ಬಸವರಾಜ ಚಿನಿವಾರ, ಬಸಣ್ಣ ಸಿಂಗೆ, ಚಂದ್ರಶೇಖರ ಪೂಜಾರಿ, ಬಿ.ಎಸ್. ಮಾಲಿಪಾಟೀಲ ಸೇರಿದಂತೆ ೨೦ಕ್ಕೂ ಹೆಚ್ಚು ಕವಿ, ಸಾಹಿತಿ, ಪತ್ರಕರ್ತರನ್ನು ಇದೇ ವೇಳೆಯಲ್ಲಿ ಸನ್ಮಾನಿಸಲಾಯಿತು.