ರಂಜಾನ್ ವ್ರತಾಚರಣೆ ಮಾಡುವ ವಿದ್ಯಾರ್ಥಿಗಳಿಗೆ ಇಲಾಖೆಯಿಂದ ವಿಶೇಷ ಸುತ್ತೋಲೆ

0
36

ಬೆಂಗಳೂರು: ಏಪ್ರಿಲ್‌ 14 ರಿಂದ ಪವಿತ್ರ ರಂಜಾನ್‌ ತಿಂಗಳು ಆರಂಭವಾಗಲಿದ್ದು, ಅಲ್ಪಸಂಖ್ಯಾತರ ಇಲಾಖೆಯ ವಸತಿ ನಿಲಯಗಳಲ್ಲಿರುವಂತ ಉಪವಾಸ ಪಾಲಿಸಲು ಇಕ್ಷೀಸುವ ವಿದ್ಯಾರ್ಥಿಗಳಿಗೆ ಬೆಳಿಗ್ಗಿನ ಸಹರ್ ಹಾಗೂ ಸಂಜೆ ಉಪವಾಸ್ ಬೀಡುವ ವೇಳೆಯಲ್ಲಿ ತಿಂಡಿ ಮತ್ತು ಊಟದ ವ್ಯವಸ್ಥೆ ಇರುತ್ತದೆ ಎಂದು ಅಲ್ಪಸಂಖ್ಯಾತರ ನಿರ್ದೇಶನಾಲಯದ ನಿರ್ದೇಶಕರು ಸುತ್ತೋಲೆ ಹೊರಡಿಸಿ ಆದೇಶಿದ್ದಾರೆ.

ಏಪ್ರಿಲ್‌ 14 ರಿಂದ ಪವಿತ್ರ ರಂಜಾನ್‌ ತಿಂಗಳು ಆರಂಭವಾಗಲಿದ್ದು, ಅಲ್ಪಸಂಖ್ಯಾತರ, ವಿದ್ಯಾರ್ಥಿನಿಲಯಗಳಲ್ಲಿ ಮತ್ತು ಅಲ್ಪಸಂಖ್ಯಾತರ ವಸತಿ ಶಾಲೆ/ಕಾಲೇಜುಗಳಲ್ಲಿ ಸುಮಾರು ಶೇ.75%ರಷ್ಟು ಮುಸ್ಲಿಂ ವಿದ್ಯಾರ್ಥಿಗಳಿರುತ್ತಾರೆ. ರಂಜಾನ್‌ ತಿಂಗಳಲ್ಲಿ ಮುಸ್ಲಿಂ ವಿದ್ಯಾರ್ಥಿಗಳು ಉಪವಾಸವಿರುವುದರಿ೦ದ ಅಂತಹ ವಿದ್ಯಾರ್ಥಿಗಳಿಗೆ ಬೆಳಗ್ಗೆ 4.00 ಘಂಟೆಯ ಒಳಗೆ ಊಟ(ಸಹರ್‌), ಉಪವಾಸ ಬಿಡುವ ವೇಳೆ ಸಂಜೆ 7.00 ಘಂಟೆಗೆ ತಿ೦ಡಿ(ಇಪ್ತಿಯಾರಿ) ಹಾಗೂ ರಾತ್ರಿ ಊಟದ ವ್ಯವಸ್ಥೆ ಮಾಡಿ ಕೊಡಲು ಸೂಚಿಸಿದೆ.

Contact Your\'s Advertisement; 9902492681

ಈ ಸುತ್ತೋಲೆಯು ರ೦ಜಾನ್‌ ಮಾಸ ಪ್ರಾರಂಭ ದಿನದಿ೦ದ ಮುಕ್ತಾಯವಾಗುವ ದಿನಾಂಕದವರೆಗೆ ಮಾತ್ರಜಾರಿಯಲ್ಲಿರುತ್ತದೆ ಎಂದು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here