ಸಾರಿಗೆ ನೌಕರರ ಸಮಸ್ಯೆಗೆ ಸ್ಪಂದಿಸಿಲು ಆಗ್ರಹ

0
91

ಯಾದಗಿರಿ : ಸಾರಿಗೆ ನೌಕರರ ಸಮಸ್ಯೆಗೆ ಸ್ಪಂದಿಸಿ ಸರಿಪಡಿಸಬೇಕು ಎಂದು ಯಾದಗಿರಿ ಜಿಲ್ಲಾ ಪಿಂಜಾರ ವಿವಿದೋದ್ಧೇಶ ಸಂಘದ ಹುಣಸಗಿ ತಾಲೂಕ ಘಟಕದ ಪ್ರಧಾನ ಕಾರ್ಯದರ್ಶಿ ಸೋಪಿಸಾಬ ಡಿ ಸುರಪುರ ಇವರು ಮಾನ್ಯ ಮುಖ್ಯಮಂತ್ರಿಗಳನ್ನು ಆಗ್ರಹಿಸಿದರು.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಸಾರಿಗೆ ನೌಕಕರು ತಮ್ಮ ಬೇಡಿಕೆಗಳನ್ನುಈಡೇರಿಸಲು ಅನಿರ್ದಿಷ್ಟಾವಧಿ ಮುಷ್ಕರ ಕೈಗೊಂಡಿದ್ದು, ಆರನೇ ದಿನಕ್ಕೆ ಕಾಲಿಟ್ಟಿದೆ ಇತ್ತ ಕಡೆ ಪ್ರಯಾಣಿಕರು ಪರದಾಡುವುದು ತಪ್ಪಿಲ್ಲ.

Contact Your\'s Advertisement; 9902492681

ಸಮರ್ಪಕವಾಗಿ ಆರು ದಿನಗಳಿಂದ ಬಸ್‌ ಇಲ್ಲದೆ ಜನಸಾಮಾನ್ಯರು ಪರದಾಡುತ್ತಿದ್ದಾರೆ. ವಸತಿ ನಿಲಯಗಳಲ್ಲಿರುವ ವಿದ್ಯಾರ್ಥಿ, ವಿದ್ಯಾರ್ಥಿನಿಯರು ತಮ್ಮ ಊರಿಗೆ ತೆರಳದೆ ವಸತಿ ನಿಲಯಗಳಲ್ಲೇ ಇರುವಂತ ಪರಿಸ್ಥಿತಿ ಏರ್ಪಟ್ಟಿದೆ.

ದೂರದ ಊರಿಗೆ ತೆರಳಲು ಜನಸಾಮಾನ್ಯರು ಹೈರಾಣಾಗುತ್ತಿದ್ದಾರೆ. ಒಂದೋ, ಎರಡು ಖಾಸಗಿ ವಾಹನ ಅವುಗಳಿಗಾಗಿ ಬಸ್‌ ನಿಲ್ದಾಣಗಳಲ್ಲಿ ಹಲವಾರು ತಾಸು ಕಾಯ್ದುಕೊಂಡು ಕುಳಿತುಕೊಳ್ಳುವ ಅನಿವಾರ್ಯತೆ ಎದುರಾಗಿದೆ ಎಂದರು.

ಸಾಮಾನ್ಯವಾಗಿ ಖಾಸಗಿ ವಾಹನದವರು ಕೇಳುವ ದುಪ್ಪಟ್ಟು ದರಕ್ಕೆ ಬಡವರು ಹಣ ಕೊಟ್ಟು ತಮ್ಮ ಊರು ಸೇರುವುದು ಅನಿವಾರ್ಯವಾಗಿದೆ. ಸರ್ಕಾರ ಕಾಲಹರಣ ಮಾಡುವುದರಿಂದ ಜನಸಾಮಾನ್ಯರೂ ಹೈರಾಣಾಗುತ್ತಿದ್ದಾರೆ‌.

ಸರ್ಕಾರ ಆದಷ್ಟು ಬೇಗನೆ ಸಾರಿಗೆ ನೌಕರರ ಬೇಡಿಕೆ ಬಗ್ಗೆ ಕಾರ್ಮಿಕರೊಂದಿಗೆ ಶೀಘ್ರ ಮಾತುಕತೆ ನಡೆಸುವ ಮೂಲಕ ಬೇಡಿಕೆ ಸ್ಪಂದಿಸಬೇಕು ಎಂದು ಸೋಪಿಸಾಬ್ ಡಿ ಸುರಪುರ ಹೇಳಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here