ಕೋವಿಡ್ ನಿಯಮ ಪಾಲಿಸದಿದ್ದಲ್ಲಿ ದಂಡ ಬೀಳಲಿದೆ: ಪಿಐ ಎಸ್.ಎಮ್.ಪಾಟೀಲ್

1
28

ಸುರಪುರ: ಕರೋನಾ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಸರ್ಕಾರವು ಕಟ್ಟುನೀಟ್ಟಾದ ನಿಯಮಾವಳಿಗಳನ್ನು ರೂಪಿಸಿದೆ ಅದನ್ನು ಮುದ್ರಣ ಅಂಗಡಿಗಳ ಮಾಲೀಕರು ಮತ್ತು ಕಲ್ಯಾಣ ಮಂಟಪಗಳ ಮಾಲೀಕರು ಕಡ್ಡಾಯವಾಗಿ ಅನುಸರಿಸಬೇಕು ಒಂದುವೇಳೆ ನಿರ್ಲಕ್ಷ ವಹಿಸಿದಲ್ಲಿ ದಂಡ ಹಾಕಲಾಗುವುದು ಅಲ್ಲದೆ ಕಠಿಣ ಕ್ರಮವನ್ನು ಜರುಗಿಸಲಾಗುವುದು ಎಂದು ಪೊಲೀಸ್ ಇನ್ಸ್ಪೇಕ್ಟರ್ ಎಸ್.ಎಮ್.ಪಾಟೀಲ್ ತಿಳಿಸಿದರು.

ನಗರದ ಪೊಲೀಸ್ ಠಾಣೆಯಲ್ಲಿ ಮುದ್ರಣ ಮಾಲೀಕರು ಮತ್ತು ಮಂಗಲ ಕಾರ್ಯಾಲಯಗಳ ಮಾಲೀಕರಿಗೆ ಹಮ್ಮಿಕೊಂಡಿದ್ದ ಜಾಗೃತಿ ಸಭೆಯಲ್ಲಿ ಮಾತನಾಡಿದ ಅವರು ರೂಪಾಂತರಿ ವೈರಸ ಕೊರೊನಾ ಎರಡನೇ ಅಲೆ ಹರಡುವಿಕೆ ಹೆಚ್ಚಾಗಿದ್ದು,ಇದನ್ನು ತಡೆಯಲು ಕಡ್ಡಾಯವಾಗಿ ಮಾಸ್ಕ ಮತ್ತು ಪರಸ್ಪರ ಅಂತರ ಕಾಯ್ದುಕೊಳ್ಳುವುದು ಹಾಗೂ ಸಾಮಾಜಿಕ ಅಂತರ ಕಾಪಾಡಬೇಕು ಮತ್ತು ಧಾರ್ಮಿಕ, ಸಭೆ, ಸಮಾರಂಭಗಳಿಗೆ ೨೦೦ ಜನರಿಗೆ ಸೀಮಿತಿಗೊಳಿಸಬೇಕು ಮದುವೆ ಕಾರ್ಡ್‌ಗಳನ್ನು ಮುದ್ರಣ ಮಾಡುವ ಮಾಲೀಕರು ೨೦೦ ಕಾರ್ಡ್ ಮಾತ್ರ ಮುದ್ರಿಸಬೇಕು. ಅದಕ್ಕಿಂತ ಹೆಚ್ಚಿಗೆ ಮುದ್ರಿಸಿದರೆ ಕರ್ನಾಟಕ ವಿಪತ್ತು ನಿರ್ವಹಣಾ ಕಾಯ್ದೆಯಡಿ ೧೦ ಸಾವಿರ ರೂ. ದಂಡ, ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

Contact Your\'s Advertisement; 9902492681

ಬದುಕಲ್ಲಿ ಯಶಸ್ಸು ಕಂಡ ಸಾಹಿತ್ಯ ರತ್ನಗಳು: ವಿಶ್ವರಾಧ್ಯ ಸತ್ಯಂಪೇಟೆ.

ಮದುವೆ ಮತ್ತು ಸಮಾರಂಭಗಳಿಗೆ ಒಳಾಂಗಣವಾದರೆ ೧೦೦ ಜನ, ಹೊರಾಂಗಣವಾದರೆ ೨೦೦ ಜನರಿಗೆ ಸೇರಲು ಅವಕಾಶವಿರುತ್ತದೆ. ಅದಕ್ಕಿಂತ ಹೆಚ್ಚು ಸೇರಿದರೆ ದಂಡದ ಜತೆಗೆ ಎಫ್‌ಐಆರ್ ದಾಖಲಿಸಲಾಗುತ್ತದೆ. ಜನರಿಗೆ ಈ ಬಗ್ಗೆ ನಗರಸಭೆ ಮತ್ತು ಪೊಲೀಸರು ಸೇರಿ ಜಾಗೃತಿ ಮೂಡಿಸಲಾಗುತ್ತದೆ. ಮುದ್ರಣ ಮಾಲೀಕರು ಹೆಚ್ಚು ಕಾರ್ಡ್ ಮುದ್ರಿಸುವಂತೆ ಯಾರಾದರೂ ಒತ್ತಾಯಿಸಿದರೆ ಅವರ ಬಗ್ಗೆ ಕಡ್ಡಾಯವಾಗಿ ಇಲಾಖೆಗೆ ಮಾಹಿತಿ ನೀಡಬೇಕು. ಕಲ್ಯಾಣ ಮಂಟಪದಲ್ಲಿ ೨೦೦ ಜನರಿಗಿಂತ ಹೆಚ್ಚು ಕಂಡುಬಂದರೆ ಕೇಸು ದಾಖಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ನಗರಸಭೆ ಸದಸ್ಯ ನಾಸೀರ ಕುಂಡಾಲೆ, ರಾಜಾ ಹರ್ಷ ನಾಯಕ, ಗೋಪಾಲದಾಸ ಲಡ್ಡಾ, ಶಕೀಲ ಅಹ್ಮದ್ ಸೇರಿದಂತೆ ನಗರದ ಮುದ್ರಣ ಅಂಗಡಿಗಳ ಮಾಲಿಕರು ಮತ್ತು ಮಂಗಲ ಕಾರ್ಯಾಲಯದ ಮಾಲಿಕರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here