ಕೋವಿಡ್ ರೆಮಿಡಿಸಿವಿಯರ್ ಇಂಜೆಕ್ಷನ್‌ ಆಕ್ರಮ ಮಾರಾಟ: ಮೂವರ ಬಂಧನ

0
39

ಕಲಬುರಗಿ: ಕೋವಿಡ್ ಎರಡನೇ ಅಲೇ ದೇಶವನ್ನು ಕಾಡುತ್ತಿದ್ದು, ಆಸ್ಪತ್ರೆಯಲ್ಲಿ ಬೆಡ್, ವೆಂಟಿಲೇಟರ್, ಆಕ್ಸಿಜನ್ ಹಾಗೂ ಕೋವಿಡ್ ಸಂಬಂಧಿಸಿದ ರೆಮಿಡಿಸಿವಿಯರ್ ಇಂಜೆಕ್ಷನ್‌ ಕೊರತೆಯಿಂದ ಸಾವಿನ ಸಂಖ್ಯೆ ಏರಿಕೆಯಾಗುತ್ತಿದೆ.

ಕೊರೊನಾ ಮಹಾಮಾರಿಯನ್ನು ಬಂಡವಾಳವಾಗಿ ಮಾಡಿಕೊಂಡು ಹಲವರು ಲೋಟಿಗೆ ನಿಲ್ಲುತ್ತಿದ್ದು, ಕೋವಿಡ್ ಸಂಬಂಧಿಸಿದ ರೆಮಿಡಿಸಿವಿಯರ್ ಇಂಜೆಕ್ಷನ್‌ ಅಧಿಕ ಬೆಲೆಯಲ್ಲಿ ಆಕ್ರಮವಾಗಿ ಮಾರಾಟ ಮಾಡುತ್ತಿದ ಜಾಲವನ್ನು ಕಲಬುರಗಿ ರೌಡಿ ನಿಗ್ರಹ ತಂಡ ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸುವಲಿ ಯಶಸ್ವಿಯಾಗಿದ್ದಾರೆ.

Contact Your\'s Advertisement; 9902492681

ರಸ್ತೆಯ ಮೇಲೆ ವ್ಯಾಪಾರ ಮಾಡಿದರೆ ಕಠಿಣ ಕ್ರಮ: ತಹಸೀಲ್ದಾರ ವರ್ಮಾ

ನಗರದ ರೌಡಿ ನಿಗ್ರಹ ದಳದ ಪಿಎಸ್ಐ ವಾಹೀದ್ ಕೋತ್ವಾಲ, ಪಿಎಸ್ಐ ಹುಸೇನ್ ಬಾಷಾ, ಎಎಸ್ಐ ರಾಜಕುಮಾರ್, ಸಿಬ್ಬಂದಿ ತೌಸೀಫ್, ಶಿವಾನಂದ, ಈರಣ್ಣ, ರಾಜು ಫರತಾಬಾದ್ ಒಳಗೊಂಡ ತಂಡ ನಗರದ ಬಿಗ್ ಬಜಾರ್ ಹತ್ತಿರ ದಾಳಿ ನಡೆಸಿದಾಗ ಒಂದು ಇಂಜೆಕ್ಷನ್‌ 25 ಸಾವಿರಕ್ಕೆ ಮಾರಾಟ ಮಾಡುತ್ತಿದ ಖಚಿತ ಮಾಹಿತಿ ಆಧರಿಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಡೈಗ್ನೋಸೀಕ್ ಮತ್ತು ಎಕ್ಷರೆ ಟೆಕ್ನಿಷಿಯನ್ ಆಗಿರುವ ಜೇವರ್ಗಿ ತಾಲ್ಲೂಕಿ ಯಳಾವರಾ ಗ್ರಾಮದ ಭೀಮಾಶಂಕರ (27), ಸಿದ್ಧಗಂಗಾ ಮೆಡಿಕಲ್ ಕೆಲಸ ಮಾಡುವ ಅಫಜಲಪುರ ತಾಲ್ಲೂಕಿನ ಅಂಕಲಗಾದ ನಿವಾಸಿ ಲಕ್ಷ್ಮಿಕಾಂತ (20) ಹಾಗೂ ಸ್ಟಾಫ್ ನರ್ಸ್ ಆಗಿರುವ ನಗರದ ಖಮರ್ ಕಾಲೋನಿಯ ನಿವಾಸಿ ಜಿಲಾನಿ ಖಾನ್ (32) ಬಂಧಿತ ಆರೋಪಿಗಳು.

ಕಾನ್ಸ್ಟೇಬಲ್ ನೇಮಕಾತಿ ಪ್ರಕ್ರಿಯೆ ನಡೆಸಲು ಆಗ್ರಹ

ಬೆಂಗಳೂರು ಮತ್ತು ಬೆಳಗಾವಿಯಲ್ಲಿ ಇರುವ ತಮ್ಮ ಸಂಬಂಧಿಕರಿಂದ ಖಾಸಗಿ ಬಸ್ ಗಳ ಮೂಲಕ ರೆಮಿಡಿಸಿವಿಯರ್ ಇಂಜೆಕ್ಷನ್‌ ತರಿಸಿಕೊಂಡು ನಗರದಲ್ಲಿ 25 ಸಾವಿರಕ್ಕೆ ಆಕ್ರಮವಾಗಿ ಮಾರಟ ಮಾಡುತ್ತುದರು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕುರಿತು ನಗರದ ಬ್ರಹ್ಮಪುರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here