ಕೋವಿಡ್ ತಡೆಗಟ್ಟುವ ನಿಟ್ಟಿನಲ್ಲಿ ನಗರಸಭೆಯ ಸದಸ್ಯರು ಸಹಕಾರ ನೀಡಿ: ವರ್ಮಾ

0
56

ಶಹಾಬಾದ :ಕರೋನಾ ರೋಗದ ಬಗ್ಗೆ ಸಾರ್ವಜನಿಕರು ಭಯಪಡಬೇಕಾದ ಅವಶ್ಯಕತೆಯಿಲ್ಲ.ಮುಂಜಾಗೃತ ಕ್ರಮವಾಗಿ ಎಲ್ಲರೂ ಮಾಸ್ಕ್ ಧರಿಸಿವುದರ ಜತೆಗೆ, ಮನೆಯಿಂದ ಹೊರಗಡೆ ಬಾರದೇ ಹೋದರೆ ರೋಗ ಬಾರದಂತೆ ತಡೆಗಟ್ಟಬಹುದು ಎಂದು ತಹಸೀಲ್ದಾರ ಸುರೇಶ ವರ್ಮಾ ಹೇಳಿದರು.

ಅವರು ಶುಕ್ರವಾರ ನಗರಸಭೆಯ ಸಭಾಂಗಣದಲ್ಲಿ ತಾಲೂಕಾ ಆಡಳಿತ ಮತ್ತು ನಗರಸಭೆ ವತಿಯಿಂದ ನಗರಸಭೆ ಸದಸ್ಯರಿಗೆ ಆಯೋಜಿಸಲಾದ ಕರೋನಾ ಸೋಂಕಿನ ಬಗ್ಗೆ ಜನಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

Contact Your\'s Advertisement; 9902492681

ಕೋವಿಡ್ ರೆಮಿಡಿಸಿವಿಯರ್ ಇಂಜೆಕ್ಷನ್‌ ಆಕ್ರಮ ಮಾರಾಟ: ಮೂವರ ಬಂಧನ

ಕರೋನಾ ಎಂಬ ಮಹಾಮಾರಿ ರೋಗ ಹರಡಿ ಜನರು ಇದರಿಂದ ಬಳಲುತ್ತಿದ್ದು, ಇಂತಹ ರೋಗದಿಂದ ಸಾವಿಗೀಡಾಗಿರುವವರ ಸಂಖ್ಯೆ ದಿನದಿಂದ ದಿನ ಏರುತ್ತಿದ್ದು ಈ ರೋಗವನ್ನು ತಡೆಯಲು ಪ್ರತಿಯೊಬ್ಬರೂ ಮಾಸ್ಕ್ ಧರಿಸುವುದು ಅವಶ್ಯಕ. ಅಲ್ಲದೇ ನಗರಸಭೆಯ ಸದಸ್ಯರು ತಮ್ಮ ವಾರ್ಡನ ಉಸ್ತುವಾರಿ ಕೋವಿಡ್ ಸಂಕ್ರಮಣ ವ್ಯಕ್ತಿಗಳ ಮಾಹಿತಿ ಸಂಗ್ರಹಿಸಿ ತಿಳಿಸುವ ಕೆಲಸ ಹಾಗೂ ಜಾಗೃತಿ ಮೂಡಿಸಬೇಕು. ಅಲ್ಲದೇ ತಾಲೂಕಾಡಳಿತಕ್ಕೆ ಸಹಕಾರ ನೀಡಬೇಕೆಂದು ಹೇಳಿದರು.

ತಾಲೂಕಾ ಆರೋಗ್ಯ ಅಧಿಕಾರಿ ದೀಪಕ್ ಪಾಟೀಲ ಮಾತನಾಡಿ, ಕರೋನಾ ರೋಗ ವ್ಯಾಪವಾಗಿ ಹರಡುತ್ತಿದೆ.ಕರೊನಾ ಸೊಂಕು ತಗುಲಿದ ವ್ಯಕ್ತಿಗಳನ್ನು ಸರಕಾರಿ ಆಸ್ಪತ್ರೆಗೆ ತೆರಳಿ ನೊಂದಣಿ ಮಾಡಿಸಿದರೇ, ಅವರಿಗೆ ಬೆಡ್ ಇರುವ ಆಸ್ಪತ್ರೆಯನ್ನು ಸೂಚಿಸುತ್ತಾರೆ.ಅಲ್ಲದೇ ಖಾಸಗಿ ಆಸ್ಪತ್ರೆಯಲ್ಲಿ ಬೆಡ್ ಖಾಲಿ ಇದ್ದರೂ ಅಲ್ಲಿಯೂ ಸೇರಿಸುತ್ತಾರೆ.ಆ ಸಂದರ್ಭದಲ್ಲಿ ರೆಮೆಡಿಸಿವಿಯರ್ ಲಸಿಕೆಯನ್ನು ಸರಕಾರದಿಂದ ಒದಗಿಸುವ ಕೆಲಸ ಮಾಡಲಾಗುತ್ತಿದೆ. ನಗರಸಭೆಯ ಸದಸ್ಯ ಶರಣು ವಸ್ತ್ರದ್ ಮಾತನಾಡಿ, ರೆಮೆಡಿಸಿವಿಯರ್ ಲಸಿಕೆ 8ರಿಂದ 15 ಸಾವಿರವರೆಗೆ ಮಾರಾಟವಾಗುತ್ತಿದೆ.ಈ ಬಗ್ಗೆ ಪತ್ರಿಕೆಗಳಲ್ಲಿ ಬರುತ್ತಿದೆ.ಅಲ್ಲದೇ ಆಕ್ಸಿಜನ್ ಕೊರತೆ,ಆಸ್ಪತ್ರೆಗಳಲ್ಲಿ ಬೆಡ್ ಸಿಗದೇ ಜನರು ಪರದಾಡುತ್ತಿದ್ದಾರೆ.ಅಲ್ಲದೇ ನಗರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕೋವಿಡ್ ಚಿಕಿತ್ಸಾ ಕೇಂದ್ರ ತೆರೆದು ಅನುಕೂಲ ಮಾಡಿಕೊಡಿ ಎಂದರು.

ರಸ್ತೆಯ ಮೇಲೆ ವ್ಯಾಪಾರ ಮಾಡಿದರೆ ಕಠಿಣ ಕ್ರಮ: ತಹಸೀಲ್ದಾರ ವರ್ಮಾ

ರೆಮೆಡಿಸಿವಿಯರ್ ಮಾರಾಟವಾಗುತ್ತಿರುವ ಬಗ್ಗೆ ಗಮನಕ್ಕೆ ಬಂದಿದ್ದು, ಯಾವ ಆಸ್ಪತ್ರೆಯಲ್ಲಿ ಲಸಿಕೆ ಬಾಕಗಿದೆ ಅವರಿಗೆ ಮಾತ್ರ ಒದಗಿಸಲಾಗುತ್ತಿದೆ.ಅಲ್ಲದೇ ಎಲ್ಲಾ ಲಸಿಕೆಗಳು ಜಿಲ್ಲಾಧಿಕಾರಿಗಳ ಹತೋಟಿಯಲ್ಲಿವೆ.ಅದಕ್ಕೆ ಅಧಿಕಾರಿಗಳನ್ನು ನೇಮಿಸಲಾಗಿದೆ.ಅಲ್ಲದೇ ಶಹಾಬಾದ ಆರೋಗ್ಯ ಕೇಂದ್ರದಲ್ಲಿ ಆಕ್ಸಿಜನ್ ಪೈಪ್‍ಲೈನ್ ಅಳವಡಿಸಲಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಬಳಕೆಗೆ ಅವಕಾಶವಿದೆ ಎಂದು ಹೇಳಿದಾಗ ಮಾತ್ರ ಪ್ರಾರಂಬ ಮಾಡುತ್ತೆವೆ.ಸದ್ಯದಲ್ಲೇ ಆ ಕುರಿತು ಕ್ರಮ,ಕೈಗೊಳ್ಳುತ್ತೆವೆ ಎಂದು ತಾಲೂಕಾ ಆರೋಗ್ಯ ಅಧಿಕಾರಿ ದೀಪಕ್ ಪಾಟೀಲ ಹೇಳಿದರು.

ನಗರಸಭೆಯ ಅಧ್ಯಕ್ಷೆ ಅಂಜಲಿ ಗಿರೀಶ ಕಂಬಾನೂರ, ಉಪಾಧ್ಯಕ್ಷೆ ಸಲೀಮಾಬೇಗಂ, ಪೌರಾಯುಕ್ತ ಡಾ.ಕೆ. ಗುರಲಿಂಗಪ್ಪ, ತಾಪಂ ಇಓ ಲಕ್ಷ್ಮಣ ಶೃಂಗೇರಿ, ಪಿಎಸ್‍ಐ ಯಲ್ಲಮ್ಮ, ನಗರಸಭೆಯ ವ್ಯವಸ್ಥಾಪಕ ಶಂಕರ ಇಂಜಗನೇರಿ, ಕಂದಾಯ ಅಧಿಕಾರಿ ಸುನೀಲ ವೀರಶೆಟ್ಟಿ, ವಾಡಿ-ಶಹಾಬಾದ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕನಕಪ್ಪ ದಂಡಗುಲಕರ್, ಬಿಜೆಪಿ ಅಧ್ಯಕ್ಷ ಅಣವೀರ ಇಂಗಿನಶೆಟ್ಟಿ, ಕಾಂಗ್ರೆಸ್ ಅಧ್ಯಕ್ಷ ಡಾ.ರಶೀದ್ ಮರ್ಚಂಟ್ ಸೇರಿದಂತೆ ನಗರಸಭೆಯ ಸರ್ವ ಸದಸ್ಯರು ಇದ್ದರು.

ನಗರಸಭೆಯಿಂದ ಆಟೋಗಳ ಧವನಿವರ್ಧಕಗಳ ಮೂಲಕ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಗುತ್ತಿದೆ. ನಗರದ ಅಂಗಡಿಗಳನ್ನು ಬಂದ್ ಮಾಡಿಸಲಾಗಿದೆ.ಜನರು ಅನಾವಶ್ಯಕವಾಗಿ ಓಡಾಡದಂತೆ ಪೊಲೀಸ್ ಇಲಾಖೆ ಕ್ರಮವಹಿಸಿದೆ.ಆದರೂ ಕೆಲವು ವ್ಯಾಪಾರಸ್ಥರು ಕದ್ದು ಮುಚ್ಚಿ ಅಂಗಡಿಗಳಲ್ಲಿ ವ್ಯಾಪಾರ ಮಾಡುತ್ತಿದ್ದಾರೆ.ಅಂತಹವರ ವಿರುದ್ಧ ಕ್ರಮಕೈಗೊಳ್ಳಲಾಗುತ್ತದೆ. – ಡಾ.ಕೆ.ಗುರಲಿಂಗಪ್ಪ ಪೌರಾಯುಕ್ತ ನಗರಸಭೆ ಶಹಾಬಾದ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here