ಅನಾವಶ್ಯಕವಾಗಿ ರಸ್ತೆಗೆ ಬಂದ ಜನರಿಗೆ ತಹಸೀಲ್ದಾರ ನೇತೃತ್ವದಲ್ಲಿ ಲಾಠಿ ಹಿಡಿದು ಎಚ್ಚರಿಕೆ

3
349

ಶಹಾಬಾದ: ಕೋವಿಡ್ ೧೯  ರೋಗ ವ್ಯಾಪಕವಾಗಿ ಹರಡುತ್ತಿರುವುದರಿಂದ ಮುಂಜಾಗೃತ ಕ್ರಮವಾಗಿ ಸರ್ಕಾರ sಸೆಮಿ ಲಾಕ್ ಡೌನ್ ಆದೇಶ ಹೊರಡಿಸಿ, ಮನೆಯಿಂದ ಯಾರು ಹೊರಗಡೆ ಬರದಂತೆ ಮನವಿ ಮಾಡಿದರೂ ನಗರದ ಕೆಲವು ಪಡ್ಡೆ ಹುಡುಗರು ವಿನಾಕಾರಣ ರಸ್ತೆಯ ಮೇಲೆ ಬರುತ್ತಿರುವುದನ್ನು ಕಂಡ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ.

ಕಳೆದ ನಾಲ್ಕಾರು ದಿನಗಳಿಂದ ಕೊರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸಲಾಗಿದೆ.ಸಭೆ ನಡೆಸಲಾಗಿದೆ. ಸಾರ್ವಜನಿಕರಿಗೆ ಇದರ ತೀವ್ರತೆ ಬಗ್ಗೆ ತಿಳಿಹೇಳಲಾಗಿದ್ದರೂ, ಕೆಲವು ಜನರು ಯಾವುದಕ್ಕೂ ತಲೆಕೆಡಿಸಿಕೊಳ್ಳುತ್ತಿಲ್ಲ.ಅಲ್ಲದೇ ತಾಲೂಕಾಡಳಿತದ ಆದೇಶಕ್ಕೂ ಕಿಮ್ಮತ್ತು ನೀಡುತ್ತಿಲ್ಲ.ಆದ್ದರಿಂದ ಅವರಿಗೆ ಚಳಿ ಬಿಡಿಸಲು ತಹಸೀಲ್ದಾರ ಸುರೇಶ ವರ್ಮಾ, ಪೌರಾಯುಕ್ತ ಡಾ.ಕೆ.ಗುರಲಿಂಗಪ್ಪ, ಪಿಎಸ್‌ಐಗಳಾದ ತಿರುಮಲೇಶ, ಯಲ್ಲಮ್ಮ ಅವರು ಸ್ವತಃ ತಾವೇ ರಸ್ತೆಗೆ ಇಳಿದು ಲಾಠಿ ರುಚಿ ತೋರಿಸಿ, ಮನೆಗೆ ತೆರಳುವಂತೆ ಕಟ್ಟುನಿಟ್ಟಿನ ಕ್ರಮಕೈಗೊಂಡಿದ್ದಾರೆ.

Contact Your\'s Advertisement; 9902492681

ಕೃಷಿ ಸಂಜೀವಿನಿ ಪ್ರಯೋಗಾಲಯರೈತರಿಗೆ ಬಹುಪಯೋಗ

ಶನಿವಾರ ನಗರದ ಮುಖ್ಯ ರಸ್ತೆಗಳು, ವೃತ್ತಗಳು, ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಗ್ರಾಮೀಣ ರಸ್ತೆಗಳು ವಾಹನಗಳಿಲ್ಲದೇ ಜನರಿಲ್ಲದೇ ಬಿಕೋ ಎನ್ನುತ್ತಿದ್ದವು.ನಗರದ ಕೆಲವು ಪ್ರದೇಶಗಳಲ್ಲಿ ಜನರು ಗುಂಪು ಗುಂಪಾಗಿ ಇರುವುದನ್ನು ಕಂಡು ಪೊಲೀಸರು ಅಲ್ಲಿಂದ ಹೋಗುವಂತೆ ಮಾಡಿದ್ದಾರೆ.ಯಾವುದೇ ಕಾರಣಕ್ಕೂ ಜನರು ಕಟ್ಟೆಯ ಮೇಲೆ ಕೂಡುವುದು, ಇಸ್ಪೀಟ್ ಆಡುವುದು ಕಂಡರೆ ಥಳಿಸಿ, ಕೇಸ್ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಮೆಡಿಕಲ್, ಹಾಲು, ಹಣ್ಣು ಹಾಗೀ ಕಿರಾಣಾ ಅಂಗಡಿ ಮಾತ್ರ ಬೆಳಿಗ್ಗೆ ೧೦ರವರೆಗೆ ಅವಕಾಶ ನೀಡಲಾಗಿತ್ತು. ೧೦ ಗಂಟೆಯ ನಂತರ ಅವರು ಅಂಗಡಿಗಳನ್ನು ಬಂದ್ ಮಾಡಿ ಮನೆ ಕಡೆಗೆ ಹೋದರು. ನಗರದ ರೇಲ್ವೆ ನಿಲ್ದಾಣ, ಬಸ್ ನಿಲ್ದಾಣದಲ್ಲಿ ಯಾವತ್ತು ಜನರಿಂದ ಕೂಡಿರುತ್ತಿದ್ದ ಸ್ಥಳದಲ್ಲಿ ಶನಿವಾರ ಸ್ಮಶಾನ ಮೌನ ಆವರಿಸಿತ್ತು.ನಗರದ ಯಾವುದೇ ರಸ್ತೆಗೂ ಹೋದರೂ ಎಲ್ಲಾ ಅಂಗಡಿಗಳು ಬಂದ್ ಆಗಿದ್ದು ಕಾಣಿಸುತ್ತಿತ್ತು.  ರೇಲ್ವೆ ನಿಲ್ದಾಣ, ಬಸ್ ನಿಲ್ದಾಣ, ನಗರದ ಪ್ರತಿ ವೃತ್ತಗಳಲ್ಲಿ, ಮುಖ್ಯ ಬೀದಿಗಳಲ್ಲಿ, ರಾಷ್ಟ್ರೀಯ ಹೆದ್ದಾರಿಯ ರಸ್ತೆಯ ಮುಖ್ಯ ವೃತ್ತಗಳಲ್ಲಿ ಸಿಬ್ಬಂದಿಗಳನ್ನು ನೇಮಿಸಿ ಸೂಕ್ತ ಪೊಲೀಸ್ ಬಂದೋಬಸ್ತ ಮಾಡಲಾಗಿತ್ತು.

ನೈಸರ್ಗಿಕ, ಸಾವಯವ, ಶೂನ್ಯ ಬಂಡವಾಳ ಮತ್ತು ರಾಸಾಯನಿಕ ಕೃಷಿಯೂ..!

ಈ ಸಂದರ್ಭದಲ್ಲಿ ಕಂದಾಯ ಅಧಿಕಾರಿ ಸುನೀಲಕುಮಾರ ವೀರಶೆಟ್ಟಿ, ನಗರಸಭೆಯ ಆರೋಗ್ಯ ನಿರೀಕ್ಷಕ ಶೀವರಾಜಕುಮಾರ,ಶರಣು, ಎಎಸ್‌ಐ ಸಾತಲಿಂಗಪ್ಪ, ಪೊಲೀಸ್ ಸಿಬ್ಬಂದಿಗಳಾದ ವಿಶ್ವನಾಥ ಹೂಗಾರ, ಹುಸೇನ ಪಾಷಾ, ನಿಂಗಣ್ಣಗೌಡ ಪಾಟೀಲ, ಓಬಳೇಶ, ರಾಜಶೇಖರ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here