ಕರ್ನಾಟಕಕ್ಕೆ ಆಕ್ಸೀಜನ್ ಕೊಡುವಲ್ಲಿಯೂ ಕೇಂದ್ರದ ಕ್ಯಾತೆ: ಡಾ. ಅಜಯ್ ಸಿಂಗ್ ಕಳವಳ

0
46

ಕಲಬುರಗಿ: ಕೋವಿಡ್ ಸೋಂಕು- ಸಾವಿನಿಂದ ಕಂಗೆಟ್ಟಿರುವ ಕರ್ನಾಟಕಕ್ಕೆ ಪೂರೈಸುವ ಆಮ್ಲಜನಕದ ಪ್ರಮಾಣವನ್ನು ಕೂಡಲೇ 1, 200 ಮೆಟ್ರಿಕ್ ಟನ್‍ಗೆ ಹೆಚ್ಚಿಸಿ ಎಂದು ಹೈಕೋರ್ಟ್ ನೀಡಿರುವ ಆದೇಶಕ್ಕೆ ತಡೆಕೋರಿ ಕೇಂದ್ರ ಸುಪ್ರೀಂಕೋರ್ಟ್ ಮೊರೆ ಹೋಗಿರುವ ವಿಚಾರ ಅತ್ಯಂತ ಆಘಾತಕಾರಿÀ ಬೆಳವಣಿಗೆಯಾಗಿದೆ ಎಂದು ವಿಧಾನಸಬೆ ವಿರೋಧ ಪಕ್ಷದ ಮುಖ್ಯ ಸಚೇತಕ ಹಾಗೂ ಜೇವರ್ಗಿ ಶಾಸಕ ಡಾ. ಅಜಯ್ ಸಿಂಗ್ ತೀವ್ರ ಆತಂಕ ಹೊರಹಾಕಿದ್ದಾರೆ.

ಈ ಕುರಿತಂತೆ ಹೇಳಿಕೆ ನೀಡಿರುವ ಅವರು ಕರ್ನಾಟಕದ ಪಾಲಿನ ಆಮ್ಲಜನಕವನ್ನು ಕೇಂದ್ರವು ಇತರೆ ರಾಜ್ಯಗಳಿಗೆ ಕಳಿಸುತ್ತಿದೆ. ಕರ್ನಾಟಕದಲ್ಲಿ ಆಮ್ಲಜನಕವಿಲ್ಲದೆ ಸಾವುಗಳಿಗೆ ಘಟಿಸುತ್ತಿವೆ.  ದಾಖಲೆಯ 50 ಸಾವಿರ ಸೋಂಕು ಸಾವಿರಾರು ಸಾವು ಸಂಭವಿಸುತ್ತಿರುವ ರಾಜ್ಯದಲ್ಲಿ ಆಮ್ಲಜನಕದ ಹಾಗಾಕಾರ ಉಂಟಾಗಿದ್ದರೂ ಕೇಂದ್ರ ಈ ರೀತಿ ಕ್ಯಾತೆ  ಮಾಡುವುದು ಮಾನವೀಯತೆ ಅಲ್ಲ, ತಕ್ಷಣ ಹೈಕೋರ್ಟ್ ಸೂಚನೆ ಪಾಲಿಸುವ ಮೂಲಕ ಹೆಚ್ಚುವರಿ 1, 200 ಎಂಟಿ ಟನ್ ಆಕ್ಸೀಜನ್ ರಾಜ್ಯಕ್ಕೆ ನೀಡಲೇಬೇಕು ಎಂದು ಆಗ್ರಹಿಸಿದ್ದಾರೆ.

Contact Your\'s Advertisement; 9902492681

ಕಲಬುರಗಿ: ಆಸ್ಪತ್ರೆಯಲ್ಲಿ ಮೃತಪಟ್ಟು ಹತ್ತುಗಂಟೆ ಕಳೆದರು ನೋಡುವವರಿಲ್ಲ

ಮುಂಚೆ 965 ಎಂಟಿ ಟನ್ ಆಮ್ಜನಕ ಕೇಂದ್ರದಿಂದ ರಾಜ್ಯಕ್ಕೆ ಬರುತ್ತಿತ್ತು. ಇಲ್ಲಿನ ಸೋಂಕು- ಸಾವಿನ ಪ್ರಮಾಣ ಕಂಡು, ಹೆಚ್ಚುತ್ತಿರುವ ಪ್ರಾಣವಾಯು ಬೇಡಿಕೆಗೆ ಮನವರಿಕೆ ಮಾಡಿಕೊಂಡೇ ಹೈಕೋರ್ಟ್ 1, 200 ಮೆಟ ಆಕ್ಸಜನ್ ಪೂರೈಸಲು ಆದೇಶ ನೀಡಿದೆ, ಇಂತಹ ವೈದ್ಯಕೀಯ ತುರ್ತು ಪರಿಸಥಿತಿಯಲ್ಲೂ ಕೇಂದ್ರ ಕಾನೂನು ಸಮರಕ್ಕೆ ಮುಂದಾಗಿರೋದು ದುರದೃಷ್ಟಕರ ಸಂಗತಿ ಎಂದು ಡಾ. ಅಜಯ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.

ರಾಜ್ಯಾದಿಂದ  25 ಮಂದಿ ಬಿಜೆಪಿ ಸಂಸದರು ಆಯ್ಕೆಯಾಗಿದ್ದಾರೆ. ರಾಜ್ಯದ ಜನ ಬಿಜೆಪಿಬಬೆಂಬಲಿಸಿದ್ದಕ್ಕೆ ಇಏನಾ ಬಿಜೆಪಿ ರಾಜ್ಯಕ್ಕೆ ಕೊಡುತ್ತಿರುವ ಕೊಡುಗೆ? ಎಂದದು ಲೇವಡಿ ಮಾಡಿರುವ ಡಾ. ಅಜಯ್ ಸಿಂಗ್ ತಕ್ಷಣ ನಮ್ಮ ರಾಜ್ಯದ ಸಂಸದರು ಒಂದಾಗಿ ಹೆಚ್ಚುವರಿ ಆಕ್ಸೀಜನ್ ಕೊಡುವಂತೆ ಕೇಂದ್ರದ ಮೇಲೆ ಒತ್ತಡ ತರಬೇಕು. ಸಂಕಷ್ಟದ ಕಾಲದಲ್ಲಿ ಇಂಚಹ ಕೋರ್ಟ್ ಮೊಕದ್ದಮೆ ಹೂಡುವಂತಹದಕ್ಕೆ ಆಸ್ಪದ ಇರದಂತೆ ಕೇಂದ್ರ ಕರ್ನಾಟಕಕ್ಕೆ ನೆರವಿಗೆ ದಾವಿಸುವಂತೆ ಮಾಡಲಿ ಎಂದು ಆಗ್ರಹಿಸಿದ್ದಾರೆ.

ಕೋವಿಡ್ ನಿಂದ ತಂದೆ ತಾಯಿ ಇಬ್ಬರನ್ನು ಕಳೆದು ಕೊಂಡ ಮಕ್ಕಳಿಗೆ ಉಚಿತ ಶಿಕ್ಷಣ: ಶ್ರೀಗಳು

ಆಮ್ಲನಕ ಕೊgತೆಯಿಂದಾಗಿ ಕಲಬುರಗಿಯಿಂದ ಚಾಮರಾಜನಗರವರೆಗೂ ಸಾವು ನೋವು ಸಂಭವಿಸುತ್ತಿವೆ. ಚಾಮರಾಜ ನಗರದಲ್ಲಿ ಪ್ರಾಣವೈಆಯುಗಾಗಿ  24 ಸಾವುಗಳು, ಕಲಬುರಗಿಯಲ್ಲಿ, ಅಫಜಲಪುರದಲ್ಲಿಯೂ 10 ಸಾವುಗಳು ಸಂಭಿಸಿವೆ. ಸಾವಿರಾರು ಜನರು ಆಮ್ಲಜನಕ ಸಿಗದ, ಬೆಡ್ ಸಿಗದೆ, ಬೀದಿಯ ಮೇಲೆ ನರಳುತ್ತಿದ್ದಾರೆ. ಆಸ್ಪತ್ರೆ ಬೆಡ್ ಆಮ್ಲಜನಕ ಸಿಗಲಾರದ್ದಕ್ಕೆ ಮನೆಗಳಲ್ಲಿಯೇ ನರಳುತ್ತ ಸಾವಿಗೆ ಒಳಗಾಗುತ್ತಿದ್ದಾರೆ. ಈ ದಾಖಲಾತಿ ಸರಕಾರದ ಹತ್ತಿರ ಇಲ್ಲವೆ ಇಲ್ಲ. ಕೊರೋನಾದ ಸಾವುಗಳು ಅಕ್ಷರಶಃ ಸರಕಾರದ ಅಲಕ್ಷತನದಿಂದಾಗುತ್ತಿರುವ ಬಲಿಗಳು ಎಂಬಂತಾಗಿದೆ ಎಂದು ಡಾ. ಅಜಯ್ ಸಿಂಗ್ ರಾಜ್ಯ ಸರಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಆಮ್ಲಜನಕ, ರೆಮ್‍ಡಿಸಿವಿರ್ ಇಂಜೆಕ್ಷನ್, ಆಸ್ಪತ್ರೆ ಬೆಡ್  ವಿತರಣೆಯಲ್ಲಿ  ಅಸಮತೋಲನವಿದೆ, ಸಾಮಾನ್ಯ ಬಡವರಿಗೆ ದೊರೆಯುತ್ತಿಲ್ಲ. ಇವೆಲ್ಲವೂ ಹಣವಂತರ ಪಾಲಾಗುತ್ತಿವೆ. ದೊಡ್ಡ ಮಟ್ಟದ ಕಾಳದಂಧೆ ನಡೆಯುತಿದೆ. ಕಲಬುರಗಿಯಲ್ಲಿಯಂತೂ ಆಮ್ಲಜನಕದ ಕೊರತೆ ಬೆಡ್ ಕೊರತೆ ಅಗಾಧವಾಗಿದೆ. ಜಿಲ್ಲೆಗೆ ಇನ್ನೂ 20 ಕೆಎಲ್ ಹೆಚ್ಚುವರಿ ಆಮ್ಲಜನಕ ಬೇಕಿದ್ದರೂ ಪೂರೈಕೆಯಾಗುತ್ತಿಲ್ಲ. ಜಂಬೋ ಸಿಲಿಂಡರ್, ದುರಾ ಸಿಲಿಂಡರ್ ಕೊರತೆ ಕಾಡುತ್ತಿದ್ದರೂ ಕೇಳುವವರಿಲ್ಲ.

ಪೊಲೀಸರಿಗೆ ಬೆಂಬಿಡದೇ ಕಾಡುತ್ತಿದೆ ಕೊರೊನಾ

ಈ ಸಮಸ್ಯೆ ಪರಿಹರಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ವಿಫಲವಾಗಿದೆ. ಕೂಡಲೇ ಆಮ್ಲಜನಕ ಪೂರೈಕೆ ಮತ್ತು ಬೆಡ್ ವ್ಯವಸ್ಥೆಯು ಬೇಡಿಕೆ ಮತ್ತು ಅವಶ್ಯಕತೆಗಣವಾಗಿ ಮಾಡಲೇಬೇಕು. ಜನರು ಬೀದಿಗಿಳಿಯುವ ಮುನ್ನ ಈ ಕೆಲಸವಾಗಬೇಕು, ಪರಿಸ್ಥಿತಿ ಹೀಗೆಯೇ ಮುಂದುವರಿದಲ್ಲಿ ಸಾವು ನೋವುಗಳಿಗೆ ಸರಕಾರವೇ ಹೊಣೆ ಹೊರಬೇಕಾಗುತ್ತದೆ ಎಂದು ಡಾ. ಅಜಯ್ ಸಿಂಗ್ ಎಚ್ಚರಿಕೆ ನೀಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here