ಕಟ್ಟಡ ಕಾರ್ಮಿಕರಿಗೆ 10 ಸಾವಿರ ರೂ. ಪರಿಹಾರ ಘೋಷಣೆಗೆ ಆಗ್ರಹಿಸಿ ಪ್ರತಿಭಟನೆ

0
23

ಕಲಬುರಗಿ: ಪ್ರತಿ ತಿಂಗಳು ೧೦ ಸಾವಿರ ರೂ.ಗಳಂತೆ ಮೂರು ತಿಂಗಳ ಕಾಲ ರಾಜ್ಯದ ಎಲ್ಲ ವಿಧಗಳ ಕಟ್ಟಡ ಕಾರ್ಮಿಕ ಕುಟುಂಬಗಳಿಗೆ ಆರ್ಥಿಕ ನೆರವು ನೀಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಫೆಡರೇಷನ್ ನೇತೃತ್ವದಲ್ಲಿಂದು ಪ್ರತಿ ಭಟನೆಯ ಮೂಲಕ ಸರ್ಕಾರಕ್ಕೆ ಒತ್ತಾಯಿ ಸಲಾಯಿತು.

ಕೋವಿಡ್ -೧೯ ಎರಡನೆ ಅಲೆಯ ಲಾಕ್‌ಡೌನ್ ಘೋಷಣೆಯಿಂದ ರಾಜ್ಯದ ನೋಂದಾಯಿತ ಮತ್ತು ವಲಸೆ ಕಾರ್ಮಿಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಕುಟುಂಬಗಳಿಗೆ ಘೋಷಿ ಸಲಾಗಿರುವ ೩೦೦೦ ರೂ.ಗಳ ನೆರವನ್ನು ೧೦ ಸಾವಿರ ರೂ.ಗಳಿಗೆ ಹೆಚ್ಚಿಸಬೇಕು ಎಂಬ ಪ್ರಮುಖ ಬೇಡಿಕೆಯ ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳ ಮುಖಾಂತರ ಕಾರ್ಮಿಕರ ಸಚಿವರಿಗೆ ಸಲ್ಲಿಸಲಾಯಿತು.

Contact Your\'s Advertisement; 9902492681

ಕೋವಿಡ್ ನಿಯಮನು ಸಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಕೈಗೊಂಡ ಪ್ರತಿಭಟನೆಯಲ್ಲಿ ಶ್ರೀಮಂತ ಬಿರಾದಾರ, ನಾಗಯ್ಯಾ ಜಿ. ಸ್ವಾಮಿ, ಸುಧಾಮ ಧನ್ನಿ, ಪ್ರಕಾಶ ತಾಲಮಡಗಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here