ಕೊರೊನಾದಿಂದ ಅನಾಥರಾದ ಮಕ್ಕಳಿಗೆ ಇನ್ನೊವೇಟಿವ್‌ ಇಂಟರ್‌ನ್ಯಾಶನಲ್‌ ಸ್ಕೂಲ್‌ ನಿಂದ ಉಚಿತ ಶಿಕ್ಷಣ

0
27

ಕಲಬುರಗಿ: ಕೊರೋನಾ ಸೋಂಕಿಗೆ ತಂದೆ, ತಾಯಿ, ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಎಲ್.ಕೆ.ಜಿಯಿಂದ 10ನೇ ತರಗತಿವರೆಗಿನ 50 ಮಕ್ಕಳಿಗೆ ಉಚಿತ ಶಿಕ್ಷಣ ನೀಡುವುದಾಗಿ ಜಿಲ್ಲೆಯ ಖಾಸಗಿ ಶಾಲೆಯ ಸಂಸ್ಥೆ ಮುಂದಾಗಿದೆ.

ಕೊರೋನಾ ಸೋಂಕಿಗೆ ತಂದೆ, ತಾಯಿ, ಪೋಷಕರನ್ನು ಕಳೆದುಕೊಂಡ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ನಗರದ ಇನ್ನೊವೇಟಿವ್‌ ಇಂಟರ್‌ನ್ಯಾಶನಲ್‌ ಸ್ಕೂಲ್‌ ಈ ಮಹತ್ವದ ಕಾರ್ಯಾಕ್ಕೆ ಮುಂದಾಗಿದೆ ಎಂದು ಶಾಲೆಯ ಮುಖ್ಯಸ್ಥರಾದ ಈ ಜಮೀರ್‌ ಅಹಮದ್‌ ತಿಳಿಸಿದ್ದಾರೆ.

Contact Your\'s Advertisement; 9902492681

ಕೊರೋನಾ ವೈರಸ್‌ ಸೋಂಕಿನಿಂದ ಕುಟುಂಬದ ದುಡಿಯುವ ಸದಸ್ಯರು ಮೃತಪಟ್ಟಿದ್ದರೆ, ಅಂತಹ ಕುಟುಂಬದ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ಎಲ್.ಕೆ.ಜಿಯಿಂದ 10ನೇ ತರಗತಿವರೆಗಿನ 50 ಮಕ್ಕಳಿಗೆ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವುದಾಗಿ ಸಂಸ್ಥೆಯು ನಿರ್ಧರಿಸಿದ್ದು, ಅಂತಹ ಮಕ್ಕಳನ್ನು ಗುರುತಿಸಿ ದಾಖಲಿಸುವ ಹೊಣೆಯನ್ನು ಶಾಲಾ ಮಂಡಳಿಯು ಗುಲ್ಬರ್ಗಾ ಎನ್‌ಜಿಓ ಫೆಡರೇಷನ್‌ಗೆ ವಹಿಸಿದೆ ಎಂದು ಎನ್‌ಜಿಓ ಫೆಡರೇಶನ್‌ನ ರಿಯಾಜ್‌ ಖತೀಬ್‌ ತಿಳಿಸಿದ್ದಾರೆ.

ದಾಖಲಾತಿ ಪಡೆಯಲು ಜೂನ್‌ 15 ಕೊನೆಯ ದಿನವಾಗಿದ್ದು, ಆಸಕ್ತರು ಎನ್‌ಜಿಓ ಫೆಡರೇಶನ್‌ನ ರಿಯಾಜ್‌ ಖತೀಬ್‌ 8792443034, ಅಜೀಮ್‌ ಶೇಕ್‌ 9036396949 ಅವರನ್ನು ಸಂಪರ್ಕಿಸಬಹುದಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here