ವಿಠ್ಠಲ್ ನಾಯಕಗೆ ಪಕ್ಷ ಸಂಘಟನೆ ಜವಾಬ್ದಾರಿ ನೀಡಿ ಬಿಜೆಪಿ ರಾಜ್ಯಾಧ್ಯಕ್ಷಗೆ ಮನವಿ

0
201

ಚಿತ್ತಾಪುರ:ಪ್ರತಿಷ್ಠಿತ ಚಿತ್ತಾಪುರ ಮತ ಕ್ಷೇತ್ರದ ಪಕ್ಷ ಸಂಘಟನೆಯ ಜವಾಬ್ದಾರಿಯನ್ನು ಮಾಜಿ ಶಾಸಕರಾದ ದಿವಂಗತ ವಾಲ್ಮೀಕಿ ನಾಯಕ ಅವರ ಪುತ್ರ ವಿಠಲ್ ನಾಯಕ್ ಗೆ ನೀಡಬೇಕು ಎಂದು ವಾಡಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ವೀರಣ್ಣ ಯಾರಿ ಅವರು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ ಕಟೀಲ್ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದರು.

ಕಲಬುರ್ಗಿಯ ವಿಮಾನ ನಿಲ್ದಾಣದಲ್ಲಿ ಪಕ್ಷದ ರಾಜ್ಯಾಧ್ಯಕ್ಷರನ್ನು ನಳಿನ್ ಕುಮಾರ ಕಟೀಲ್ ರನ್ನು ಭೇಟಿ ಮಾಡಿ ಚಿತ್ತಾಪುರ ಮತ ಕ್ಷೇತ್ರದಲ್ಲಿ ತಳಮಟ್ಟದಿಂದ

Contact Your\'s Advertisement; 9902492681

ಬಿಜೆಪಿ ಪಕ್ಷದವನ್ನು ಕ್ಷೇತ್ರದಲ್ಲಿ ಕಟ್ಟಿ ಬೆಳೆಸುವಲ್ಲಿ ಶ್ರಮಿಸಿದಂತಹ ಹಾಗೂ ಸಾಮಾನ್ಯ ಕಾರ್ಯಕರ್ತರ ಶಕ್ತಿಯಾಗಿದ್ದಂತ ಮಾಜಿ ಶಾಸಕರಾದ ವಾಲ್ಮೀಕ ನಾಯಕ ಅವರ ಅಗಲಿಕೆ ಯಿಂದ ಕ್ಷೇತ್ರದ ಜನರಲ್ಲಿ ಅನಾಥ ಪ್ರಜ್ಞೆ ಕಾಡುತ್ತಿದೆ.

ಮೀಸಲು ಕ್ಷೇತ್ರದಲ್ಲಿ ಏಕೈಕ ಕಮಲ ನಾಯಕರಾಗಿ ಗುರುತಿಸಿಕೊಂಡಿದ್ದ ದಿ.ವಾಲ್ಮೀಕಿ ನಾಯಕ್ ಅವರು ಕಾಂಗ್ರೆಸ್ ನ ಹಿರಿಯ ನಾಯಕ ಡಾ.ಮಲ್ಲಿಕಾರ್ಜುನ ಖರ್ಗೆ ಅವರ ಎದುರು ಸ್ಪರ್ದಿಸಿ ಅತ್ಯಂತ ಕಡಿಮೆ ಮತಗಳ ಅಂತರದಿಂದ ಪರಾಭವಗೊಂಡಿದ್ದರು.ನಂತರ ಮಲ್ಲಿಕಾರ್ಜುನ ಖರ್ಗೆ ಅವರು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದ ಬಳಿಕ ನಡೆದ ಉಪ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ಪ್ರಿಯಾಂಕ್ ಖರ್ಗೆ ಅವರನ್ನು ಸೋಲಿಸಿ ಗೆಲವು ಸಾಧಿಸಿದ್ದರು.ಮುಂದಿನ ವಿಧಾನ ಸಭೆ ಚುನಾವಣಾಯಲ್ಲಿ ಅದೇ ಪ್ರಿಯಾಂಕ್ ಖರ್ಗೆ ಅವರ ವಿರುದ್ಧ ಸ್ಪರ್ದಿಸಿ ಸೋಲುಂಡಿದ್ದರು.

ಕ್ಷೇತ್ರದಲ್ಲಿ ಬಿಜೆಪಿ ಅಂದರೆ ವಾಲ್ಮೀಕಿ ನಾಯಕ್ ಎನ್ನುವಷ್ಟು ಪ್ರಬಲ ಬಿಜೆಪಿ ನಾಯಕರಾಗಿದ್ದರು.ವಾಲ್ಮೀಕಿ ನಾಯಕ್ ಅವರ ಅಗಲಿಕೆಯಿಂದ ಕ್ಷೇತ್ರದ ಬಿಜೆಪಿ ಪಾಳೆಯ ಒಡೆಯನಿಲ್ಲದ ಮನೆಯಂತಾಗಿದೆ, ಆದಷ್ಟೂ ಬೇಗ ರಾಜ್ಯಾಧ್ಯಕ್ಷರು ಹಾಗೂ ಪಕ್ಷದ ವರಿಷ್ಠರು ಪ್ರತಿಷ್ಠಿತ ಮತ ಕ್ಷೇತ್ರಗಳಲ್ಲಿ ಒಂದಾದ ಚಿತ್ತಾಪುರ ಮತ ಕ್ಷೇತ್ರದಲ್ಲಿ ಪಕ್ಷ ಬಲವರ್ಧನೆಗೆ ಕಾರ್ಯಕರ್ತರಲ್ಲಿ ಆತ್ಮ ಸ್ಥೈರ್ಯ ಮೂಡಿಸಲು ಹಾಗೂ ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿರುವ ಮಾಜಿ ಶಾಸಕರಾದ ‌ದಿವಂಗತ ವಾಲ್ಮೀಕ ನಾಯಕ ಅವರ ಪುತ್ರ ವಿಠಲ ನಾಯಕ ಅವರಿಗೆ ಪಕ್ಷವು ಇನ್ನೂ ಹೆಚ್ಚಿನ ಜವಾಬ್ದಾರಿ ನೀಡಿ ಕ್ಷೇತ್ರದ ‌ಕಾರ್ಯಕರ್ತರಲ್ಲಿ ಶಕ್ತಿಯನ್ನು ‌ಇಮ್ಮಡಿಗೊಳಿಸಬೇಕೆಂದು ಮನವಿ ಮಾಡಿದ್ದರು.

ಈ ಸಂದರ್ಭದಲ್ಲಿ ಶಾಸಕರಾದ ರಾಜಕುಮಾರ ಪಾಟೀಲ್ ತೆಲ್ಕೂರ್, ದತ್ತಾತ್ರೇಯ ಪಾಟೀಲ್ ರೇವೂರ್, ಬಿಜೆಪಿ ಜಿಲ್ಲಾ ಅಧ್ಯಕ್ಷರಾದ ಶಿವರಾಜ್ ಪಾಟೀಲ್ ರದ್ದೆವಾಡಗಿ ಮುಖಂಡರಾದ ವಿಠಲ್ ನಾಯಕ್,ಚಂದ್ರಶೇಖರ ಅವಂಟಿ,ಮಲ್ಲಿಕಾರ್ಜುನರೆಡ್ಡಿ ಇಜಾರ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here