ಕರೆಂಟ್ ಶಾಕ್‍ಗೆ ಕೆಪಿಸಿಸಿ ಸದಸ್ಯ ಹಣಮಂತ ಭೂಸನೂರ್ ಖಂಡನೆ

0
35

ಕಲಬುರಗಿ:ರಾಜ್ಯದಲ್ಲಿ ಹಿಂದಿನ ಏಪ್ರಿಲ್ 1 ರಿಂದಲೇ ಜಾರಿಗೆ ಬರುವಂತೆ ವಿದ್ಯುತ್ ದರಹೆಚ್ಚಳ ಮಾಡಿರುವ ರಾಜ್ಯ ಸರಕಾರದ ತೀರ್ಮಾನವನ್ನು ಕೆಪಿಸಿಸಿ ಸದಸ್ಯ ಹಣಮಂತ ಭೂಸನೂರ್ ಉಗ್ರವಾಗಿ ಖಂಡಿಸಿದ್ದಾರೆ.

ಪ್ರತಿ ಯೂನಿಟ್‍ಗೆ 30 ಪೈಸೆ ದರ ಹೆಚ್ಚಳವಾಗಿದೆ, ಜೊತೆಗೇ ಸ್ಥಾರವಗಳ ಠೇವಣಿಯೂ ಹೆಚ್ಚಿಸಲಾಗಿದೆ. ಮೊದಲೇ ಕೊರೋನಾದಿಂದ ಕಂಗಾಲಾಗಿರುವ ಜನತೆಗೆ ಇದು ಶಾಕ್ ನೀಡಿದಂತಾಗಿದೆ. ತಕ್ಷಣ ದರ ಹೆಚ್ಚಳ ಕೈಬಿಡಬೇಕು. ಕೊರೋನಾ ಲಾಕ್‍ಡೌನ್‍ನಿಂದ ಆರ್ಥಿಕ ತೊಂದರೆ.ಲ್ಲಿರುವ ಜನತೆಗೆ ನೆಮ್ಮದಿ ಬೇಕಿದೆ. ಈಗಾಗಲೇ ಪೆಟ್ರೋಲ್, ಅಡುಗೆ ಅನೀಲ ಬೆಲೆ ಏರಿಕೆ ಬಿಸಿಯಲ್ಲೇ ನೊಂದಿರುವ ಜನತೆಗೆ ಕರೆಂಟ್ ಕೂಡಾ ಸಾಕ್ ನೀಡಿದರೆ ಅವರು ಬಗದುಕುವುದಾದರೂ ಹೇಗೆ ಎಂದು ಭೂಸನೂರ್ ಕರೆಂಟ್ ದರ ಹೆಚ್ಚಳದ ನಿರ್ಧಾರವನ್ನು ಉಗ್ರವಾಗಿ ಖಂಡಿಸಿದ್ದಾರೆ.

Contact Your\'s Advertisement; 9902492681

ದರ ಹೆಚ್ಚಳ ಕೈಬಿಡಬೇಕು, ಥ್ರೀ ಫೇಸ್ ಕೆರಂಟ್ ಕೊಡುವಲ್ಲಿ ಸೇವಾ ಗುಣಮಟ್ಟ ಹೆಚ್ಚಿಸಬೇಕು, ವಿದ್ಯುತ್ ಕಂಪನಿಗಳು ಗುಣಮಟ್ಟದ ಕರೆಂಟ್ ನೀಡಿ ರೈತರ ನೆರವಿಗೆ ನಿಲ್ಲಬೇಕು. ರಾಜ್ಯ ಸರಕಾರ ರೈತರಿಗೆ ನೆರವಿನ ಯೋಜನೆ ಘೋಷಿಸಿ ಕರೆಂಟ್ ಭಾರ ಇಳಿಸಬೇಕು. ಇದನ್ನು ಬಿಟ್ಟು ದರ ಹೆಚ್ಚಳಕ್ಕೆ ಮುಂದಾದಲ್ಲಿ ಕೊರೋನಾದಿಂದಲೇ ಕಂಗೆಟ್ಟಿರುವ ನಾಡಿನ ರೈತರು ದರ ಹೆಚ್ಚಳ, ಬೆಲೆ ಎರಿಕೆಯಲ್ಲೇ ಬೆಂದು ಆತ್ಮಹತ್ಯೆ ದಾರಿ ಹಿಡುಯವ ದಿನಗಳು ದೂರವೇನಿಲ್ಲವೆಂದು ಭೂಸನೂರ್ ಸರಕಾರಕ್ಕೆ ಎಚ್ಚರಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here