ಹಣಮಂತ ಕೂಡಲಗಿ ಕೊಲೆ ಪ್ರಕರಣ ಆರೋಪಿಗಳಿಗೆ ಶಿಕ್ಷೆಯಾಗಲಿ; ದಲಿತ ಸಮಿತಿ ಆಗ್ರಹ

0
98

ಜೇವರ್ಗಿ: ಇಡೀ ರಾಜ್ಯದಲ್ಲಿಯೇ ತಲ್ಲಣ ಮೂಡಿಸಿರುವ ಕೂಡಲಗಿ ಗ್ರಾಮದ ಹನುಮಂತ ಚಂದ್ರಶಾ ಕೂಡಲಗಿ ಅವರ ಕೊಲೆ ಪ್ರಕರಣವನ್ನು ತಾಲೂಕು ದಲಿತ ಸಮನ್ವಯ ಸಮಿತಿ ಖಂಡಿಸಿ ಪ್ರತಿಭಟನೆ ನಡೆಸಿತು.

ಪ್ರಕರಣವನ್ನು ಕೂಲಂಕೂಷವಾಗಿ ತನಿಖೆಗೆ ಒಳಪಡಿಸಬೇಕು ಮತ್ತು ತಪ್ಪಿತಸ್ಥ ಆರೋಪಿಗಳಿಗೆ ಶಿಕ್ಷೆ ವಿಧಿಸಬೇಕು, ಪ್ರತೀಕಾರದ ದಳ್ಳುರಿ ಕಿಚ್ಚಿಗೆ ಎರಡು ಕುಟುಂಬಗಳು ಸರ್ವನಾಶ ಆಗುತ್ತಿವೆ, ಕಾನೂನು-ಸುವ್ಯವಸ್ಥೆ ಮೇಲೆ ಸಾರ್ವಜನಿಕರ ಬರವಸೆ ಹಾಳಾಗದಂತೆ ನೋಡಿಕೊಳ್ಳಬೇಕೆಂದು ಸಮನ್ವಯ ಸಮಿತಿಯ ಕಾರ್ಯಕರ್ತರು ಜಿಲ್ಲಾಧಿಕಾರಿಗಳಿಗೆ ಜೇವರ್ಗಿ ತಹಸೀಲ್ದಾರರ ಮೂಲಕ ಮನವಿ ಪತ್ರವನ್ನು ಸಲ್ಲಿಸಿದರು.

Contact Your\'s Advertisement; 9902492681

ಭೀಕರ ಕೊಲೆ ಪ್ರಕಾರ ದಿಂದಾಗಿ ನೈತಿಕವಾಗಿ ಮಾನಸಿಕವಾಗಿ ಕುಗ್ಗಿ ಹೋಗಿರುವ ಕುಟುಂಬದ ಸದಸ್ಯರಿಗೆ ಸೂಕ್ತ ರಕ್ಷಣೆ ನೀಡಬೇಕು ಹಾಗೂ ಪ್ರಕರಣ ಕುರಿತು ಸೂಕ್ತ ತನಿಖೆ ನಡೆಸಿ ಆರೋಪಿಗಳಿಗೆ ಶಿಕ್ಷೆ ಕೊಡಿಸುವ ಭರವಸೆಯನ್ನು ನೀಡುವಲ್ಲಿ ಸರಕಾರ ಮುಂದೆ ಬರಬೇಕೆಂದು ಆಗ್ರಹಿಸಿದರು .

ಸದರಿ ಪ್ರಕರಣ ಸುಖಾಂತ್ಯ ಗೊಳ್ಳುವಂತೆ ಸೂಕ್ತ ಪರಿಹಾರ ಕ್ರಮಗಳನ್ನು ಕೈಗೊಂಡು ಸರಕಾರ ಮುನ್ನೆಚ್ಚರಿಕೆಯ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ದಲಿತ ಸಮನ್ವಯ ಸಮಿತಿ ಜೀವರ್ಗಿಯ ಪದಾಧಿಕಾರಿಗಳು ಸರ್ಕಾರವನ್ನು ಆಗ್ರಹಿಸಿದ್ದಾರೆ.

ಈ ಕುರಿತಂತೆ ಮನವಿ ಪತ್ರವನ್ನು ಸಲ್ಲಿಸುವಾಗ ದಲಿತ ಮುಖಂಡರಾದ, ಭೀಮರಾಯ ನಗನೂರ್, ಮಲ್ಲಣ್ಣ ಕೊಡಚಿ, ಮಲ್ಲಿಕಾರ್ಜುನ್ ಕಟ್ಟಿಮನಿ ಕೆಲ್ಲೂರು, ದವಲಪ್ಪ ಮದನ್, ಸಿದ್ದರಾಮ ಕಟ್ಟಿ ಮಂತ ಧನಕರ್, ರಾಜಶೇಖರ ಶಿಲ್ಪಿ, ಮಹೇಶ್ ಕೋಕಿಲ, ಶ್ರೀಹರಿ ಕರ್ಕಿಹಳ್ಳಿ, ಭಾಗಣ್ಣ ಸಿದ್ಧನಾಳ, ಭೀಮಾಶಂಕರ ಕಟ್ಟಿಸಂಗಾವಿ, ಸಿದ್ದು ಜನಿವಾರ, ಭಾಗಣ್ಣ ಕಟ್ಟಿ, ದೇವಿಂದ್ರ ಮುದಬಾಳ ಇತರ ದಲಿತ ಮುಖಂಡರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here