ಬೆಂಗಳೂರು: ಇಂದು ಕೇಂದ್ರ ಸರಕಾರದ ಮೊದಲನೆ ಬಜೆಟ್ ಮಂಡಿಸಿದ ವಿತ್ತ ಸಚಿವೆ ಸೀತಾರಾಮನ್ ಅವರು ಸಮಾನತೆಯನ್ನು ಸಾರಿದ ಬಸವಣ್ಣನವರ ಹೆಸರನ್ನು ಬಜೆಟ್ ಮಂಡನೆಯ ನಡೆಸಿದ ಸಂದರ್ಭದಲ್ಲಿ ವಿತ್ತ ಸಚಿವರು ಅಲ್ಲಲ್ಲಿ ಉಲ್ಲೇಖ ಮಾಡಿದ್ದು ಸ್ವಾಗತಾರ್ಹ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
Completely disappointed with #Budget2019 for Karnataka. We are one of the biggest tax contributors to Govt, but have not got anything in return. Expected more from a finance minister who got elected from the state. Looks like the state is the biggest loser inspite of 26 BJP MPs.
— Priyank Kharge (@PriyankKharge) July 5, 2019
ಆದರೆ ಅತಿಹೆಚ್ಚು ತೆರೆಗೆ ನೀಡುವ ಪಟ್ಟಿಯಲ್ಲಿ ಕರ್ನಾಟಕ ಒಂದಾಗಿದ್ದು, ರಾಜ್ಯ ಕೇಂದ್ರದಿಂದ ಬಹಳಾಷ್ಟು ನಿರೀಕ್ಷೆಗಳು ಇತ್ತು, ಆದರೆ ಬಸವಣ್ಣನವರ ಮೂಲ ಆಶಯವಾಗಿದ್ದ ಸಮಬಾಳು ತತ್ತ್ವಕ್ಕನುಗುಣವಾಗಿ ವಿತ್ತ ಸಚಿವರೇ ಪ್ರತಿನಿಧಿಸಿರುವ, 26 ಬಿಜೆಪಿ ಸಂಸದರು ಹೊಂದಿದ ಕರ್ನಾಟಕಕಕ್ಕೆ ಯಾವುದೇ ಯೋಜನೆ ಪ್ರಕಟಿಸದಿರುವುದು ನಿರಾಸೆ ತಂದಿದೆ ಎಂದು ಸಮಾಜಕಲ್ಯಾಣ ಸಚಿವ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ತಮ್ಮ ಟ್ವೀಟರ್ ಖಾತೆಯಲ್ಲಿ ಕೇಂದ್ರ ಸರಕಾರದ ಚೊಚ್ಚಲ ಬಜೆಟ್ ಮಂಡನೆ ಕುರಿತು ನಿರಾಸೆ ತಂದಿದೆ ಎಂದು ಪ್ರತಿಕ್ರಿಯಿಸಿದ್ದಾರೆ.