ನವ ದುರ್ಗೆಯರ ನವ ಲೀಲೆಗಳು ದೇವಿಯ ಒಂಭತ್ತು ದಿನದ ಪುಸ್ತಕ ಬಿಡುಗಡೆ

0
14

ಕಲಬುರಗಿ: ನಗರದ ಲಾಲಗೇರಿ ಕ್ರಾಸ್ ಹತ್ತಿರ ಇರುವ ಶ್ರೀ ಅಂಬಾ ಭವಾನಿ ದೇವಸ್ಥಾನದಲ್ಲಿ ನವ ದುರ್ಗೆಯರ ನವ ಲೀಲೆಗಳ ಕುರಿತು ದೇವಿಯ ಒಂಭತ್ತು ಅವತಾರಗಳ ಸಂಕ್ಷೀಪ್ತ ವಿವರಣೆ ಹೋಂದಿರುವ ಪುಸ್ತಕವನ್ನು ಚವದಾಪುರಿ ಹಿರೇಮಠದ ಡಾ.ರಾಜಶೇಖರ ಶಿವಾಚಾರ್ಯರು ಬಿಡುಗಡೆಗೋಳಿಸಿ ಮಾತನಾಡುತ್ತಾ ನವರಾತ್ರಿಯ ಆಚರಣೆಯು ತನ್ನದೆ ಆದ ಆಧ್ಯಾತ್ಮಿಕ ಮಹತ್ವವನ್ನು ಹೊಂದಿದೆ ನವ ಎಂದರೆ ಒಂಭತ್ತು ಮಹಿಷಾಸುರನ ನಾಶಕ್ಕಾಗಿ ಅವತಾರ ತಾಳಿದ ಶ್ರೀ ದೇವಿಯು ಪಾಡ್ಯದಿಂದ ನವಮಿಯವರೆಗೆ ಒಂಭತ್ತು ದಿನಗಳ ಕಾಲ ಯುದ್ಧವನ್ನು ಮಾಡಿ ನವಮಿಯ ರಾತ್ರಿ ಅವನನ್ನು ಕೊಂದಳು ಅಂತಹ ಅಸುರೀ ಮತ್ತು ಕ್ರೂರ ರಾಕ್ಷಸನನ್ನು ವಧಿಸಿದ ಶಕ್ತಿ ಮಾತೆಯ ಆರಾಧನೆ ದೇಶದ್ಯಾಂತ ವಿಶೇಷವಾಗಿ ಆಚರಿಸಲಾಗುತ್ತದೆ.

೯ ದಿನಗಳ ದುರ್ಗೋತ್ಸವದ ಪರ್ವವನ್ನು ಪುಸ್ತಕದ ಮೂಲಕ ಹೊರತರುತ್ತಿರುವುದು ಅತಿ ಸಂತಸದ ವಿಷಯ. ಈ ಭಾಗದ ಅತ್ಯಂತ ಪುರಾತನ ದೇವಸ್ಥಾನ ದೇವರಗುಡಿ ಮನೆತನದ ಭವಾನಿ ಮಂದಿರ ಸ್ಥಾಪನೆಯಾಗಿನಿಂದಲ್ಲೂ ಈ ಮನೆತನವು ದೇವಿಯ ಆರಾಧನೆಯನ್ನು ಪ್ರತಿವರ್ಷ ದಸರಾ ನಿಮಿತ್ಯವಾಗಿ ಅತ್ಯಂತ ವೈಭವಯುತವಾಗಿ ಆಚರಿಸುತ್ತಾ ಬಂದಿದ್ದಾರೆ ಸದ್ಯದ ಶ್ರೀ ಸುಭಾಷ ದೇವರಗುಡಿ ಕುಟುಂಬದವರು ಆ ವೈಭವವನ್ನು ಇಮ್ಮುಡಿಗೊಳಿಸಿದ್ದಾರೆ.

Contact Your\'s Advertisement; 9902492681

ಇಂತಹ ಕುಟುಂಬ ವರ್ಗವು ನಮ್ಮ ಚವದಾಪೂರಿ ಹಿರೇಮಠದ ಶಿಷ್ಯ ಪರಂಪರೆಯಲ್ಲಿ ಬಂದಿರುವುದು ನಮಗೆ ಅತಿ ಸಂತೋಷವನ್ನುಂಟು ಮಾಡಿದೆ. ಅಂತೆಯೇ ಶ್ರೀ ಮಠದ ಪ್ರತಿಯೊಂದು ಕಾರ್ಯಕ್ರಮಕ್ಕೆ ಮೆರಗು ತಂದು ಕೊಡುತ್ತಾರೆ ಇಂತಹ ದೇವರಗುಡಿ ಕುಟುಂಬಕ್ಕೆ ಶಾಂಭವಿಮಾತೆ ಶ್ರೀ ಶರಣಬಸವೇಶ್ವರರು ಮತ್ತು ಶ್ರೀ ಶಾಂತವೀರ ಶಿವಾಚಾರ್ಯರು ಆಯುರಾರೋಗ್ಯ ಕೊಟ್ಟು ಆಶೀರ್ವದಿಸಲಿ ಎಂದು ಶಿವಾಚಾರ್ಯರು ನುಡಿದರು.

ಕಾರ್ಯಕ್ರಮ ಸಂಯೋಜಕ ಸುಭಾಷ ದೇವರಗುಡಿ ಹಾಗೂ ಕುಟುಂಬದವರು ಮತ್ತು ಭಕ್ತಾಧಿಗಳು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here