ಜೇವರ್ಗಿ :ತಾಲೂಕಿನ ಕೊಡಚಿ ಗ್ರಾಮ ಪಂಚಾಯತಿಯಲ್ಲಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕಾರ್ಮಿಕರು ನಿರ್ವಹಿಸಬೇಕಾದ ಕೆಲಸಕ್ಕೆ ಯಂತ್ರಗಳ ದುರ್ಬಳಕೆ ಮಾಡಲಾಗುತ್ತಿದೆ.
ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕಂಪೌಂಡ್ ಕಾಮಗಾರಿಯಲ್ಲಿ ಜೆ.ಸಿ.ಪಿ ಬಳಸಿದ್ದಾರೆ .ಅಲ್ಲದೆ ಸರಕಾರಿ ಮಾನದಂಡಗಳನ್ನು ಧಿಕ್ಕರಿಸಿ ,ಜೆ.ಸಿ.ಬಿಗಳ ಮೂಲಕ ಕೆಲಸ ಮಾಡಿಸಿದ್ದಾರೆ.
ಸರಕಾರಿ ಹಣವನ್ನು ವಾಮ ಮಾರ್ಗದಿಂದ ಪಡೆಯಲು ಪ್ರಯತ್ನ ನಡೆದಿದೆ.ಇದೇ ರೀತಿ ಎಲ್ಲಾ ಕೆಲಸಗಳಲ್ಲಿ ತೊಡಗಿದ್ದಾರೆ. ಪಂಚಾಯತಿಯ ಕಾಮಗಾರಿಗಳನ್ನು ಕೊಳ್ಳೆ ಹೊಡೆಯಲು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ವಿಜಯ ನೇವಣಿ ಸಹಕಾರ ನೀಡುತ್ತಿದ್ದಾರೆ, ಎಂದು ತಿಳಿದುಬಂದಿದೆ. ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರು ಸರಕಾರಿ ಹಣವನ್ನು ಲೂಟಿ ಮಾಡುವ ಅಕ್ರಮ ಸಂಚುಗಾರಿಕೆ ನಡೆಸಿದ್ದಾರೆಂದು , ಗ್ರಾಮಸ್ಥರು ಆರೋಪಿಸಿದ್ದಾರೆ.
ಅಲ್ಲದೆ ಪ್ರತಿಯೊಂದು ಕಾಮಗಾರಿಗೂ ಪರ್ಸೆಂಟೇಜ್ ಹಣ ಕೇಳುತ್ತಿದ್ದಾರೆ ಎಂದು ತಿಳಿದುಬಂದಿದೆ. ಇದರಿಂದ ಕೆಲಸ ಮಾಡಿದ ಕಾರ್ಮಿಕರು ಹಾಗೂ ಗುತ್ತಿಗೆದಾರರಿಗೆ ಬೇಸರವಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.