ಕಂಪ್ಯೂಟರ್ ಖರಿದಿ ನಿರ್ವಹಣೆಯಲ್ಲಿ ಅವ್ಯವಹಾರ ತನಿಖೆಗೆ ಆರ್.ವಿ.ನಾಯಕ ಒತ್ತಾಯ

0
20

ಸುರಪುರ: ಹುಣಸಗಿ ತಾಲೂಕಿನ ೧೮ ಗ್ರಾಮ ಪಂಚಾಯತಿಗಳಲ್ಲಿ ಕಂಪ್ಯೂಟರ್ ಖರಿದಿ ಮತ್ತು ನಿರ್ವಹಣೆ ಹೆಸರಲ್ಲಿ ಭಾರಿ ಭ್ರಷ್ಟಾಚಾರ ನಡೆದಿದ್ದು ಇದನ್ನು ತನಿಖೆಗೊಳಪಡಿಸುವಂತೆ ಮಾಜಿ ಶಾಸಕ ರಾಜಾ ವೆಂಕಟಪಪ್ ನಾಯಕ ಒತ್ತಾಯಿಸಿದ್ದಾರೆ.

ಈ ಕುರಿತು ಯಾದಗಿರಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಪತ್ರ ಬರೆದು ಒತ್ತಾಯಿಸಿದ್ದು, ನನ್ನ ಮತಕ್ಷೇತ್ರ ವ್ಯಾಪ್ತಿಯ ಹುಣಸಗಿ ತಾಲೂಕು ಪಂಚಾಯತ ವ್ಯಾಪ್ತಿಯ ೧೮ ಗ್ರಾಮ ಪಂಚಾಯತಿಗಳಲ್ಲಿನ ೧೪ ಮತ್ತು ೧೫ ನೇ ಹಣಕಾಸು ಯೋಜನೆ ಅಡಿಯಲ್ಲಿ ಕಂಪ್ಯೂಟರ್ ನಿರ್ವಹಣೆ ಮತ್ತು ಖರೀದಿಗಾಗಿ ಸರಿ ಸುಮಾರು ಕೋಟಿಗೂ ಅಧಿಕ ಮೊತ್ತದ ಅವ್ಯವಹಾರವನ್ನು ಮಾಡಲಾಗಿದೆ. ಈ ಪ್ರಕರಣದಲ್ಲಿ ಆಯಾ ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿ ಮತ್ತು ಕೋಳಿಹಾಳ ಗ್ರಾಮ ಪಂಚಾಯತ ಕಂಪ್ಯೂಟರ್ ಆಪರೇಟರ್ ಎಂದು ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ತಮ್ಮದೆ ಆದ ಏಜೇನ್ಸಿಗೆ ಹಣ ವರ್ಗಾಯಿಸಿದ ಕುರಿತು ಹುಣಸಗಿ ತಾಲೂಕು ವ್ಯಾಪ್ತಿಯ ಸಾರ್ವಜನಿಕರು ನನ್ನ ಗಮನಕ್ಕೆ ದಾಖಲೆ ಸಮೇತವಾಗಿ ತಂದಿರುತ್ತಾರೆ.

Contact Your\'s Advertisement; 9902492681

ಅಕ್ರಮಗಳಲ್ಲಿ ವಿಶೇಷವಾಗಿ ಕಂಪ್ಯೂಟರ್ ಆಪರೇಟರ್ ಯಾವುದೇರೀತಿಯ ಕಂಪ್ಯೂಟರ್‌ಗೆ ಸಂಭಂಧಿಸಿದ ಸಾಮಗ್ರಿಗಳನ್ನು ಖರೀದಿಸದೆ ಮತ್ತು ಅದರ ನಿರ್ವಹಣೆ ಮಾಡದೆ ತಮ್ಮದೆ ಆದ ಏಜೇನ್ಸಿಯ ಬಿಲ್‌ಗಳನ್ನು ಸೃಷ್ಟಿಸಿ, ಅಧಿಕ ಮೊತ್ತದ ಸರ್ಕಾರದ ಹಣವನ್ನು ಸಿಬ್ಬಂದಿಯ ಬ್ಯಾಂಕ ಖಾತೆಗೆ ಜಮೆ ಮಾಡಿದ್ದಿರುತ್ತದೆ. ಬೈಚಬಾಳ, ಕೋಳಿಹಾಳ, ಮಾಳನೂರು, ಬರದೇವನಾಳ, ಜೋಗುಂಡಭಾವಿ ಗ್ರಾಮ ಪಂಚಾಯತಿಗಳಲ್ಲಿ ಈ ಅವ್ಯವಹಾರದ ಬಗ್ಗೆ ಹುಣಸಗಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಈಗಾಗಲೆ ಸಾರ್ವಜನಿಕರು ದೂರನ್ನು ಸಲ್ಲಿಸಿದ್ದಾರೆ.

ಕಾರಣ ತಾವು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಖುದ್ದಾಗಿ ಪರಿಶೀಲಿಸಿ ಅವ್ಯವಹಾರದಲ್ಲಿ ಭಾಗಿಯಾದ ಅಧಿಕಾರಿ ಮತ್ತು ಸಿಬ್ಬಂದಿಯ ಮೇಲೆ ಕ್ರೀಮಿನಲ್ ಮೊಕದ್ದಮೆ ದಾಖಲಿಸಿ, ಅಮಾನತ್ತುಗೊಳಿಸಬೇಕು ಮತ್ತು ಹಣ ದುರ್ಬಳಕೆ ಮಾಡಿದ ಸಂಪೂರ್ಣ ಅನುದಾನವನ್ನು ಮರಳಿ ಪಾವತಿಸಿಕೊಂಡು ಶೀಘ್ರವಾಗಿ ಸೂಕ್ತ ಕಾನೂನು ಕ್ರಮ ಜರುಗಿಸಲು ಒತ್ತಾಯಿಸುವುದಾಗಿ ಪತ್ರದಲ್ಲಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here