ಸುರಪುರ: ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂದೂಗಳ ಹತ್ಯಾಕಾಂಡ ಮತ್ತು ಶ್ರದ್ಧಾ ಕೇಂದ್ರಗಳ ಮೇಲಿನ ದಾಳಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಆಗ್ರಹಿಸಿ ನಗರದ ತಹಸೀಲ್ ಕಚೇರಿ ಮುಂದೆ ರಾಮ್ ಸೇನಾ ತಾಲೂಕು ಘಟಕದಿಂದ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸಂಘಟನೆಯ ತಾಲೂಕು ಅಧ್ಯಕ್ಷ ಶರಣು ನಾಯಕ ಮಾತನಾಡಿ, ಬಾಂಗ್ಲಾದೇಶದಲ್ಲಿ ನವರಾತ್ರಿಯ ಸಮಯದಲ್ಲಿ ದುರ್ಗಾಪೂಜೆಯ ಸಾವಿರಾರು ಮಂಟಪಗಳನ್ನು ಮತ್ತು ಇಸ್ಕಾನ್’ ನ ಮಂದಿರದ ಮೇಲೆ ಆಕ್ರಮಣ ನಡೆಸಿದ ಹಾಗೂ ಹಿಂದೂಗಳ ಹತ್ಯಾಕಾಂಡ ನಡೆಸಿದ ಮತಾಂಧರರ ಮೇಲೆ ಕಠೋರ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿ ರಾಮ್ ಸೇನಾ ಸುರಪುರ ಸಂಘಟನೆಯು ಗೌರವಾನ್ವಿತ ಶ್ರೀ ನರೇಂದ್ರ ಮೋದಿ ಪ್ರಧಾನಮಂತ್ರಿಗಳು ಮತ್ತು ಗೌರವಾನ್ವಿತ ಕೇಂದ್ರ ವಿದೇಶಾಂಗ ಮಂತ್ರಿ ಭಾರತ ಸರಕಾರ ನವದೆಹಲಿ ಇವರಿಗೆ ಈ ಪತ್ರದ ಮೂಲಕ ನಾವು ತಕ್ಷಣವೇ ಕಾರ್ಯನಿರ್ವಹಿಸುವಂತೆ ವಿನಂತಿಸುತ್ತೇವೆ ಹಾಗೂ ಯುನೈಟೆಡ್ ನೇಷನ್ ಸಂಸ್ತೆಯಲ್ಲಿ ( Uಓ ) ಬಾಂಗ್ಲಾದೇಶ ಸರ್ಕಾರದ ಮೇಲೆ ಒತ್ತಡ ಹೇರಲು ನಾವು ವಿದೇಶಿ ವಿನಿಮಯ ಸಚಿವರನ್ನು ವಿನಂತಿಸುತ್ತೇನೆ ಎಂದರು
ಈ ಸಂದರ್ಭದಲ್ಲಿ ರಾಮ್ ಸೇನಾ ತಾಲೂಕು ಅಧ್ಯಕ್ಷರು ಶರಣು ನಾಯಕ, ಹಾಗೂ ನಗರಸಭೆ ನಾಮ ನಿರ್ದೇಶಿತ ಸದಸ್ಯ ಹರೀಶ್ ತ್ರೀವೇದಿ ,ರಾಮ್ ಸೇನಾ ತಾಲೂಕು ಪ್ರದಾನ ಕಾರ್ಯದರ್ಶಿ ಶರಣು ನಾಯಕ ದಿವಳಗುಡ್ಡ ಮಾತನಾಡಿದರು, ನಂತರ ತಹಸೀಲ್ದಾರರಿಗೆ ಮನವಿ ಸಲ್ಲಿಸಲಾಯಿತು
ಹೈಯ್ಯಾಳಪ್ಪ ಹಾದಿಮನಿ, ಹಂಪಯ್ಯ ಹಿರೇಮಠ್ ಬೋನಾಳ, ಶಂಕರ್ ,ಶರಣು ಬೈಲಿ,ಹನಮಂತ ಸತ್ಯಂಪೆಟ್, ದೇವು ಚಂದಲಾಪುರ್,ರಮೇಶ್ ಸಗರ್, ಅಂಬರೇಶ್,ಲೋಕೇಶ್ ನಾಯಕ,ಅನಿಲ್ ಬಿರಾದಾರ್,ಜಗದೀಶ್ ಪಾಣಿಪಾತೆ, ಅಂಬರೇಶ್ ನಾಯ್ಕೊಡಿ, ಆನಂದ್ ಅರಹಳ್ಳಿ,ಪ್ರಭು, ನಾರಾಯಣ ದೇವಿಕೆರಿ, ರಾಘವೇಂದ್ರ ದೇವಿಕೆರಿ ರಾಮ್ ಸೇನಾ ಇನ್ನಿತರ ಕಾರ್ಯಕರ್ತರು ಇದ್ದರು.