ಶಹಾಬಾದ: ಕಲಬುರಗಿಯ ಚೌಕ್ ಪೊಲೀಸ್ ಠಾಣೆಯಲ್ಲಿ ದುಂಡಪ್ಪ ಜಮಾದಾರ ಎಂಬ ವ್ಯಕ್ತಿಯ ಮೇಲೆ ದೌರ್ಜನ್ಯ ನಡೆಸಿದ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಶುಕ್ರವಾರ ಶಹಾಬಾದ ನಗರ ಹಾಗೂ ಗ್ರಾಮೀಣ ಕೋಲಿ ಸಮಾಜದ ವತಿಯಿಂದ ಪ್ರತಿಭಟನೆ ನಡೆಸಿ ತಹಸೀಲ್ದಾರರಿಗೆ ಮನವಿ ಪತ್ರ ಸಲ್ಲಿಸಿದರು.
ಕಲಬುರಗಿಯ ಚೌಕ್ ಪೊಲೀಸ್ ಠಾಣೆಯ ಪೊಲೀಸರು ವಿನಾಕಾರಣ ದುಂಡಪ್ಪ ಜಮಾದಾರ ಎಂಬುವವರನ್ನು ಠಾಣೆಗೆ ಬಲಂತವಾಗಿ ಎಳೆದು ತಂದು ವಿಚಾರಣೆ ನಡೆಸುವುದನ್ನು ಬಿಟ್ಟು ಹಿಗ್ಗಾಮುಗ್ಗಾ ಥಳಿಸಿದ್ದಾರೆ.ಇದರಿಂದ ಗಂಭೀರ ಗಾಯಗೊಂಡ ದುಂಡಪ್ಪನ್ನನ್ನು ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.ಇದರಿಂದ ಪೊಲೀಸರ ವರ್ತನೆ ನಾಗರಿಕ ಸಮಾಜದಲ್ಲಿ ಭಯ ಹುಟ್ಟಿಸುವಂತಾಗಿದೆ.
ಜನಸ್ನೇಹಿ ಪೊಲೀಸ್ ಬದಲಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ.ಬಲವಂತವಾಗಿ ಯಾವುದೋ ಪ್ರಕರಣದಲ್ಲಿ ಸಿಲುಕಿಸಲು ಸಂಚು ರೂಪಿಸುತ್ತಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿ, ಸಿಬ್ಬಂದಿಗಳ ವಿರುದ್ಧ ಕ್ರಮಕೈಗೊಂಡು, ಇವರನ್ನು ಅಮಾನತುಗೊಳಿಸಬೇಕೆಂದು ಆಗ್ರಹಿಸಿದರು.
ಕೋಲಿ ಸಮಾಜದ ಅಧ್ಯಕ್ಷ ಶಿವಕುಮಾರ ತಳವಾರ, ಶಿವಕುಮಾರ ನಾಟೀಕಾರ, ತಿಪ್ಪಣ್ಣ ನಾಟೀಕಾರ,ದೇವೆಂದ್ರ ಕಾರೊಳ್ಳಿ, ಮಲ್ಲು ಮಾಲಗತ್ತಿ, ಶಿವು ಮುತ್ತಗಿ, ಶರಣಬಸ್ಸು ಶ್ರೀಪತಿ, ಮಲ್ಲು ಸುಣಗಾರ, ಮರಲಿಂಗ ಗೋಳಾ, ರವಿ ಗೋಳಾ, ಪ್ರಭು ಸೀಬಾ, ಪ್ರಭು ಮಂಗಳೂರ, ರಾಜು ಆಡಿನ್, ನಾಗರಾಜ ಯಡ್ರಾಮಿ, ನಾಗೇಶ ಮಣ್ಣೂರ್, ಶರಣು ಹಲಕರ್ಟಿ, ರಾಜು ಸಣಮೋ, ಮಲ್ಲಿಕಾರ್ಜುನ ನಾಟೀಕಾರ, ಪ್ರಶಾಂತ ಹದನೂರ್, ಸಾಗರ ತಳವಾರ ಇತರರು ಇದ್ದರು.