ಶಹಾಬಾದ: ನಗರದಲ್ಲಿ ಬುಧವಾರ ನಡೆದ ಬಸವೇಶ್ವರ ಪುತ್ಥಳಿ ಶಂಕುಸ್ಥಾಪನೆಯ ಅಡಿಗಲ್ಲಿನಲ್ಲಿ ಶಿಷ್ಟಾಚಾರ ಉಲ್ಲಂಘನೆ ಮಾಡಿದ ಅಧಿಕಾರಗಳ ವಿರುದ್ಧ ಕ್ರಮಕೈಗೊಳ್ಳಬೇಕೆಂದು ನಗರಸಭೆಯ ಸದಸ್ಯ ರವಿ ರಾಠೋಡ ಮೇಲಾಧಿಕಾರಿಗಳಿಗೆ ಆಗ್ರಹಿಸಿದ್ದಾರೆ.
ಶಂಕುಸ್ಥಾಪನೆ ಅಡಿಗಲ್ಲಿನಲ್ಲಿ ಅತಿಥಿಗಳ ಸಾಲಿನಲ್ಲಿ ನಗರಸಭೆಯ ಸದಸ್ಯ ನಾಗರಾಜ ಕರಣಿಕ್, ವೀರಶೈವ ಸಮಾಜದ ಅಧ್ಯಕ್ಷರು ಹಾಗೂ ನಗರಸಭೆಯ ಸದಸ್ಯ ಸೂರ್ಯಕಾಂತ ಕೋಬಾಳ,ವೀರಶೈವ ಸಮಾಜದ ನಿಕಟ ಪೂರ್ವ ಅಧ್ಯಕ್ಷ ವಿಜಯಕುಮಾರ ಮುಟ್ಟತ್ತಿ, ಹಳೆಶಹಾಬಾದ ವೀರಶೈವ ಸಮಾಜದ ಅಧ್ಯಕ್ಷ ಮಲ್ಲಿಕಾರ್ಜುನ ಚಂದನಕೇರಾ ಅವರ ಹೆಸರನ್ನು ಹಾಕುವ ಮೂಲಕ ಶಿಷ್ಟಾಚಾರ ಉಲ್ಲಂಘನೆ ಅಧಿಕಾರಿಗಳು ಮಾಡಿದ್ದಾರೆ.
ನಗರಸಭೆಯ ಸದಸ್ಯರ ಹೆಸರಿನ ಸಾಲಿನಲ್ಲಿ ನಾಗರಾಜ ಕರಣಿಕ್ ಹಾಗೂ ಸೂರ್ಯಕಾಂತ ಕೋಬಾಳ ಹೆಸರು ಹಾಕದೇ ಗೌರವ ಅತಿಥಿಗಳ ಸಾಲಿನಲ್ಲಿ ಹಾಕಿ ಒಂದು ಕಣ್ಣಿಗೆ ಬೆಣ್ಣೆ ಮತ್ತು ಇನ್ನೊಂದು ಕಣ್ಣಿಗೆ ಸುಣ್ಣ ಎನ್ನುವಂತೆ ಮಾಡಿದ್ದಾರೆ.ಅಲ್ಲದೇ ಅತಿಥಿಗಳಾಗಿ ಶಿಷ್ಟಾಚಾರದ ಪ್ರಕಾರ ಯಾವುದೇ ಸಮಾಜದ ಅಧ್ಯಕ್ಷರ ಹೆಸರು ಬರೋದಿಲ್ಲ ಎಂಬುದು ಗೊತ್ತಿದ್ದರೂ, ಒಂದು ಸಮಾಜದ ಮುಖಂಡರನ್ನು ಓಲೈಸಲು ಹೋಗಿ ಹೆಸರು ಹಾಕಿರುವುದು ಶಿಷ್ಟಾಚಾರದ ಸಂಪೂರ್ಣ ಉಲ್ಲಂಘನೆಯಾಗಿದೆ.
ಅಲ್ಲದೇ ಸ್ಥಾಯಿ ಸಮಿತಿ ಅಧ್ಯಕ್ಷ ತಿಪ್ಪಣ್ಣ ನಾಟೇಕಾರ ಅಧಿಕಾರದ ಅವಧಿ ಮುಗಿದಿದ್ದರೂ ಅವರ ಹೆಸರನ್ನು ಅತಿಥಿಗಳ ಸಾಲಿನಲ್ಲಿ ಹಾಕಲಾಗಿದೆ. ಈ ಕೂಡಲೇಶಿಷ್ಟಾಚಾರ ಉಲ್ಲಂಘನೆ ಮಾಡಿದ ಅಧಿಕಾರUಳ ವಿರುದ್ಧ ಕ್ರಮಕೈಗೊಳ್ಳಬೇಕೆಂದು ರವಿ ಒತ್ತಾಯಿಸಿದ್ದಾರೆ.