ಶಂಕುಸ್ಥಾಪನೆ ಎರಡನೇ ಬಾರಿ ಮಾಡಿರುವುದಕ್ಕೆ ಆಕ್ರೋಶ

0
259

ಶಹಾಬಾದ: ನಗರಸಭೆಯಿಂದ ಈಗಾಗಲೇ ಬಸವೇಶ್ವರ ಪುತ್ಥಳಿ ಶಂಕುಸ್ಥಾಪನೆಯಾದರೂ, ಶಾಸಕ ಬಸವರಾಜ ಮತ್ತಿಮಡು ಮತ್ತೆ ಶಂಕುಸ್ಥಾಪನೆ ಮಾಡಿರುವುದುದಕ್ಕೆ ಕಾಂಗ್ರೆಸ್ ಮುಖಂಡರಾದ ಸುರೇಶ ಮೆಂಗನ ಹಾಗೂ ಕೃಷ್ಣಪ್ಪ ಕರಣಿಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅವರು ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ, ಈಗಾಗಲೇ ನಗರಸಭೆಯಿಂದ ಕಾರ್ಯಾಲಯದಿಂದ ೨೦೧೪-೧೫ ನೇ ಸಾಲಿನ ಎಸ್‌ಎಫ್‌ಸಿ ಯೋಜನೆಯಡಿಯಲ್ಲಿ ಬಸವೇಶ್ವರ ವೃತ್ತದಲ್ಲಿ ದಿ.೩೦-೦೫-೨೦೧೬ ರಂದು ಬಸವೇಶ್ವರ ಪುತ್ಥಳಿಯನ್ನು ಆಗಿನ ಶಾಸಕರಾಗಿದ್ದ ಜಿ.ರಾಮಕೃಷ್ಣ ಶಂಕುಸ್ಥಾಪನೆ ಮಾಡಿದ್ದರು.

Contact Your\'s Advertisement; 9902492681

ಒಂದು ಬಾರಿ ಶಂಕುಸ್ಥಾಪನೆಯಾದ ಮೇಲೆ ಮತ್ತೆ ಎರಡನೇ ಬಾರಿ ಶಂಕುಸ್ಥಾಪನೆ ಮಾಡಿರುವುದಕ್ಕೆ ಅರ್ಥವಿಲ್ಲ. ಶಂಕುಸ್ಥಾಪನೆ ಎರಡು ಬಾರಿ ಮಾಡಿರುವುದು ಇದೇ ಮೊದಲ ಬಾರಿ ನಾವು ನೋಡಿರುವುದು.ಒಬ್ಬ ಜವಾಬ್ದಾರಿಯುತ ಸ್ಥಾನದಲ್ಲಿರುವ ಶಾಸಕರು ಈ ಬಗ್ಗೆ ಗಮನಹರಿಸದೇ ಮಾಡಿದರೇ ಅಥವಾ ರಾಜಕೀಯ ಗಿಮಿಕ್ ಮಾಡಿದರೇ ಗೊತ್ತಾಗುತ್ತಿಲ್ಲ.ಈ ರೀತಿ ಮಾಡಿರುವುದು ಮಾತ್ರ ವಿಪರ್ಯಾಸ.ಈ ಹಿಂದೆ ಶಂಕುಸ್ಥಾಪನೆ ಮಾಡಲಾಗಿದೆ ಎಂದು ಗೊತ್ತಿದ್ದರೂ ಮತ್ತೆ ಶಂಕುಸ್ಥಾಪನೆ ಕಾರ್ಯಕ್ರಮ ಹಮ್ಮಿಕೊಂಡಿರುವ ಅಧಿಕಾರಿಗಳ ಬೇಜವಾಬ್ದಾರಿಯೇ ಕಾರಣ.

ಅಭಿವೃದ್ಧಿ ಮಾಡುವ ಮನಸ್ಸಿದ್ದರೇ ಒಳ್ಳೆಯ ಕೆಲಸಗಳನ್ನು ಮಾಡಿ.ಅದನ್ನು ಬಿಟ್ಟು ಯಾರೋ ಮಾಡಿದ ಶಂಕುಸ್ಥಾಪನೆಯನ್ನು ತಾನು ಮಾಡಿದ ಹಾಗೇ ಬಿಂಬಿಸುತ್ತಿರುವ ಶಾಸಕರ ನಡೆ ಪ್ರಶ್ನಿಸುವಂತಿದೆ.ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಅಸಮಾಧನ ಹೊರಹಾಕಿದರು. ಕೂಡಲೇ ಅಡಿಗಲ್ಲನ್ನು ತೆಗೆಯಬೇಕು.ಮುಂದೆ ಬಸವೇಶ್ವರ ಮೂರ್ತಿ ಅನಾವರಣ ಮಾಡಿ ಶಾಸಕರು ತಮ್ಮ ಹೆಸರು ಹಾಕಿಕೊಳ್ಳಲಿ. ಅದಕ್ಕೆ ನಮ್ಮ ತಕರಾರರು ಇಲ್ಲ ಎಂದು ಹೇಳಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here