Monday, July 15, 2024
ಮನೆಬಿಸಿ ಬಿಸಿ ಸುದ್ದಿಬೋನಾಳ ಗ್ರಾಮದಲ್ಲಿ ನೇತಾಜಿ ಸುಭಾಶ್ ಚಂದ್ರ ಬೋಸ್ ಜಯಂತಿ

ಬೋನಾಳ ಗ್ರಾಮದಲ್ಲಿ ನೇತಾಜಿ ಸುಭಾಶ್ ಚಂದ್ರ ಬೋಸ್ ಜಯಂತಿ

ಸುರಪುರ: ತಾಲೂಕಿನ ಬೋನಾಳ ಗ್ರಾಮದಲ್ಲಿ ನೇತಾಜಿ ಸುಭಾಶ್ ಚಂದ್ರ ಬೋಸ್ ಯುವಕ ಸಂಘದ ವತಿಯಿಂದ ನೇತಾಜಿ ಜಯಂತಿ ಆಚರಿಸಲಾಯಿತು.ಭಾನುವಾರ ಹಮ್ಮಿಕೊಂಡಿದ್ದ ಜಯಂತಿ ಕಾರ್ಯಕ್ರಮದ ಅಂಗವಾಗಿ ಗ್ರಾಮದಲ್ಲಿರುವ ನೇತಾಜಿಯವರ ನಾಮಫಲಕಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ವಂದಿಸಿದರು.

ಈ ಸಂದರ್ಭದಲ್ಲಿ ಮುಖಂಡ ಬಸ್ಸಯ್ಯ ಸ್ವಾಮಿ ಹಿರೇಮಠ ಮಾತನಾಡಿ,ಭಾರತ ದೇಶಕ್ಕೆ ಸ್ವಾತಂತ್ರ್ಯ ದೊರೆಯುವಲ್ಲಿ ನೇತಾಜಿ ಸುಭಾಶ್ ಚಂದ್ರ ಬೋಸ್ ಅವರ ಪಾತ್ರ ಮಹತ್ವದ್ದಾಗಿದೆ.ಆಜಾದ್ ಹಿಂದ್ ಫೌಜ್ ಸೇನೆಯನ್ನು ಕಟ್ಟುವ ಮೂಲಕ ಅವರು ಕ್ರಾಂತಿಕಾರಿ ಮಾರ್ಗದ ಮೂಲಕ ಸ್ವಾತಂತ್ರ್ಯಕ್ಕೆ ಮುಂದಾಗಿ ಬ್ರೀಟಿಷರಲ್ಲಿ ನಡುಕ ಹುಟ್ಟಿಸಿದ್ದರು.

ಅಂತಹ ಸುಭಾಶ್ ಚಂದ್ರ ಬೋಸ್ ಅವರ ಅಭಿಮಾನಕ್ಕಾಗಿ ಗ್ರಾಮದಲ್ಲಿ ಯುವಕ ಸಂಘವನ್ನು ಕಟ್ಟಿ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡಲಾಗಿದೆ.ಈ ವರ್ಷ ರಾಜ್ಯದಲ್ಲಿ ಕೊರೊನಾ ಸೊಂಕು ಹೆಚ್ಚುತ್ತಿರುವುದರಿಂದ ಸರಕರ ಸರಳ ಆಚರಣೆಗೆ ಕರೆ ನೀಡಿದ್ದರಿಂದ ಸರಳವಾಗಿ ಆಚರಿಸಲಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ಮುಖಂಡರಾದ ಸಂಗಣ್ಣಗೌಡ, ಬಸವಲಿಂಗಪ್ಪ ಸಾಹು,ವೀರಭ್ರಯ್ಯ ಹಿರೇಮಠ,ಭಾವಸಲಿ,ಮಲ್ಲಿಕಾರ್ಜುನ ಯಾದವ್,ಬಡೆಸಾಬ್ ಗುಡಗುಂಟಿ ಸೇರಿದಂತೆ ಅನೇಕರಿದ್ದರು.

RELATED ARTICLES

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here

- Advertisment -

Most Popular