ಕೆ.ಪಿ.ಎಸ್.ಸಿ. ಛೇರ್ಮನ್ ಶಿವಶಂಕರಪ್ಪ.ಎಸ್.ಸಾಹುಕಾರ್ ಪ್ರಮಾಣಿಕತೆ ಮೆರೆಯಲಿ

0
66
  • # ಕೆ.ಶಿವು ಲಕ್ಕಣ್ಣವರ

ರಾಜ್ಯದಲ್ಲಿ ನೇಮಕಾತಿಗಳಿಗೆ, ಬಡ್ತಿಗಳಿಗೆ ಪರೀಕ್ಷೆ ನಡೆಸುವ ಕರ್ನಾಟಕ ಲೋಕಸೇವಾ ಆಯೋಗ ಹಲವು ವರ್ಷಗಳಿಂದ ಬ್ರಷ್ಟಾಚಾರದಲ್ಲಿ ಮುಳಗಿ ಹೋಗಿದೆ. ಜಾರಿಯಾಗದೇ ಮರೆಯಾಗ್ತಾ ಇದೆಯಾ ಹೋಟಾ ಸಮಿತಿ ಶಿಫಾರಸ್ಸು. ಕೆ.ಪಿ.ಎಸ್.ಸಿ ಅಂಗೈ ಶುದ್ಧಗೊಳ್ಳೊದು ಯಾವಾಗ..? ಎಂಬ ಸಾರ್ವಜನಿಕ ವಲಯದಲ್ಲಿ ಹಲವು ಪ್ರಶ್ನೆಗಳು ಉದ್ಭವಿಸುತ್ತಿದೆ!

ಕಳೆದ ವಾರ ನಡೆಯಬೇಕಿದ್ದ ಎಫ್.ಡಿ.ಎ ಪ್ರಶ್ನೆಪತ್ರಿಕೆ ಸೋರಿಕೆಯ ಕಾರಣದಿಂದ ರದ್ದಾಗಿದ್ದು ನಿಮಗೆಲ್ಲ ಗೊತ್ತಿರುವ ವಿಚಾರ. ಕೆ.ಪಿ.ಎಸ್.ಸಿ ಇಲಾಖೆಯ ಇಬ್ಬರೂ ಸಿಬ್ಬಂದಿ ಸಿಸಿಬಿಯರ ಕೈಯಲ್ಲಿ ಸಿಕ್ಕಿಬಿದ್ದಿದ್ದಾರೆ. ಸಿಸಿಬಿ ಪೊಲೀಸರು ಅವರನ್ನು ವಿಚಾರಣೆ ಮಾಡುತ್ತಿದ್ದಾರೆ. ಪ್ರಕರಣದ ಜಾಲ ದೊಡ್ಡದಿದ್ದು ಸೋರಿಕೆಯ ಹಿಂದಿರುವ ಕೈಗಳನ್ನು ಪತ್ತೆ ಹತ್ತುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

Contact Your\'s Advertisement; 9902492681

ಇದನ್ನೂ ಓದಿ: ಕಲಬುರಗಿಯಲ್ಲಿ ಸಿಎಂ ವಾಹನಕ್ಕೆ ಮುತ್ತಿಗೆ ಯತ್ನ: ಕಾಂಗ್ರೆಸ್ ಕಾರ್ಯಾಕರ್ತರ ಬಂಧನ

ಆದರೆ ಸರಕಾರ ತನ್ನ ಜವಬ್ದಾರಿಯನ್ನು ಯಾಕೆ ನಿರ್ವಹಣೆ ಮಾಡುತ್ತಿಲ್ಲ ಎನ್ನುವ ಪ್ರಶ್ನೆಗಳು ಎದ್ದಿವೆ. ಯಾಕಂದರೆ ಲೋಕಸೇವಾ ಆಯೋಗದ ಅಂಗೈಯನ್ನು ಶುದ್ದಗೊಳಿಸುವ ಜವಬ್ದಾರಿ ಸರಕಾರದ್ದಾಗಿದೆ. ಕೆ.ಪಿ.ಎಸ್.ಸಿ ಕರ್ಮಕಾಂಡ ಇವತ್ತು ನಿನ್ನೆಯದು ಅಲ್ಲ. ಹತ್ತಕ್ಕೂ ಹೆಚ್ಚು ವರ್ಷಗಳಿಂದ ಪ್ರಶ್ನೆ ಪತ್ರಿಕೆ ಸೋರಿಕೆ, ಅಕ್ರಮ ನೇಮಕಾತಿ, ಭ್ರಷ್ಟಾಚಾರದಂತಹ ಆರೋಪಗಳು ಕೇಳಿ ಬರುಲೇ ಇವೆ. ಸ್ವತಃ ಹೈಕೋರ್ಟ್ ಕ್ರಮವನ್ನು ಕೈಗೊಳ್ಳಬೇಕು ಅಂತಾ ಹೇಳಿದ್ದರೂ ಕೂಡಾ ಇಲ್ಲಿವಯರೆಗೆ ಯಾವ ಕ್ರಮವನ್ನೂ ಜರುಗಿಸಿರುವ ಉದಾಹರಣೆಗಳಿಲ್ಲ, ಯಾಕೆ ಅಂದ್ರೆ ಈ ಕೂಪದಲ್ಲಿ ಪ್ರಭಾವಿ ರಾಜಕಾರಣಿಗಳೂ ಇರಬಹುದು ಎಂದು ಬಹಳಷ್ಟು ಜನ ಆರೋಪವನ್ನು ಮಾಡ್ತಾ ಇದ್ದಾರೆ.

1998, 1999, 2004 ರ ಕೆಎಎಸ್ ಅಧಿಕಾರಿಗಳ ನೇಮಕಾತಿಗೆ ಸಂಬಂಧಿಸಿದಂತೆ ಭಾರೀ ಭ್ರಷ್ಟಾಚಾರ, ಅವ್ಯವಹಾರ ಮತ್ತು ಅಕ್ರಮಗಳು ಜರುಗಿರುವುದು ಸಿಐಡಿ ತನಿಖೆ ಮತ್ತು ಹೈಕೋರ್ಟ್ ನೇಮಿಸಿದ್ದ ಸತ್ಯಶೋಧನೆ ಸಮಿತಿಯ ವರದಿಗಳಿಂದ ಬಹಿರಂಗವಾಗಿದೆ. ಅನೇಕ ವರ್ಷಗಳಿಂದ ಆಯೋಗದ ಸದಸ್ಯರಾಗಿದ್ದ ಮತ್ತು 2001 ರಿಂದ 2007 ರವರೆಗೆ ಅಧ್ಯಕ್ಷರಾಗಿದ್ದ ಡಾ.ಎಚ್.ಎನ್.ಕೃಷ್ಣ ಈ ಎಲ್ಲಾ ಹಗರಣಗಳ ರೂವಾರಿಯಾಗಿದ್ದರು, ಮತ್ತು ಅವರು ಎಸ್.ಎಂ.ಕೃಷ್ಣ ಮತ್ತು ಕುಮಾರಸ್ವಾಮಿಯವರಿಗೆ ಪರಮಾಪ್ತರೂ ಆಗಿದ್ದವರು. ಇವು ಕೆಲವಿಷ್ಟು ಹೆಸರು ಮಾತ್ರ ಹೀಗೆಯೇ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಆದರೆ ತಪ್ಪು ಮಾಡಿದವರಿಗೆ ಶಿಕ್ಷೆ ಮಾತ್ರ ಆಗಿಲ್ಲ. 2011 ರಲ್ಲೂ ಕೆ.ಎ.ಎಸ್ ನೇಮಕ ಹಗರಣ ಸಾಕಷ್ಟು ಸದ್ದು ಮಾಡಿತ್ತು. ಕಳೆದ ಆರೇಳು ವರ್ಷದಿಂದ ನಿರಂತರವಾಗಿ ಪ್ರಶ್ನೆ ಪತ್ರಿಕೆಗಳು ಸೋರಿಕಾಯುಗುತ್ತಲೆ ಬಂದಿವೆ. ಕೆ.ಪಿ.ಎಸ್.ಸಿ ಅಕ್ರಮಗಳನ್ನು ತಡೆಯೋದಕ್ಕಾಗಿ ಯು.ಪಿ.ಎಸ್.ಸಿ ನಿವೃತ್ತ ಅಧ್ಯಕ್ಷರಾಗಿದ್ದ ಪಿ.ಎಸ್. ಹೋಟಾ ಸಮಿತಿ ಕೆಲ ಶಿಫಾರಸ್ಸುಗಳನ್ನು ನೀಡಿತ್ತು, ಆ ಶಿಫಾರಸ್ಸುಗಳು ಇನ್ನೂ ಜಾರಿಯಾಗಿಲ್ಲ.

ಇದನ್ನೂ ಓದಿ: ಎಸ್ ಡಿಎ ಮತ್ತು ಎಫ್ ಡಿಎ ಪಟ್ಟಿ ಬಿಡುಗಡೆಗೆ ಆಗ್ರಹಿಸಿ ಸಿಎಂಗೆ ಕನ್ನಡ ಭೂಮಿ ಮನವಿ

# ಹೋಟಾ ಸಮಿತಿ ನೀಡಿದ್ದ ಪ್ರಮುಖ ಶಿಫಾರಸ್ಸುಗಳು ಈ ರೀತಿ ಇವೆ.–

ಪ್ರತಿ ಎರಡು ವರ್ಷಕ್ಕೋಮ್ಮೆ ಕೆ.ಪಿ.ಎಸ್.ಸಿ ಸಿಬ್ಬಂದಿಯ ಬದಲಾವಣೆ ಆಗಬೇಕು. ಮುಖ್ಯ ಪರೀಕ್ಷೆಯ ಅಂಕಗಳನ್ನು ಅಭ್ಯರ್ಥಿಗಳಿಗೆ ಹೇಳಬಾರದು. ಸಂದರ್ಶನಕ್ಕೆ ಅರ್ಹರಾದವರ ಪಟ್ಟಿಯನ್ನು ಮೊದಲೇ ಬಿಡುಗಡೆ ಮಾಡಬೇಕು, ದಿನಕ್ಕೆ 9 ಜನರನ್ನು ಮಾತ್ರ ಸಂದರ್ಶನಕ್ಕೆ ಕರೆಯಬೇಕು. 30 ನಿಮಿಷಕ್ಕಿಂತ ಹೆಚ್ಚಿನ ಸಂದರ್ಶನ ಇರಬಾರದು ಎಂಬುದು ಸೇರಿದಂತೆ ಕೆ.ಪಿ.ಎಸ್.ಸಿ.ಯನ್ನು ಶುದ್ಧೀಕರಿಸಲು ಹೋಟಾ ಸಮಿತಿ ಶಿಫಾರಸ್ಸುಗಳನ್ನು ನೀಡಿತ್ತು.

ಲೋಕಸೇವಾ ಆಯೋಗದಲ್ಲಿನ ಭ್ರಷ್ಟಾಚಾರ, ಅಕ್ರಮಗಳನ್ನು ತಡೆಹಿಡಿಯುವುದಾಗಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳು ಚುನಾವಣೆಯಲ್ಲಿ ಹೇಳುತ್ತಲೇ ಬಂದಿವೆ. ಆದರೆ ಇಲ್ಲಿಯವರೆಗೂ ತಪ್ಪು ಮಾಡಿದ ಅಧಿಕಾರಿಗಳಿಗೆ, ಸಿಬ್ಬಂದಿಗಳಿಗೆ ಶಿಕ್ಷೆಯನ್ನು ನೀಡಿಲ್ಲ. ಮಾಜಿ ಅಧ್ಯಕ್ಷರಾದ ಹೆಚ್.ಎನ್. ಕೃಷ್ಣ, ಗೋನಾಳು ಭಿಮಪ್ಪರವರ ಮೇಲಿನ ವಿಚಾರಣೆಯನ್ನು ಇನ್ನೂ ಪೂರ್ಣಗೊಳಿಸಲಾಗಿಲ್ಲ. ಪ್ರತಿವರ್ಷ ನಾವು ಅರ್ಜಿಹಾಕುತ್ತೇವೆ, ಅವರ ಪ್ರಶ್ನೆಪತ್ರಿಕೆ ಮಾರಾಟ ಮಾಡ್ತಾರೆ. ಶಿಕ್ಷಣವೂ ಮಾರಾಟ ಆಗಿದೆ, ಉದ್ಯೋಗವೂ ಮಾರಾಟ ಆಗುತ್ತಿದೆ. ನಮ್ಮಗೋಳು ಕೇಳೋರು ಯಾರು ಅಂತಾ ಪರೀಕ್ಷಾರ್ಥಿಗಳು ಸರಕಾರವನ್ನು ಪ್ರಶ್ನಿಸುತ್ತಿದ್ದಾರೆ.

ಇದನ್ನೂ ಓದಿ: ಅಲ್ಪಸಂಖ್ಯಾತರ ಇಲಾಖೆಗೆ 10 ಸಾವಿರ ಕೋಟಿ ಮೀಸಲಿಡಲು‌ CMಗೆ ನಯ ಸವೇರದಿಂದ ಮನವಿ

ಕೆ.ಪಿ.ಎಸ್.ಸಿ. ತನ್ನ ಅಂಗೈನಲ್ಲಿ ದೊಡ್ಡಪ್ರಮಾಣದ ಭ್ರಷ್ಟಾಚಾರವನ್ನು ನಡೆಸಿ, ನೇಮಕಗೊಂಡ ವ್ಯಕ್ತಿಗಳನ್ನು ಅಂದಿನಿಂದಲೇ ಲಂಚ ಪಡೆಯುವಂತೆ ಮಾಡುತ್ತಿದೆ. ಯು.ಪಿ.ಎಸ್‌.ಸಿ ಮಾದರಿಯಲ್ಲಿ ಅಮೂಲಾಗ್ರ ಸುಧಾರಣೆ ಮಾಡುವ ದೊಡ್ಡ ಜವಾಬ್ದಾರಿ ಸರಕಾರದ ಮೇಲೆಯೇ ಇದೆ. ಆ ನಿಟ್ಟಿನಲ್ಲಿ ಸರಕಾರ ಆಸಕ್ತಿಯನ್ನು ವಹಿಸಿ ಕೆ.ಪಿ.ಎಸ್.ಸಿ. ಅಂಗಗಳದನ್ನು ಆಮೂಲಾಗ್ರವಾಗಿ ಶುದ್ದಗೊಳಿಸಬೇಕಿದೆ..!

# ಆರ್ಯುವೇದ ‘ಸಹಾಯಕ ಉಪನ್ಯಾಸಕರ’ ನೇಮಕಾತಿಯ ಸಂದರ್ಶನವೂ —

ಆದರೆ ಈ ಬಾರಿ ಈಗ ಆರ್ಯುವೇದ ‘ಸಹಾಯಕ ಉಪನ್ಯಕರ’ ರಾಜ್ಯ ನೇಮಕಾತಿಯು ಸಂದರ್ಶನವಿದೆ. ಈ ಬಾರಿ ಲಿಖಿತ ಪರೀಕ್ಷೆಗಳು ಒಂದಷ್ಟು ಪಾರದರ್ಶಕವಾಗಿ ನಡೆದಿವೆ. ಅಲ್ಲದೇ ಸಂದರ್ಶನಕ್ಕೆ ಪ್ರಾಮಾಣಿಕ ಅಭ್ಯರ್ಥಿಗಳನ್ನು ಕರೆದಿದ್ದಾರೆ. ಈ ಆಯುರ್ವೇದ ಸಹಾಯಕ ಉಪನ್ಯಾಸಕರ 1;3 ಇರುವ ಅಭ್ಯರ್ಥಿಗಳನ್ನು ನೇರವಾಗಿ ಸಂದರ್ಶನಕ್ಕೆ ಆಯ್ಕೆ ಆಗಿದ್ದಾರೆ.

ಇದನ್ನೂ ಓದಿ: ಕಲಬುರಗಿ ಪೇಟೆ ಧಾರಣೆ

ಈ ನೇಮಕಾತಿ ಮಾಡುವ ಉದ್ದೇಶದಿಂದ ಇದೇ ದಿನಾಂಕ 26/4/22 ರ ಮುಂಜಾನೆ 8.30 ಕ್ಕೆ ಸಂದರ್ಶನ ಶುರುವಾಗಲಿದೆ. ಈ ಸಂದರ್ಶನದಲ್ಲಿ ಒಂದಿಷ್ಟು ಪ್ರಾಮಾಣಿಕತೆಯನ್ನು ತೋರಬೇಕಿದೆ ಕೆ.ಪಿ.ಎಸ್.ಸಿ.ಯ ಈಗಿನ ಛೇರ್ಮನ್ ಶಿವಶಂರಪ್ಪ.ಎಸ್.ಸಾಹುಕಾರ್ ಅವರು. ಆಗಲೇ ಈ ಕೆ.ಪಿ.ಎಸ್.ಸಿ.ಗೆ ಅಂಟಿದ ಭ್ರಷ್ಟಾಚಾರದ ಕಳಂಕ ಒಂದಿಷ್ಟು ಕಡಿಮೆ ಆಗುವುದು. ಹೀಗೆಂಬುದು ನಮ್ಮ ಅಭಿಪ್ರಾಯವಾಗಿದೆ.

ಇದನ್ನೂ ಓದಿ: ಕಾಂಗ್ರೆಸ್ ಶಾಸಕನ ಗನ್ ಮ್ಯಾನ್ ಸೇರಿ ಇಬ್ಬರ ಬಂಧನ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here