ಸೊಲ್ಲಾಪುರ: “ಶಾಲಾ ಆರಂಭೋತ್ಸವ”ಕ್ಕೆ ಚಾಲನೆ

0
136

ಸೊಲ್ಲಾಪುರ: ಮಹಾರಾಷ್ಟ್ರ ಗಡಿಭಾಗದಲ್ಲಿ ಸರಕಾರಿ ಪ್ರಾಥಮಿಕ ಕನ್ನಡ ಶಾಲೆಗಳ ಅಭಿವೃದ್ಧಿಗಾಗಿ ಶಿಕ್ಷಕರಿಗೆ ಪಾಲಕರು ಬೆನ್ನೆಲುಬಾಗಿ ನಿಲ್ಲಬೇಕು ಎಂದು ಕೆಂದ್ರ ಪ್ರಮುಖ ಮಹಾಂತೇಶ ಮಾಳಿ ಅಭಿಪ್ರಾಯ ವ್ಯಕ್ತಪಡಿಸಿದರು.

ಜತ್ತ ತಾಲ್ಲೂಕಿನ ಸಂಖ ಪಟ್ಟಣದ ಸಿಳೀನವಸ್ತಿ ಶಾಲೆಯ “ಶಾಲಾ ಆರಂಭೋತ್ಸವ” ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಿಳೀನವಸ್ತಿ  ಶಾಲೆಗೆ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರವು ಶಾಲಾ ಕೊಠಡಿಗೆ ಅನುದಾನ ನೀಡಿದ್ದು ತುಂಬಾ ಸಂತೋಷ ತಂದಿದೆ. ಈ ಶಾಲೆ ಬಹಳ ಹಳೆಯದು. ಇಲ್ಲಿ ಕಲಿತ ಮಕ್ಕಳು ಇಂದು ವಿವಿಧ ಕ್ಷೇತ್ರದಲ್ಲಿ ಉನ್ನತ ಸ್ಥಾನಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕನ್ನಡ ಶಾಲೆಗಳ ಉನ್ನತಿಕರಣಕ್ಕಾಗಿ ಪಾಲಕರು ಸ್ವತಃ ಮುಂದೆ ಬಂದು ಶಾಲೆಗಳನ್ನು ಉಳಿಸಬೇಕಿದೆ ಎಂದು ಮಹಾಂತೇಶ ಮಾಳಿ ಪಾಲಕರಿಗೆ ಕರೆ ನೀಡಿದರು.

Contact Your\'s Advertisement; 9902492681

ಮೊದಲನೆಯ ತರಗತಿಯ ಮಕ್ಕಳಿಗೆ, ನಾಲ್ಕನೆಯ ತರಗತಿಯ ಮಕ್ಕಳು ಅದ್ದೂರಿ ಮೆರವಣಿಗೆಯೊಂದಿಗೆ ಶಾಲೆಗೆ ಬರಮಾಡಿಕೊಂಡರು. ಮೆರವಣಿಗೆಯಲ್ಲಿ ಮಕ್ಕಳ ನೃತ್ಯ ಪ್ರದರ್ಶನ ನೋಡುಗರ ಮನ ಸೆಳೆದಿತ್ತು.

ಇದನ್ನೂ ಓದಿ: ಕುಡಿಯುವ ನೀರಿನ ಸಮಸ್ಯೆ: ಗ್ರಾಮ ಪಂಚಾಯತಿಗೆ ಬಂದ ಸಾರ್ವಜನಿಕರು

ಇದೇ ಸಂದರ್ಭದಲ್ಲಿ  ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅನುದಾನದಲ್ಲಿ ಶಾಲಾ ಕೊಠಡಿಗೆ ಅಡಿಗಲ್ಲು ನೆರವೇರಿಸಲಾಯಿತು. “ಯುಥ್ ಫಾರ್ ಜತ್ತ” ಸಂಸ್ಥೆಯು ಶಾಲೆಗೆ ಕಾಣಿಕೆಯಾಗಿ ನೀಡಿದ ಶುದ್ಧ ಕುಡಿಯುವ ನೀರಿನ ಘಟಕವನ್ನು ಸ್ಥಾಪಿಸಿ ಚಾಲನೆ ನೀಡಲಾಯಿತು. ಜೊತೆಗೆ ನಾಲ್ಕನೆಯ ತರಗತಿಯ ಮಕ್ಕಳ ಬಿಳ್ಕೋಡುವ ಸಮಾರಂಭವು ನೆರೆವರಿಯಿತು.

ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಚೆನ್ನಪ್ಪಾ ಕನಮಡಿ ವಹಿಸಿದ್ದರು. ಅಪ್ಪಾಸಾಹೇಬ ಅಂಕಲಗಿ ಮತ್ತು ರಂಜಾನ ಮಕಾನದಾರ ಅವರು ಭೂಮಿ ಪೂಜೆ ನೆರವೇರಿಸುವ ಮೂಲಕ ಶಾಲಾ ಕೊಠಡಿ ನಿರ್ಮಾಣಕ್ಕೆ ಚಾಲನೆ ನೀಡಿದರು. ಮಲ್ಲಿಕಾರ್ಜುನ ಅಂಕಲಗಿಯವರು ಶುದ್ಧ ನೀರಿನ ಘಟಕಕ್ಕೆ ಚಾಲನೆ ನೀಡಿದರು. ಸುರೇಶ್ ವಜ್ರಶೆಟ್ಟಿಯವರು ಸಾವಿತ್ರಿ ಬಾಯಿ ಫುಲೆಯವರ ಪ್ರತಿಮೆಗೆ ಪೂಜೆ ಸಲ್ಲಿಸಿದರು.

ರಮೇಶ ಕನಮಡಿ,  ಮಹಾಂತೇಶ ಸಿಳೀನ್ ಮತ್ತು ನಾಲ್ಕನೆಯ ತರಗತಿಯ ಮಕ್ಕಳು ತಮ್ಮ ಅನಿಸಿಕೆಗಳನ್ನು ವ್ಯಕ್ತ ಪಡಿಸಿದರು. ಈ ಸಂದರ್ಭದಲ್ಲಿ ಶಾಲಾ ವ್ಯವಸ್ಥಾಪನೆ ಸಮಿತಿ ಅಧ್ಯಕ್ಷ ಸಂಗಣ್ಣಾ ಸಿಳೀನ್, ಉಪಾಧ್ಯಕ್ಷ ರಮೇಶ ಕನಮಡಿ, ಅಪ್ಪಾಸಾಹೇಬ ಮಕಾನದಾರ, ಶ್ರೀಶೈಲ ವಜ್ರಶೆಟ್ಟಿ, ರವಿ ಕನಮಡಿ, ನಿಂಗೊಂಡಾ ಸಿಳೀನ್, ಅಮಸಿದ್ಧ ಲಿಗಾಡೆ ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಸಿಳೀನವಸ್ತಿ ಪಾಲಕರು ಉಪಸ್ಥಿತರಿದ್ದರು.

ಇದನ್ನೂ ಓದಿ: ಪಿಎಸ್ಐ ಆಕ್ರಮ: ಮತ್ತೋರ್ವ ಆರೋಪಿ ಬಂಧನ

ಕಾರ್ಯಕ್ರಮ ಯಶಸ್ವಿಗಾಗಿ ಮುಖ್ಯೋಪಾಧ್ಯಾಯ ಮಲಿಕಜಾನ ಶೇಖ, ಅಧ್ಯಕ್ಷ ಸಂಗಪ್ಪಾ ಸಿಳೀನ್, ಉಪಾಧ್ಯಕ್ಷ ರಮೇಶ ಕನಮಡಿ, ಮೀನಾಕ್ಷಿ ಮುಂಜಾಣ, ಅಂಗನವಾಡಿ ಸೇವಿಕೆಯರಾದ ಅನ್ನಪೂರ್ಣ ಮಾಳಿ ಹಾಗೂ ಕಸ್ತೂರಿ,  ರಾಮಣ್ಣಾ ಕನಮಡಿ, ರಾಜಕುಮಾರ ಅಂಕಲಗಿ, ಅಡವೆಪ್ಪಾ ಸಿಳೀನ, ಮಹಾಂತೇಶ ಸಿಳೀನ, ಶಿವಶಂಕರ ಅಂಕಲಗಿ ಮೊದಲಾದವರು ಶ್ರಮಿಸಿದರು. ಮಲಿಕಜಾನ ಶೇಖ ನಿರೂಪಿಸಿದರು ಹಾಗೂ ಅನ್ನಪೂರ್ಣ ಮಾಳಿ ವಂದಿಸಿದರು.

ಸೊಲ್ಲಾಪುರ : ಸಾಂಗಲಿ ಜಿಲ್ಲೆಯ ಜತ್ತ ತಾಲ್ಲೂಕಿನ ಸಂಖ ಪಟ್ಟಣದ ಸಿಳೀನವಸ್ತಿ ಶಾಲೆಗೆ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರವು ಶಾಲಾ ಕೊಠಡಿಗೆ ಅನುದಾನ ನೀಡಿದ್ದು ಅಪ್ಪಾಸಾಹೇಬ ಅಂಕಲಗಿ ಮತ್ತು ರಂಜಾನ ಮಕಾನದಾರ ಅವರು ಭೂಮಿ ಪೂಜೆ ನೆರವೇರಿಸುವ ಮೂಲಕ ಶಾಲಾ ಕೊಠಡಿ ನಿರ್ಮಾಣಕ್ಕೆ ಚಾಲನೆ ನೀಡಿದರು.

ಇದನ್ನೂ ಓದಿ: ಸಹಕಾರ ಇಲಾಖೆಯಲ್ಲಿ ಲಂಚಾವತಾರ: ಬೆಚ್ಚಿಬೀಳುವ ಮಾಹಿತಿ ಹೊರಗೆಡವಿದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here