‘ಬಸವ ಬೆಳಕು – ಭೀಮ ಬದುಕು’ ವಿಶೇಷ ಸರಣಿ ಕಾರ್ಯಕ್ರಮಕ್ಕೆ ಸಂಜೀವ ಗುಪ್ತಾ ಚಾಲನೆ

0
114
ನಾವು ಪರಿಷತ್ತಿನ ಸೇವಾದೀಕ್ಷೆ ಪಡೆದು ಕೇವಲ ನಾಲ್ಕಾರು ತಿಂಗಳುಗಳಲ್ಲಿಯೇ ಜಿಲ್ಲಾ ಮಟ್ಟದ ಸಮ್ಮೇಳನ ಸೇರಿದಂತೆ ಅನೇಕ ನಿತ್ಯ ನೂತನ, ವಿಶಿಷ್ಟ-ವಿನೂತನ ಸಾಹಿತ್ಯಿಕ, ಸಾಮಾಜಿಕ ಕಾರ್ಯಕ್ರಮಗಳಿಂದ ನಗರದ ಕನ್ನಡ ಭವನಕ್ಕೆ ಹೊಸ ಕಳೆ ಬಂದಂತಾಗಿದೆ. ಹೊಟ್ಟೆ ನೋವಿಗೆ ಔಷಧಿ ಇದೆ. ಆದರೆ ಹೊಟ್ಟೆ ಕಿಚ್ಚಿಗೆ ಯಾವ ಔಷಧಿವಿಲ್ಲ. ಹಾಗಾಗಿ, ಧನಾತ್ಮಕ ಚಿಂತನೆಗಳನ್ನು ಅಳವಡಿಸಿಕೊಳ್ಳುವ ಪ್ರವೃತ್ತಿ ಬೆಳೆಸಿಕೊಳ್ಳಿ. – ವಿಜಯಕುಮಾರ ತೇಗಲತಿಪ್ಪಿ, ಅಧ್ಯಕ್ಷರು, ಜಿಲ್ಲಾ ಕಸಾಪ.

ಕಲಬುರಗಿ: ಇಂದಿನ ಸಮಾಜದ ಅನೇಕ ಸಮಸ್ಯೆಗಳಿಗೆ ಹನ್ನೇರಡನೆಯ ಶತಮಾನದ ಬಸವಾದಿ ಶರಣರ ವಚನಗಳು ಪರಿಹಾರ ನೀಡುತ್ತವೆ ಎಂದು ಉದ್ಯಮಿ ಸಂಜೀವ ಗುಪ್ತಾ ಅಭಿಪ್ರಾಯಪಟ್ಟರು.

ಕಾಯಕತತ್ವದ ಬಸವಣ್ಣ ಹಾಗೂ ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಅವರ ಜಯಂತಿ ಪ್ರಯುಕ್ತ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹೊರವಲಯದ ತಾಜ್ ಸುಲ್ತಾನಪುರದ ಕೆ.ಎಸ್.ಆರ್.ಪಿ. ಕ್ಯಾಂಪ ಪ್ರಾಂಗಣದಲ್ಲಿ ಶನಿವಾರ ಏರ್ಪಡಿಸಿದ ‘ಬಸವ ಬೆಳಕು – ಭೀಮ ಬದುಕು’ ಎಂಬ ಸತ್ಯ ಬಿತ್ತಿದ ಪರಿ ಎನ್ನುವ ವಿಶೇಷ ಸರಣಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

Contact Your\'s Advertisement; 9902492681

ಇದನ್ನೂ ಓದಿ: ಸುರಪುರ:ಹಿಜಾಬ್‌ಗಾಗಿ ದ್ವೀತಿಯ ಪಿಯುಸಿ ಪರೀಕ್ಷೆ ಬಹಿಷ್ಕಾರ

ಉಪನ್ಯಾಸ ನೀಡಿದ ಶರಣ ಸಾಹಿತಿ ಡಾ.ಶಿವರಂಜನ್ ಸತ್ಯಂಪೇಟೆ, ಬಸವಣ್ಣನವರ ಕಳಬೇಡ, ಕೊಲಬೇಡ. ಎನ್ನುವ ಸಪ್ತಸೂತ್ರಗಳೇ ವಚನ ಸಂವಿಧಾನವಾಗಿದೆ. ಇವನಾರವ, ಇವನಾರವ ಎನ್ನದೇ ಎಲ್ಲರನ್ನೂ ತಮ್ಮವರೆಂದು ಅಪ್ಪಿಕೊಳ್ಳುವ ಸಂವಿಧಾನವನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ನಂತರ ಲಿಖಿತ ರೂಪದಲ್ಲಿ ಜಾರಿಯಲ್ಲಿ ತಂದರು. ಇದಕ್ಕೆ ಪೂರಕವಾದ ಅಂಶಗಳನ್ನು ವಚನಗಳಲ್ಲಿ ಹೇರಳವಾಗಿ ಕಾಣಬಹುದು. ನಮ್ಮ ದೇಶಕ್ಕೆ ವಿಶಿಷ್ಟವಾದ ಸಂವಿಧಾನ ನೀಡಿದ ಕೀರ್ತಿ ಡಾ.ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ ಎಂದರು.

ಇದನ್ನೂ ಓದಿ: ಪಿಎಸ್ಐ ಆಕ್ರಮ: ಮತ್ತೋರ್ವ ಆರೋಪಿ ಬಂಧನ

ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಇಂದಿನ ಜಾಗತಿಕ ಸಮಸ್ಯೆಗಳ ಪರಿಹಾರಕ್ಕೆ ಬಸವ ತತ್ವವೇ ದಿವ್ಯ ಔಷಧಿಯಾಗಿದ್ದು, ಬಸವ ತತ್ವ ಭಾರತದ ಸತ್ವ. ಬಸವಣ್ಣ ಮತ್ತು ಅಂಬೇಡ್ಕರ್ ಸೇರಿದಂತೆ ಮುಂತಾದ ಮಹಾತ್ಮರನ್ನು ಮರೆತರೆ ನಮಗಾರಿಗೂ ಉಳಿಗಾಲ ಇಲ್ಲ ಎಂಬುದನ್ನು ಮನಗಾಣಬೇಕಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮಗಳು ನಮ್ಮ ಅವಧಿಯಲ್ಲಿ ಹೊಸ ದಿಕ್ಕಿನ ಕಡೆಗೆ ತೆಗೆದುಕೊಂಡು ಹೋಗುವುದರ ಮೂಲಕ ಸಾಂಸ್ಕೃತಿಕ ಪರಿಸರದ ನಿರ್ಮಾಣಕ್ಕೆ ಪ್ರಯತ್ನಿಸಲಾಗುತ್ತಿದೆ. ಹೊಸ ಹೊಸ ಕಾರ್ಯಕ್ರಮಗಳ ಬರ ಎದುರಿಸುತ್ತಿದ್ದ ಕನ್ನಡ ಸಾಹಿತ್ಯ ಪರಿಷತ್ತಿಗೆ ಹೊಸದೊಂದು ಸ್ಪರ್ಶ ನೀಡಲಾಗುತ್ತಿದೆ. ಅದಕ್ಕಾಗಿ ಸರ್ವ ಜನರ ಸಹಕಾರದೊಂದಿಗೆ ಪರಿಷತ್ತನ್ನು ಇನ್ನಷ್ಟು ಗಟ್ಟಿಯಾಗಿ ಕಟ್ಟಬೇಕಾಗಿದೆ ಎಂದರು.

ಕೆ.ಎಸ್.ಆರ್.ಪಿ. ಕ್ಯಾಂಪಿನ ಕಮಾಂಡೆಂಟ್ ಬಸವರಾಜ ಜಿಳ್ಳೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಕಮಾಂಡೆಂಟ್ ವೈಜನಾಥ ರೇವೂರ, ಶಿಕ್ಷಕ ಸಂಘಟಕ ದೇವಯ್ಯಾ ಗುತ್ತೇದಾರ, ಸಂಶೋಧಕ ಮುಡುಬಿ ಗುಂಡೇರಾವ ಮಾತನಾಡಿದರು. ಪ್ರಮುಖರಾದ ನಾಗೇಂದ್ರಪ್ಪ ಮಾಡ್ಯಾಳೆ, ರಾಜೇಂದ್ರ ಮಾಡಬೂಳ, ವಿನೋದ ಜೇನವೇರಿ, ವಿಶ್ವನಾಥ ತೊಟ್ನಳ್ಳಿ, ಶಿವಲೀಲಾ ತೆಗನೂರ, ಕವಿತಾ ದೇಗಾಂವ, ಶಿವಾನಂದ ಮಠಪತಿ, ಮೀನಾಕ್ಷಿ ಕುಂಬಾರ, ಲಕ್ಷ್ಮೀ ಕುಂಬಾರ ಸೇರಿದಂತೆ ಪೊಲೀಸ್ ಅಧಿಕಾರಿಗಳು ಭಾಗವಹಿಸಿದ್ದರು.

ಇದನ್ನೂ ಓದಿ: ಸಹಕಾರ ಇಲಾಖೆಯಲ್ಲಿ ಲಂಚಾವತಾರ: ಬೆಚ್ಚಿಬೀಳುವ ಮಾಹಿತಿ ಹೊರಗೆಡವಿದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here