ನಾಳೆ ಗುಲ್ಬರ್ಗಾ ವಿವಿಯ 39 ಮತ್ತು 40ನೇ ಘಟಿಕೋತ್ಸವ

1
34

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯದ 39 ಮತ್ತು 40ನೇ ಘಟಿಕೋತ್ಸವವನ್ನು ಇದೇ ಏಪ್ರಿಲ್ 27ರಂದು ಬೆಳಿಗ್ಗೆ 11.15 ಗಂಟೆಗೆ ಗುಲಬರ್ಗಾ ವಿಶ್ವವಿದ್ಯಾಲಯದ ಜ್ಞಾನಗಂಗಾ ಆವರಣದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದೆ ಎಂದು ಗು.ವಿ.ವಿ ಕುಲಪತಿ ಪ್ರೊ.ದಯಾನಂದ ಅಗಸರ್ ತಿಳಿಸಿದರು.

ಮಂಗಳವಾರ ಅವರು ಗುಲಬರ್ಗಾ ವಿಶ್ವವಿದ್ಯಾಲಯದ ರಾಧಾಕೃಷ್ಣ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಘಟಿಕೋತ್ಸವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜ್ಯದ ರಾಜ್ಯಪಾಲರು ಹಾಗೂ ವಿಶ್ವವಿದ್ಯಾಲಯಗಳ ಕುಲಾಧಿಪತಿಗಳಾದ ಥಾವರ್ ಚಂದ್ ಗೆಹ್ಲೋಟ್ ಅವರು ವಹಿಸಲಿದ್ದಾರೆ.

Contact Your\'s Advertisement; 9902492681

ರಾಜ್ಯದ ಉನ್ನತ ಶಿಕ್ಷಣ ಸಚಿವ ಹಾಗೂ ವಿಶ್ವವಿದ್ಯಾಲಯಗಳ ಸಮಕುಲಾಧಿಪತಿ ಡಾ.ಸಿ.ಎನ್.ಅಶ್ವಥ್ ನಾರಾಯಣ ಭಾಗವಹಿಸಲಿದ್ದಾರೆ. ಘಟಿಕೋತ್ಸವದ ಭಾಷಣವನ್ನು ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತೆ ಮಂಡಳಿ ನಿರ್ದೇಶಕ ಪ್ರೊ.ಎಸ್.ಸಿ.ಶರ್ಮಾ ಮಾಡಲಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ: ವಾರ್ಷಿಕ ವರದಿ ಸಲ್ಲಿಸಲು ವಕ್ಫ್ ಸಂಸ್ಥೆಗಳಿಗೆ ಸೂಚನೆ

39 ಮತ್ತು 40ನೇ ಎರಡು ವಾರ್ಷಿಕ ಘಟಿಕೋತ್ಸವಗಳನ್ನು ಒಟ್ಟಿಗೇ ಮೊದಲನೇಯ ಬಾರಿಗೆ ಹಮ್ಮಿಕೊಳ್ಳಲಾಗುತ್ತಿದೆ. 39 ಮತ್ತು 40ನೇ ಘಟಿಕೋತ್ಸವದಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ವಿವಿಧ ವಿಷಯಗಳ ಮೇಲೆ ಪದವಿಗಳನ್ನು ನೀಡಲಾಗುತ್ತಿದೆ ಎಂದರು. 39ನೇ ಘಟಿಕೋತ್ಸವದಲ್ಲಿ 3 ಜನ ಮಹನೀಯರಿಗೆ ಗೌರವ ಡಾಕ್ಟರೇಟ್ ನೀಡಲಾಗುವುದು. ಸಮಾಜಕಾರ್ಯ ಕ್ಷೇತ್ರದಲ್ಲಿ ಸಿದ್ದರಾಮ ಶರಣರು(ಬೆಲ್ದಾಳ ಶರಣರು), ಶಿಕ್ಷಣ ಕ್ಷೇತ್ರದಲ್ಲಿ ಡಾ.ಬಸವರಾಜ.ಜಿ.ಪಾಟೀಲ ಅಷ್ಠೂರ ಹಾಗೂ ವಿಜ್ಞಾನ ಕ್ಷೇತ್ರದಲ್ಲಿ ವೇಣುಗೋಪಾಲ.ಡಿ.ಹೆರೂರ ಅವರಿಗೆ ನೀಡಲಾಗುವುದು.

40ನೇ ಘಟಿಕೋತ್ಸವದಲ್ಲಿ 3 ಜನ ಮಹನೀಂiÀiರಿಗೆ ಗೌರವ ಡಾಕ್ಟರೇಟ್ ನೀಡಲಾಗುವುದು. ಸಮಾಜಕಾರ್ಯ ಕ್ಷೇತ್ರದಲ್ಲಿ ಗುರಮ್ಮ ಸಿದ್ಧಾರೆಡ್ಡಿ, ಶಿಕ್ಷಣ ಕ್ಷೇತ್ರದಲ್ಲಿ ಯುನಿಪೊಯ ಅಬ್ದುಲ್ಲಾ ಕುನ್ಹಿ ಹಾಗೂ ವಿಜ್ಞಾನ ಕ್ಷೇತ್ರದಲ್ಲಿ ಗೌತಮ್ ರಾಧಾಕೃಷ್ಣ ದೇಸಿರಾಜು ಅವರಿಗೆ ನೀಡಲಾಗುವುದು ಎಂದರು.

ಇದೇ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವೆ ಡಾ.ಮೇಧಾವಿನಿ ಎಸ್.ಕಟ್ಟಿ ಅವರು ಮಾತನಾಡಿ, 39ನೇ ಘಟಿಕೋತ್ಸವದಲ್ಲಿ ಒಟ್ಟಾರೆ 182 ಚಿನ್ನದ ಪದಕಗಳನ್ನು ವಿತರಿಸಲಾಗುವುದು. ಇದರಲ್ಲಿ 67 ಮಹಿಳಾ ವಿದ್ಯಾರ್ಥಿಗಳು ಹಾಗೂ 15 ಪುರುಷ ವಿದ್ಯಾರ್ಥಿಗಳು ಪದಕ ಪಡೆಯಲಿದ್ದಾರೆ. ಉಳಿದ 06 ಚಿನ್ನದ ಪದಕಗಳನ್ನು ನಗದು ಬಹುಮಾನ ರೂಪದಲ್ಲಿ ಪರಿವರ್ತಿಸಿ 14 ವಿದ್ಯಾರ್ಥಿಗಳಿಗೆ ವಿತರಿಸಲಾಗುವುದು. ಇದರಲ್ಲಿ 13 ಮಹಿಳಾ ವಿದ್ಯಾರ್ಥಿಗಳು ಹಾಗೂ 01 ಪುರುಷ ವಿದ್ಯಾರ್ಥಿ ಸೇರಿ 14 ವಿದ್ಯಾರ್ಥಿಗಳು ನಗದು ಬಹುಮಾನ ಪಡೆಯಲಿದ್ದಾರೆ.

ಇದನ್ನೂ ಓದಿ: ಸರ್ಕಾರಿ ನೌಕರರ ದಿನಾಚರಣೆ ಹಿನ್ನೆಲೆಯಲ್ಲಿ 20 ಅಧಿಕಾರಿ-ಸಿಬ್ಬಂದಿಗೆ ಸರ್ವೋತ್ತಮ ಪ್ರಶಸ್ತಿ ಪ್ರದಾನ

ವಿವಿಧ ನಿಕಾಯಗಳಲ್ಲಿ ಒಟ್ಟು 112 ವಿದ್ಯಾರ್ಥಿಗಳಿಗೆ  ಪಿಎಚ್.ಡಿ ಪದವಿ ಪ್ರದಾನ ಮಾಡಲಾಗುವುದು. ಇದರಲ್ಲಿ 39 ಮಹಿಳಾ ವಿದ್ಯಾರ್ಥಿಗಳು, 73 ಪುರುಷ ವಿದ್ಯಾರ್ಥಿಗಳು ಪಿಎಚ್.ಡಿ ಪದವಿ ಸ್ವೀಕರಿಸಲಿದ್ದಾರೆ. ಒಟ್ಟಾರೆ ಯು.ಜಿ ಕೋರ್ಸ್‍ಗಳಲ್ಲಿ 63 ರ್ಯಾಂಕ್‍ಗಳು, ಪಿ.ಜಿಯಲ್ಲಿ 202 ರ್ಯಾಂಕ್‍ಗಳು, 112 ಪಿಎಚ್.ಡಿ, 176 ಚಿನ್ನದ ಪದಕಗಳನ್ನು ನೀಡಲಾಗುವುದು.

39ನೇ ಘಟಿಕೋತ್ಸವದಲ್ಲಿ ಅತೀ ಹೆಚ್ಚು ಅಂಕಗಳಿಸಿದ ಚಿನ್ನದ ಪದಕಗಳ ವಿವರ: ಕನ್ನಡ ವಿಭಾಗದಲ್ಲಿ ತಮ್ಮಣ್ಣಾ ಹಣಮಂತ 10 ಚಿನ್ನದ ಪದಕಗಳು, ರಾಜ್ಯಶಾಸ್ತ್ರ ವಿಭಾಗದಲ್ಲಿ ಜಸಿಕಾ ಮಲ್ಲಿಕಾರ್ಜುನ 06 ಚಿನ್ನದ ಪದಕಗಳು, ಸಮಾಜಕಾರ್ಯ ವಿಭಾಗದಲ್ಲಿ ಶಿವಕಾಂತಾ ಮಾಣಿಕರಾವ 05 ಚಿನ್ನದ ಪದಕಗಳು, ಗಣಕ ವಿಜ್ಞಾನ ವಿಭಾಗದಲ್ಲಿ ಶಿಲ್ಪಾ ರಾಣಿ 06 ಚಿನ್ನದ ಪದಕಗಳು, ಸೂಕ್ಷ್ಮ ಜೀವಶಾಸ್ತ್ರ ವಿಭಾಗದಲ್ಲಿ ಪೂಜಾರಿ ಜಗದವ್ವ 06 ಚಿನ್ನದ ಪದಕಗಳು, ಪ್ರಾಣಿಶಾಸ್ತ್ರ ವಿಭಾಗದಲ್ಲಿ ಮಧುಮತಿ 07 ಚಿನ್ನದ ಪದಕಗಳು, ಎಂ.ಬಿ.ಎ ವಿಭಾಗದಲ್ಲಿ ತೇಜೇಂದ್ರ ಕುಮಾರ ಗೆ 07 ಚಿನ್ನದ ಪದಕಗಳನ್ನು ನೀಡಲಾಗುವುದು.

39ನೇ ಘಟಿಕೋತ್ಸವದಲ್ಲಿ ಒಟ್ಟು 28,186 ವಿದ್ಯಾರ್ಥಿಗಳು ವಿವಿಧ ಪದವಿಗಳನ್ನು ಪಡೆಯಲಿದ್ದಾರೆ. ಇದರಲ್ಲಿ 14,134 ಪುರುಷ ಹಾಗೂ 14,052 ಮಹಿಳಾ ವಿದ್ಯಾರ್ಥಿಗಳಿದ್ದಾರೆ. 40ನೇ ಘಟಿಕೋತ್ಸವದಲ್ಲಿ ಒಟ್ಟಾರೆ 171 ಚಿನ್ನದ ಪದಕಗಳನ್ನು ವಿತರಿಸಲಾಗುವುದು. ಇದರಲ್ಲಿ 53 ಮಹಿಳಾ ವಿದ್ಯಾರ್ಥಿಗಳು ಹಾಗೂ 21 ಪುರುಷ ವಿದ್ಯಾರ್ಥಿಗಳು ಪದಕ ಪಡೆಯಲಿದ್ದಾರೆ. ಉಳಿದ 06 ಚಿನ್ನದ ಪದಕಗಳನ್ನು ನಗದು ಬಹುಮಾನ ರೂಪದಲ್ಲಿ ಪರಿವರ್ತಿಸಿ 16 ವಿದ್ಯಾರ್ಥಿಗಳಿಗೆ ವಿತರಿಸಲಾಗುವುದು. ಇದರಲ್ಲಿ 11 ಮಹಿಳಾ ವಿದ್ಯಾರ್ಥಿಗಳು 05 ಪುರುಷ ವಿದ್ಯಾರ್ಥಿ ನಗದು ಬಹುಮಾನ ಪಡೆಯಲಿದ್ದಾರೆ.

ಇದನ್ನೂ ಓದಿ: ಕೃಷಿ ವಿಜ್ಞಾನ ಕೇಂದ್ರ ಕಲಬುರಗಿಯಲ್ಲಿ ರೈತ ಸಮ್ಮೇಳನ

ವಿವಿಧ ನಿಕಾಯಗಳಲ್ಲಿ ಒಟ್ಟು 47 ವಿದ್ಯಾರ್ಥಿಗಳಿಗೆ  ಪಿಎಚ್.ಡಿ ಪದವಿ ಪ್ರದಾನ ಮಾಡಲಾಗುವುದು. ಇದರಲ್ಲಿ 27 ಮಹಿಳಾ ವಿದ್ಯಾರ್ಥಿಗಳು, 20 ಪುರುಷ ವಿದ್ಯಾರ್ಥಿಗಳು ಪಿಎಚ್.ಡಿ ಪದವಿ ಸ್ವೀಕರಿಸಲಿದ್ದಾರೆ. ಒಟ್ಟಾರೆ ಯು.ಜಿ ಕೋರ್ಸ್‍ಗಳಲ್ಲಿ 70 ರ್ಯಾಂಕ್‍ಗಳು, ಪಿ.ಜಿಯಲ್ಲಿ 202 ರ್ಯಾಂಕ್‍ಗಳು, 47 ಪಿಎಚ್.ಡಿ, 165 ಚಿನ್ನದ ಪದಕಗಳನ್ನು ನೀಡಲಾಗುವುದು.

40ನೇ ಘಟಿಕೋತ್ಸವದಲ್ಲಿ ಅತೀ ಹೆಚ್ಚು ಅಂಕಗಳಿಸಿದ ಚಿನ್ನದ ಪದಕಗಳ ವಿವರ: ಕನ್ನಡ ವಿಭಾಗದಲ್ಲಿ ಪುರ್ಣಿಮಾ ಲಿಂಗಣ್ಣಾ ಬಿ.ಗೆ 12 ಚಿನ್ನದ ಪದಕಗಳು, ರಾಜ್ಯಶಾಸ್ತ್ರ ವಿಭಾಗದಲ್ಲಿ ಸುಬಯಾ ಖಾತೂನ ಸಿಕಂದರ 06 ಚಿನ್ನದ ಪದಕಗಳು, ಸಸ್ಯಶಾಸ್ತ್ರ ವಿಭಾಗದಲ್ಲಿ ಸಮೀರಾ ಸಾನಜಿನ ಮಹ್ಮದ್ ಮಶಿಯುದ್ದೀನ ಕಾರಿಗ 05 ಚಿನ್ನದ ಪದಕಗಳು, ಜೀವರಸಾಯನಶಾಸ್ತ್ರದಲ್ಲಿ ವಿಭಾಗದಲ್ಲಿ ಅಣ್ಣಾ ಖಾತೂನ 05 ಚಿನ್ನದ ಪದಕಗಳು, ರಸಾಯನಶಾಸ್ತ್ರ ವಿಭಾಗದಲ್ಲಿ ರೇಖಾ ವೆಂಕಟರಾವ 05 ಚಿನ್ನದ ಪದಕಗಳು, ಸೂಕ್ಷ್ಮಜೀವಶಾಸ್ತ್ರ ವಿಭಾಗದಲ್ಲಿ ವಿದ್ಯಾಶ್ರೀ ಇಲಕಲ 07 ಚಿನ್ನದ ಪದಕಗಳು, ಪ್ರಾಣಿಶಾಸ್ತ್ರ ವಿಭಾಗದಲ್ಲಿ ನಿಹಾಲ ಭರತಲಾಲ 07 ಚಿನ್ನದ ಪದಕಗಳು, ಎಂ.ಬಿ.ಎ ವಿಭಾಗದಲ್ಲಿ ಆರ್ಸಿಯಾ ಕೌಸರಗೆ 08 ಚಿನ್ನದ ಪದಕಗಳನ್ನು ನೀಡಲಾಗುವುದು.

ಇದನ್ನೂ ಓದಿ: ದತ್ತಾತ್ರೇಯ ಪಾಟೀಲ ರೇವೂರ ಗಂಗಾ ಕಲ್ಯಾಣ ಯೋಜನೆ ಫಲಾನುಭವಿಗಳಿಗೆ ಸಾಮಾಗ್ರಿ ವಿತರಣೆ

40ನೇ ಘಟಿಕೋತ್ಸವದಲ್ಲಿ ಒಟ್ಟು 28,250 ವಿದ್ಯಾರ್ಥಿಗಳು ವಿವಿಧ ಪದವಿಗಳನ್ನು ಪಡೆಯಲಿದ್ದಾರೆ. ಇದರಲ್ಲಿ 14,208 ಪುರುಷ ಹಾಗೂ 14,042 ಮಹಿಳಾ ವಿದ್ಯಾರ್ಥಿಗಳಿದ್ದಾರೆ ಎಂದ ತಿಳಿಸಿದರು. ಪ್ರತಿಕಾಗೋಷ್ಠಿಯಲ್ಲಿ ಗು.ವಿ ಕುಲಸಚಿವ ಶರಣಬಸಪ್ಪ ಕೋಟೆಪ್ಪಗೋಳ, ವಿತ್ತಾಧಿಕಾರಿ ಪ್ರೊ.ಎನ್.ಬಿ. ನಡುವಿನಮನಿ ಅವರು ಉಪಸ್ಥಿತರಿದ್ದರು.

ಇದನ್ನೂ ಓದಿ: ಕಲಬುರಗಿ ಪೇಟೆ ಧಾರಣೆ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here