ಮಣೂರ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ವೈದ್ಯರಿಂದ ಅಪರೂಪ ಯಶಸ್ವಿ ಶಸ್ತ್ರಚಿಕಿತ್ಸೆ

0
77

ಕಲಬುರಗಿ: ರಸ್ತೆ ಅಪಘಾತದಲ್ಲಿ ಕೂಲಿಕಾರ್ಮಿಕನೊಬ್ಬ ತಲೆ ಮತ್ತು ಮುಖಕ್ಕೆ ಭಾರಿ ಪೆಟ್ಟು ಬಿದ್ದು ನೇರವಾಗಿ ಇಲ್ಲಿನ ಹುಮನಾಬಾದ್ ರಿಂಗ್ ರಸ್ತೆಯ ಬ್ಯಾರೆ ಹಿಲ್ಸ್ ವೃತ್ತದಲ್ಲಿರುವ ಪ್ರತಿಷ್ಠಿತ ಮಣೂರ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಾಗಿದ್ದರಿಂದ ಆಸ್ಪತ್ರೆಯ ವ್ಯವಸ್ಥಾಪಕ ಮತ್ತು ನಿರ್ದೇಶಕ ಡಾ. ಫಾರುಖ ಅಹ್ಮದ್ ಮಣೂರ ನೇತೃತ್ವದಲ್ಲಿ ಪರಿಣಿತ ವೈದ್ಯರು ಸತತ ೧೦ ಗಂಟೆಗಳ ಶಸ್ತ್ರಚಿಕಿತ್ಸೆ ನೆರವೇರಿಸಿ, ರೋಗಿ ಮುಖದಲ್ಲಿ ನಗು ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ:ಬುದ್ಧ, ಬಸವ, ಅಂಬೇಡ್ಕರ್ ತತ್ವ ಪಾಲನೆಗೆ ಪ್ರಿಯಾಂಕ್ ಖರ್ಗೆ ಕರೆ

Contact Your\'s Advertisement; 9902492681

ಚಿತ್ತಾಪುರ ತಾಲೂಕಿನ ಕೋರವಾರ ಗ್ರಾಮದ ೩೧ ವರ್ಷದ ಖತಲಸಾಬ್ ಯಶಸ್ವಿ ಶಸ್ತ್ರಚಿಕಿತ್ಸೆಗೊಳಗಾದ ಕೂಲಿಕಾರ್ಮಿಕ. ತಲೆಯಲ್ಲಿ ರಕ್ತ ಹೆಪ್ಪುಗಟ್ಟಿತ್ತು. ಪ್ರಜ್ಞೆ ತಪ್ಪಿತ್ತು. ಎದೆ, ಮುಖ ಮತ್ತು ತಲೆ ಭಾಗವನ್ನು ಸಿಟಿ ಸ್ಕ್ಯಾನ್ ಮಾಡಿ ಪರೀಕ್ಷಿಸಿದ್ದಾಗ ಒಳಗಿದ್ದ ಮೂಳೆಗಳು ಮುರಿದಿದ್ದವು. ಕೊನೆಗೆ ಕೆಲ ಮೂಳೆ ಹೊರತೆಗೆದು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಮೆದುಳಿನ ಎಲುಬು ಪುಡಿ ಪುಡಿ ಆಗಿದ್ದರಿಂದ ವಿಶೇಷ ವಿಧಾನದಿಂದ ಮೆದುಳು ಕೂಡಿಸಲಾಗಿದೆ. ಇದು ವೈದ್ಯಕೀಯ ಲೋಕದಲ್ಲಿ ಅಸಾಧಾರಣ ಕಾರ್ಯ ಎನ್ನಬಹುದು ಎಂದು ನೆರೋ ಶಸ್ತ್ರಚಿಕಿತ್ಸಕ ಡಾ. ಶಶಾಂಕ ಸಂಗೋಳಿ ಅವರು ಹೇಳಿದರು.

ಇದನ್ನೂ ಓದಿ: ಶಾಸಕ ಅವಿನಾಶ್ ಜಾಧವ್ ಅವರಿಂದ ಸಿಡಿಲು ಬಡಿದು ಮೃತಪಟ್ಟ ಕುಟುಂಬಕ್ಕೆ ಪರಿಹಾರ ಚೇಕ್ ವಿತರಣೆ

ರೋಗಿಯ ಆರ್ಥಿಕ ಪರಿಸ್ಥಿತಿ ಮನಗಂಡು ಆತನಿಗೆ ಶಸ್ತ್ರಚಿಕಿತ್ಸಾ ವೆಚ್ಚ ಕೂಡ ಕಡಿತಗೊಳಿಸಿ ರೋಗಿಗೆ ಆಸ್ಪತ್ರೆ ನೆರವಾಗಿದೆ ಎಂದರು.
ಕಳೆದ ಮಾರ್ಚ್ ೧೬ ರಂದು ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕಕ್ಕೆ ಬಂದು ಒಳರೋಗಿಯಾಗಿ ದಾಖಲಾಗಿದ್ದ, ರೋಗಿ ಪರಿಸ್ಥಿತಿ ತುಂಬಾ ಚಿಂತಾಜನಕವಾಗಿತ್ತು. ಇದನ್ನು ನರರೋಗ, ಮುಖ ಮತ್ತು ಇಎನ್‌ಟಿ ಸಂಬಂಧಿ ಮೂರು ಟ್ರಾನ್ಸ್ನಾಸಲ್ ಸಿಐಎಫ್ ಶಸ್ತ್ರಚಿಕಿತ್ಸೆ ಮಾಡಿ ರೋಗಿಯನ್ನು ಗುಣಪಡಿಸಲಾಗಿದೆ ಎಂದು ಇಎನ್‌ಟಿ ಡಾ.ದಿನೇಶ ವಾಲ್ಸೆ, ಅರವಳಿಕೆ ತಜ್ಞ ಡಾ. ಅನಿಲ್ ಎಸ್. ಕುನ್ನೂರ್, ಒಎಂಎಫ್ ತಜ್ಞ ಆನಂದ ಮಂಗಲಗಿ ತಿಳಿಸಿದರು. ಈ ಸಂದರ್ಭದಲ್ಲಿ ಆಸ್ಪತ್ರೆ ಸಿಬ್ಬಂದಿ ವರ್ಗದವರು ಇದ್ದರು.

ಇದನ್ನೂ ಓದಿ: ಸರ್ಕಾರ ಅಭ್ಯರ್ಥಿಗಳ ಭವಿಷ್ಯದ ಬಗ್ಗೆ ಚೆಲ್ಲಾಡವಾಡುತ್ತಿದೆ: ಪ್ರಿಯಾಂಕ್ ಖರ್ಗೆ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here