ಅಂಬೇಡ್ಕರ ಅವರ ವಿಚಾರಧಾರೆ ಜನರಿಗೆ ಇನ್ನೂ ತಲುಪಿಲ್ಲ: ಶಾಸಕ ಪ್ರಿಯಾಂಕ್ ಖರ್ಗೆ ವಿಷಾದ.

0
28

ಕಲಬುರಗಿ : ಕಳೆದ 131 ವರ್ಷದಿಂದಲೂ ಬಾಬಾಸಾಹೇಬರ ವಿಚಾರಧಾರೆಗಳು ಜನರಿಗೆ ತಲುಪಿಲ್ಲ ಹಾಗೂ ಅವರಿಗೆ ಸಂವಿಧಾನದ ಬಗ್ಗೆ ಅರಿವಿಲ್ಲ ಇದು ಅತ್ಯಂತ ವಿಷಾದದ ಸಂಗತಿ ಎಂದು ಮಾಜಿ ಸಚಿವರಾದ, ಶಾಸಕರಾದ ಹಾಗೂ ಕೆಪಿಸಿಸಿ ವಕ್ತಾರರಾದ ಪ್ರಿಯಾಂಕ್ ಖರ್ಗೆ ಹೇಳಿದರು.

ತಾಲೂಕಿನ ಭೀಮಳ್ಳಿ ಗ್ರಾಮದಲ್ಲಿ ಸಂವಿಧಾನ ಶಿಲ್ಪಿ ಡಾ ಬಾಬಾಸಾಹೇಬ ಅಂಬೇಡ್ಕರ ಅವರ ಹಾಗೂ ಭಗವಾನ ಬುದ್ದ‌ ಅವರ ಪ್ರತಿಮೆ ಉದ್ಘಾಟನೆ ನೇರವೇರಿಸಿದ ನಂತರ ಜಗಜ್ಯೋತಿ ಬಸವೇಶ್ವರ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಡಾ ಬಾಬಾಸಾಹೇಬ ಅಂಬೇಡ್ಕರ ಅವರ 131 ನೇ ಜಯಂತಿಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

Contact Your\'s Advertisement; 9902492681

ಇದನ್ನೂ ಓದಿ: ಇಪ್ತಿಯಾರ ಕೂಟ ಸಾಮರಸ್ಯಕ್ಕೆ ಪೂರಕ-ಸಂಜೀವಕುಮಾರ ಶೆಟ್ಟಿ

ನಮ್ಮ ಜನರು ಸಂವಿಧಾನದ ಕುರಿತು ಅಧ್ಯಯನ ಮಾಡಬೇಕು ಅಂದಾಗಲೇ ಬಾಬಾಸಾಹೇಬರ ಕುರಿತು ಮತ್ತಷ್ಟು ತಿಳಿದುಕೊಳ್ಳಲು ಸಹಕಾರಿಯಾಗುತ್ತದೆ. ಆದರೆ, ಜನರು ನಮ್ಮನ್ನು ಮೆರವಣಿಗೆ ಮೂಲಕ ಸಮಾರಂಭಕ್ಕೆ ಕರೆತರುತ್ತಾರೆ. ನಮ್ಮ ಮೇಲೆ ಹೂವಿನ ಮಳೆ ಸುರಿಸುತ್ತಾರೆ. ಇದು ವೈಯಕ್ತಿಕವಾಗಿ ನನಗೆ ಇಷ್ಟವಿಲ್ಲ. ಈ ತರಹದ ಆಚರಣೆಗಳನ್ನ ಹಾಗೂ ವ್ಯಕ್ತಿಯ ಪೂಜೆಗಳನ್ನು ಡಾ ಅಂಬೇಡ್ಕರ್ ವಿರೋಧಿಸಿದ್ದರು. ಕಾರಣ, ಇದು ರಾಜಕೀಯ ಭಕ್ತಿ . ಸರ್ವಾಧಿಕಾರದ ಸಂಕೇತ ಹಾಗೂ ಸಂವಿಧಾನದ‌ ಆಶಯಕ್ಕೆ ವಿರುದ್ದವಾದ ಕ್ರಿಯೆಯಾಗಿದೆ. ನೀವು ವ್ಯಕ್ತಿ ಪೂಜೆ ಬಿಡಬೇಕು ಮೋದಿ ಮೇಲಿನ ಭಕ್ತಿ, ಇಂದಿರಾಗಾಂಧಿ ಮೇಲಿನ ಭಕ್ತಿ ಹಾಗೂ ಖರ್ಗೆ ಅವರ ಮೇಲಿನ ಭಕ್ತಿಯೂ ಕೂಡಾ ಸರಿಯಲ್ಲ ಎಂದರು.

ಸಂವಿಧಾನದಲ್ಲಿ ಎಲ್ಲರಿಗೂ ಸಮಾನ ಹಕ್ಕು ಅವಕಾಶಗಳು ಇವೆ. ಎಲ್ಲ ವರ್ಗದವರಿಗೆ ಸಂವಿಧಾನಬದ್ಧ ಅನುಕೂಲ ಒದಗಿಸಲಾಗಿದೆ. ಹಾಗಾಗಿ ಎಲ್ಲ ವರ್ಗದ ಜನರು ಅಂಬೇಡ್ಕರ ಅವರನ್ನು ಒಂದು ವರ್ಗಕ್ಕೆ ಸೀಮಿತಿಗೊಳಿಸದೆ ಅವರ ಜಯಂತಿ ಆಚರಣೆಯಲ್ಲಿ ಎಲ್ಲರೂ ಭಾಗವಹಿಸಬೇಕು ಎಂದು ಖರ್ಗೆ ಕರೆ ನೀಡಿದರು.

ಇದನ್ನೂ ಓದಿ: ಮಾತು ಕೊಟ್ಟಂತೆ ಕುಡಿಯುವ ನೀರಿನ ಸೌಲಭ್ಯ ನೀಡುವೆ: ಮತ್ತಿಮಡು

ಬೆಂಗಳೂರಿನಲ್ಲಿ ರೂ 125 ಕೋಟಿ‌ ವೆಚ್ಚದಲ್ಲಿ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ‌ನಿರ್ಮಿಸಲಾದ ಡಾ ಬಾಬಾಸಾಹೇಬ್ ಸ್ಕೂಲ್ ಆಫ್ ಎಕನಾಮಿಕ್ಸ್ ಶಾಲೆ ಲಂಡನ್ ನಲ್ಲಿರುವ ಸ್ಕೂಲ್ ಆಫ್ ಎಕನಾಮಿಕ್ಸ್ ಶಾಲೆಯಿಂದ ಸ್ಪೂರ್ತಿ ಪಡೆಯಲಾಗಿದೆ. ಅಲ್ಲಿ ಡಾ ಬಾಬಾಸಾಹೇಬರ ಪುತ್ಥಳಿ ಸ್ಥಾಪಿಸಲಾಗಿದೆ. ಆದರೆ, ನಮ್ಮದೇ ರಾಯಚೂರಿನ ನ್ಯಾಯಾಲಯದಲ್ಲಿ ನಡೆದ ಗಣರಾಜ್ಯದ ಆಚರಣೆ‌ ದಿನದಂದು ಡಾ ಬಾಬಾಸಾಹೇಬರ ಫೋಟೋ ತೆಗೆಸುತ್ತಾರೆ ಎಂದರೆ ನಾವು ಯಾವ ಸ್ಥಿತಿಗೆ ಮುಟ್ಟಿದ್ದೇವೆ ? ಅವರಿಗೆ ಸಿಗಬೇಕಾದ ಗೌರವ ಸಿಕ್ಕಿಲ್ಲ ಇದು ಅತ್ಯಂತ ದುರ್ದೈವದ ಸಂಗತಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಂವಿಧಾನ ರಚನೆಗೆ ಮುನ್ನ ನಡೆದ ಸುದೀರ್ಘ ಚರ್ಚೆಯಲ್ಲಿ ವಿದೇಶದವರಿಂದ ಸಂವಿಧಾನ ರಚೆನೆಗೆ ಆಗ್ರಹ ವ್ಯಕ್ತವಾದಾಗ, ಮಹಾತ್ಮಾಗಾಂಧಿ ಇದನ್ನು ಒಪ್ಪದೇ ಈ ದೇಶದ ಸಮಾಜಿಕ‌ ಸ್ಥಿತಿಗತಿ ಸೇರಿದಂತೆ ವಿವಿಧ ಭಾಷೆಗಳು, ಜನರ ಆಚಾರ ವಿಚಾರಗಳ ಆಳವಾದ ಅಧ್ಯಯನ ಮಾಡಿದ್ದ ಡಾ ಬಾಬಾಸಾಹೇಬರಿಂದಲೇ ಸಂವಿಧಾನ ರಚಿಸುವುದಾಗಿ ಗಾಂಧೀಜಿ ಅವರು ಹೇಳಿದ್ದರು ಎಂದು ಸಂವಿಧಾನ ರಚನೆ ಪೂರ್ವದ ಸನ್ಮಿವೇಶವನ್ನು ಬಿಡಿಸಿಟ್ಟರು. ಆದರೆ,ಮನಸ್ಮೃತಿ‌ ಹಿನ್ನೆಲೆಯವರು ಅಂಬೇಡ್ಕರ ಅವರು ರಚಿಸಿದ ಸಂವಿಧಾನ ಬೇಡ ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿ ಸಂವಿಧಾನದ ಪ್ರತಿಗಳನ್ನು ಸುಟ್ಟರು. ಅಷ್ಟೆಲ್ಲ ಅಡೆ ತಡೆಗಳ ದಾಟಿ ಅಂಬೇಡ್ಕರ ಅವರು ಪ್ರಪಂಚದಲ್ಲಿಯೇ ಅತ್ಯಂತ ಶ್ರೇಷ್ಠ ಸಂವಿಧಾನವನ್ನು ನಮಗೆ ನೀಡಿದ್ದಾರೆ ಇದು ಹೆಮ್ಮೆಯ ವಿಷಯ ಎಂದರು.

ಇದನ್ನೂ ಓದಿ: ನಮ್ಮ ನಡೆ — ಹಾವೇರಿ ಜಿಲ್ಲೆಯ ಕಾಗಿನೆಲೆ ಕಡೆ

ಇದಕ್ಕೂ ಮುನ್ನ ಕಲಬುರಗಿ ‌ದಕ್ಷಿಣ ಶಾಸಕರಾದ ದತ್ತಾತ್ರೆಯ ಪಾಟೀಲ ರೇವೂರು ಅವರು ಮಾತನಾಡಿ 12 ನೆಯ ಶತಮಾನದ ಸಮಾಜಿಕ‌ ಸಮಾನತೆ ಹೋರಾಟಗಾರ ಬಸವಣ್ಣನವರ ತತ್ವಗಳು ಡಾ ಬಾಬಾಸಾಹೇಬರು‌ ರಚಿಸಿದ ಸಂವಿಧಾನದಲ್ಲಿ ಅಡಕವಾಗಿವೆ. ಮಹಿಳಾ ಸ್ವಾತಂತ್ರ್ಯ, ಸಮಾನತೆ ಶಿಕ್ಷಣ, ಮೂಲಭೂತ ಹಕ್ಕು ಗಳನ್ನು ನಾವೆಲ್ಲ ಸಂವಿಧಾನದಿಂದ ಪಡೆದುಕೊಂಡಿದ್ದೇವೆ ಎಂದರೆ ಅದು ಬಾಬಾಸಾಹೇಬರ ಪ್ರರಿಶ್ರಮದ ಫಲ ಎಂದರು.

ಈ ಸಂದರ್ಭದಲ್ಲಿ ಕೆಕೆಆರ್ ಡಿಬಿ ಅಧ್ಯಕ್ಷರಾದ ಹಾಗೂ ಕಲಬುರಗಿ ದಕ್ಷಿಣ ಶಾಸಕರಾದ ದತ್ತಾತ್ರೆಯ ಪಾಟೀಲ್, ಮಾಜಿ ಎಂ ಎಲ್ ಸಿ ಅಲ್ಲಮಪ್ರಭು ಪಾಟೀಲ, ಸಂತೋಷ ಪಾಟೀಲ್, ಹನುಮಂತ ಬೋಧನಕರ, ವಿಠ್ಠಲ್ ದೊಡ್ಡಮನಿ, ಶರಣು ಮೋದಿ, ಸಂತೋಷ ಬಿಲಗುಂದಿ, ನೀಲಕಂಠರಾವ ಮೂಲಗೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಇದನ್ನೂ ಓದಿ: ಆಶಾ, ಅಂಗನವಾಡಿ ಕಾರ್ಯಕರ್ತರ ಕೋರೊನಾ ಸಂದರ್ಭದ ಸೇವೆ ಮರೆಯಲಾರದು: ಶಾಸಕ ಸುಭಾಷ್ ಗುತ್ತೇದಾರ್

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here