ಕಲಬುರಗಿ: ಮುಸ್ಲಿಂರು ನಮಾಜ್ ಮಾಡುವಾಗ ಹಿಂದುಗಳಾದ ನಾವುಗಳು ಅವರ ರಕ್ಷಣೆಗೆ ನೀಲಿ ಶಾಲು ಹಾಕಿಕೊಂಡು ಮಸೀದಿಯ ಎದುರುಗಡೆ ಅವರ ರಕ್ಷಾಕವಚವಾಗಿ ನಿಲ್ಲುತ್ತೇವೆ ಎಂದು ದಲಿತ ಸೇನೆಯ ರಾಜ್ಯಾಧ್ಯಕ್ಷ ಹಣಮಂತ ಜಿ. ಯಳಸಂಗಿ ಅವರು ಆಂದೋಲಾ ಶ್ರೀಗಳ ಹೇಳಿಕೆಗೆ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಮಸೀದಿಯ ಮೇಲೆ ಅಳವಡಿಸಲಾಗಿರುವ ಸ್ಟೀಕರ್‍ಗಳನ್ನು ಬರುವ 8ನೇ ತಾರೀಖಿನವರೆಗೆ ತೆಗೆಯದೇ ಹೋದರೆ 9ನೇ ತಾರೀಖಿನಂದು ಎಲ್ಲಾ ಮಸೀದಿಗಳ ಎದುರುಗಡೆ ಡಬಲ್ ಸೌಂಡ್ ಡಾಲ್ಬಿಗಳಲ್ಲಿ ಹನುಮಾನ್ ಚಾಳಿಸ್‍ನ್ನು ಹಚ್ಚಲಾಗುತ್ತದೆ ಎಂದು ಆದೋಲಾ ಶ್ರೀ ಹೇಳಿಕೆ ಕೊಟ್ಟಿರುವುದಕ್ಕೆ ದಲಿತ ಸೇನೆ ಅಷ್ಟೇ ಅಲ್ಲಾ ಈಡಿ ಹಿಂದು ಮುಸ್ಲಿಂ ಬಾಂಧವರು ಅವರ ವಿರುದ್ಧ ರೊಚ್ಚಿಗೆದ್ದಿದ್ದಾರೆಂದು ಹೇಳಿದರು.
ಇದನ್ನೂ ಓದಿ: ಗೃಹ ಸಚಿವರಿಗೆ ಕಪ್ಪು ಬಟ್ಟಿ ಪ್ರದರ್ಶನ: ಕಾಂಗ್ರೆಸ್ ಕಾರ್ಯಕರ್ತರ ಬಂಧನ
ದಲಿತ ಸೇನೆಯ ಕಾರ್ಮಿಕ ಘಟಕದ ಪ್ರಧಾನ ಕಾರ್ಯದರ್ಶಿ ಇರ್ಷಾದ್ ಅಲಿ ಅವರು ಮಾತನಾಡುತ್ತಾ, ಆಂದೋಲಾ ಶ್ರೀಗೆ ತಾಕತ್ತಿದ್ದರೇ ಅವರು ಕೊಟ್ಟಿರುವ ಹೇಳಿಕೆಯಂತೆ ಬರುವ 9ನೇ ತಾರೀಖಿನಂದು ಮಸೀದಿಯ ಎದುರುಗಡೆ ಹನುಮಾನ್ ಚಾಳಿಸ್‍ನ್ನು ಹಚ್ಚಲಿ ನೋಡೋಣ, ಹೇಳೊಕೆ ಶ್ರೀಗಳಂತೆ ಮಾಡೋ ಕೆಲಸ ಮಾತ್ರ ಮಣ್ಣತಿನ್ನೋದು ಎಂದರು.
ರಾಜ್ಯದ ರಾಜಕೀಯದಲ್ಲಿ ತಮ್ಮ ಬೆಳೆಯನ್ನು ಬೇಯಿಸಿಕೊಳ್ಳಲು ರಾಜಕಾರಣಿಗಳು ಜನರ ಸಮಸ್ಯೆಗಳನ್ನು ಬಗೆ ಹರಿಸುವುದನ್ನು ಬಿಟ್ಟು ಸಮಸ್ಯೆಗಳನ್ನು ಹುಟ್ಟು ಹಾಕುತ್ತಿದ್ದಾರೆ. ಯಾವುದಾದರೊಂದು ಸಮಸ್ಯೆಯನ್ನು ಹುಟ್ಟಿಹಾಕಿ ಆ ಸಮಸ್ಯೆಯನ್ನು ಬಗೆಹರಿಯುವ ಹಂತಕ್ಕೆ ಬರುತ್ತಿದ್ದಂತೆ ಮತ್ತೊಂದು ಸಮಸ್ಯೆಯನ್ನು ಹುಟ್ಟಿ ಹಾಕಿ ಹಿಂದಿನ ಸಮಸ್ಯೆಯನ್ನು ಮರೆಯುವಂತೆ ಮಾಡುವುದು ಸದ್ಯದ ರಾಜಕೀಯ ಸ್ಥೀತಿಯಾಗಿದೆ ಎಂದರು.
ಇದನ್ನೂ ಓದಿ: ಜೇವರ್ಗಿ- ಯಡ್ರಾಮಿ ಕಾಲುವೆಗಳಿಗೆ ನೀರು ಹರಿಸಿರಿ
ಹಿಂದು ಮುಸ್ಲಿಂ ಒಟ್ಟುಗೂಡಿದರೆ ಒಂದಲ್ಲ ಲಕ್ಷ ಜನ ಆಂದೋಲಾ ಶ್ರೀಗಳು ಬಂದರು ಏನು ಮಾಡಕ್ಕಾಗಲ್ಲ, ಈ ಒಬ್ಬ ಆಂದೋಲಾ ಶ್ರೀ ಏನು ಮಾಡತ್ತಾನೆ ಎಂದು ಖಾರವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ದಲಿತ ಸೇನೆಯ ಜಿಲ್ಲಾಧ್ಯಕ್ಷ ಮಂಜುನಾಥ ಭಂಡಾರಿ ಇದ್ದರು.