ಮೂಲ ಸೌಕರ್ಯ ಒದಗಿಸಲು ಒತ್ತಾಯಿಸಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರಗೆ ಮನವಿ

0
51

ಕಲಬುರಗಿ : ತಾಲೂಕಿನ ಪಾಣೇಗಾಂವ ಗ್ರಾಮಕ್ಕೆ ಚರಂಡಿ, ಒಳಚರಂಡಿ ಮತ್ತು ಸಾರ್ವಜನಿಕ ಗ್ರಂಥಾಲಯ, ಜಿಮ್ ವ್ಯವಸ್ಥೆ ಕಲ್ಪಿಸಲು ಒತ್ತಾಯಿಸಿ ಕಲಬುರಗಿ ದಕ್ಷಿಣ ಮತ ಕ್ಷೇತ್ರದ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ ಅವರಿಗೆ ಈಚೆಗೆ ಗ್ರಾಮಸ್ಥರು ಮನವಿ ಪತ್ರ ಸಲ್ಲಿಸಿದರು.

ಖಣದಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಪಾಣೇಗಾಂವ ಗ್ರಾಮ, ಶಿವಾಜಿ ತಾಂಡಾ, ಬಸವನ ತಾಂಡಾವು ಸಹ ಹಲವಾರು ಮೂಲಭೂತ ಸಮಸ್ಯೆಗಳಿಂದ ಕೂಡಿದೆ. ಅದರಲ್ಲೂ ಸಾರ್ವಜನಿಕ ಶೌಚಾಲಯ ಇಲ್ಲದೆ ಗ್ರಾಮಸ್ಥರು ಬಯಲು ಶೌಚಾಲಯ ಮೊರೆ ಹೋಗಿದ್ದಾರೆ.ಇದರಿಂದ ಜನರು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ.ಜೊತೆಗೆ ಚರಂಡಿ ಒಳಚರಂಡಿಯಿಲ್ಲದೆ ಗ್ರಾಮವು ಕೆಸರುಗದ್ದೆ ಯಾಗಿ ಓಡಾಡಲು ತುಂಬಾ ಕಷ್ಟಕರವಾಗುತ್ತಿದೆ. ಗ್ರಾಮದಲ್ಲಿ ವಿದ್ಯಾರ್ಥಿಗಳಿಗಾಗಿ ಗ್ರಂಥಾಲಯ ಸ್ಥಾಪಿಸಬೇಕು ಮತ್ತು ಯುವಕರಿಗಾಗಿ ದೈಹಿಕ ಸದೃಢರಾಗಲು ಜಿಮ್ಮ್ ವ್ಯವಸ್ಥೆ ಮಾಡಬೇಕು ಹಾಗೂ ಪ್ರಾಥಮಿಕ ಆರೋಗ್ಯ ಉಪ ಕೇಂದ್ರಕ್ಕೆ ಸೂಕ್ತ ಸೌಲಭ್ಯ ಕಲ್ಪಿಸಿ ಕೂಡಲೇ ಆರಂಭಿಸಬೇಕೆಂದು ಮನವಿ ಪತ್ರದ ಮೂಲಕ ಶಾಸಕರಿಗೆ ಗ್ರಾಮಸ್ಥರು ಒತ್ತಾಯಿಸಿದರು.

Contact Your\'s Advertisement; 9902492681

ಇದನ್ನೂ ಓದಿ: ಅಹಲ್ಯಬಾಯಿ ಹೋಲ್ಕರ್ ಎಂಬುವರು ಅಚ್ಚಳಿದು ಒಂದು ನಕ್ಷತ್ರ

ಮನವಿಗೆ ಸ್ಪಂದಿಸಿದ ಶಾಸಕರು, ಕೂಡಲೇ ಗ್ರಾಮದ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು. ಈ ನಿಯೋಗದ ನೇತೃತ್ವವನ್ನು ಕಮಾಂಡೋ ಸಂಜೀವ ಪವಾರ ಹಾಗೂ ಸಂತ ಸೇವಾಲಾಲ್ ಕಮಿಟಿ ಅಧ್ಯಕ್ಷ ಜೇತಾಲಾಲ ರಾಠೋಡ, ಲಖನ್ ಪವಾರ್ ವಹಿಸಿದ್ದರು.

ಈ ನಿಯೋಗದಲ್ಲಿ ಗ್ರಾಮದ ಪ್ರಮುಖರಾದ ಕಾಂತು ಚವಾಣ, ಕಿಶನ್ ರಾಠೋಡ್ , ಅನಿಲ್ ರಾಠೋಡ್, ಹಾಮಣ್ಣ ಪವಾರ, ರಮೇಶ್ ರಾಠೋಡ್, ರಾಜು ಮಚಖೇಡ್, ಸೇರಿದಂತೆ ಗ್ರಾಮದ ಹಿರಿಯರು ಯುವಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಇದನ್ನೂ ಓದಿ: ಕಸಾಪದಿಂದ ಸಾರ್ವಜನಿಕರಿಗೆ ಪರಿಸರ ಸಂರಕ್ಷಣೆ ಕರಪತ್ರ ವಿತರಣೆ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here