ದೇಶಪ್ರೇಮಿ ನಾಲ್ವಡಿ ರಾಜಾ ವೆಂಕಟಪ್ಪ ನಾಯಕರ ಪಠ್ಯ ಕಡಿತ ಬೇಸರ ಮೂಡಿಸಿದೆ: ರಾಜಾ ಕೃಷ್ಣಪ್ಪ ನಾಯಕ

0
24
  • ಸುರಪುರ: ದರಬಾರ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ

ಸುರಪುರ: ಸರಕಾರ ಪಠ್ಯ ಪುಸ್ತಕ ರಚನಾ ಸಮಿತಿಯ ಮೂಲಕ ಪರಿಷ್ಕರಿಸಲಾದ ಪಠ್ಯ ಪುಸ್ತಕದಲ್ಲಿ ಸುರಪುರ ಅರಸರ ಇತಿಹಾಸ ಕಡಿತಗೊಳಿಸಿದ್ದನ್ನು ವಿರೋಧಿಸಿ ಸುರಪುರ ಅರಸು ಮನೆತನದ ರಾಜಾ ಕೃಷ್ಣಪ್ಪ ನಾಯಕ ಅವರು ವತನದಾರರ ಜೊತೆಗೂಡಿ ನಗರದ ದರಬಾರ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ರಾಜಾ ಕೃಷ್ಣಪ್ಪ ನಾಯಕ ಮಾತನಾಡಿ, ಸುರಪುರ ಸಂಸ್ಥಾನ ನಾಡಿಗೆ ನೀಡಿದ ಕೊಡುಗೆಗಳ ಬಗ್ಗೆ ಹಲವಾರು ಜೀವಂತಿಕೆ ಸಾಕ್ಷಿಗಳು ಪ್ರಸಕ್ತ ಕಾಲದಲ್ಲಿವೆ,ಪ್ರಥಮ ಸ್ವತಂತ್ರ ಸಂಗ್ರಾಮದಲ್ಲಿ ರಾಜಾ ನಾಲ್ವಡಿ ವೆಂಕಟಪ್ಪ ನಾಯಕ ಅಪ್ರತಿಮ ಸಾಧನೆ ಮಾಡಿದ್ದಾರೆ. ಅಂತಹ ದೇಶಪ್ರೇಮಿಯ ಪಠ್ಯ ಕಡಿತ ಮಾಡಿರುವುದು ಬೇಸರ ಮೂಡಿಸಿದೆ ಎಂದರು.

Contact Your\'s Advertisement; 9902492681

ಇದನ್ನೂ ಓದಿ: ಕತ್ತಲು ಮುಕ್ತ ತಾಲೂಕು ಮಾಡಲು ಶಾಸಕರ ಮಾರ್ಗದರ್ಶನದಲ್ಲಿ ಕಾರ್ಯ: ಹಳಿಚಂಡಿ

ರುಕ್ಮಾಪುರ ಸಮೀಪದ ಕ್ಯಾಪ್ಟನ್ ಜಾರ್ಜ್ ನ್ಯೂಬೆರಿ ಹತನಾದ ಸಮಾಧಿ ಸ್ಥಳವಿದೆ. ಆಂಗ್ಲರು ಕೆತ್ತಿದ ಅಕ್ಷರಗಳನ್ನು ಈಗಲೂ ನೋಡಬಹುದು. ಜೌರಂಗಜೇಬನ ಹಸ್ತಮುದ್ರೆ, ಫರ್ಮಾನು ಈಗಲೂ ಸಂಸ್ಥಾನದಲ್ಲಿವೆ.ಸುರಪುರ ಸಂಸ್ಥಾನದ ಅರಸರು ನಾಡಿಗೆ ಕೊಟ್ಟಂತ ಕೊಡುಗೆಗಳನ್ನು ಮಕ್ಕಳಿಗೆ ತಿಳಿಸುವ ಬದಲು ಇತಿಹಾಸ, ಚರಿತ್ರೆಯ ಜ್ಞಾನವಿಲ್ಲದವರು ಸುರಪುರ ನಾಯಕರ ಪಠ್ಯ ಕಡಿತಕ್ಕೆ ಮುಂದಾಗಿರುವುದು ಭಾರತ ಮತ್ತು ರಾಜ್ಯಕ್ಕೆ ಸರಕಾರವೇ ಮಾಡಿದ ಅಪಮಾನ ಎಂದರು.

ಮೊಗಲ ಸಾಮ್ರಾಟ ಜೌರಂಗಜೇಬನ ಯುದ್ಧ ತಡೆಹಿಡಿಯದಿದ್ದರೆ ಸರ್ವಧರ್ಮಗಳು ಉಳಿಯುತ್ತಿರಲಿಲ್ಲ. ತಮಿಳುನಾಡಿನ ಕಂಚಿ ಕಾಮಾಕ್ಷಿ, ಮಧುರೈ, ಆಂಧ್ರದ ಶ್ರೀಶೈಲ, ತಿರುಪತಿ ಮತ್ತಿತರ ದೇವಾಲಯಗಳು ಹೇಳಹೆಸರಿಲ್ಲದಂತಾಗುತ್ತಿದ್ದವು. ಇಂತಹ ಮಹತ್ತರ ಇತಿಹಾಸ ಸಂಗತಿಗಳನ್ನು ಪಠ್ಯದಲ್ಲಿ ಅಳವಡಿಸಿ ಮಕ್ಕಳಿಗೆ ತಿಳಿಸಬೇಕು. ಸುರಪುರ ಇತಿಹಾಸ ಚರಿತ್ರೆಯ ಅರಿವಿಲ್ಲದವರು ಪಠ್ಯ ಪುಸ್ತಕ ಪರಿಷ್ಕರಣ ಸಮಿತಿ ಇಂತಹ ಹೀನಕೃತ್ಯವೆಸಗಿದೆ. ಇದು ಇತಿಹಾಸ ಮತ್ತು ಸುರಪುರ ಸಂಸ್ಥಾನಕ್ಕೆ ಮಾಡಿದ ಬಹುದೊಡ್ಡ ದ್ರೋಹವಾಗಿದೆ. ಸರಕಾರ ಸುರಪುರ ಇತಿಹಾಸಸದ ಬಗ್ಗೆ ಕೆಣಕಿದರೆ ಎಲ್ಲ ವತನ್ದಾರ ಮನೆತನಗಳು, ಜಾಗೀರದಾರ ಮನೆತನಗಳು, ಸಂಸ್ಥಾನದ ಅಭಿಮಾನಿಗಳು, ಪ್ರಜೆಗಳಿಂದ ಬೃಹತ್ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದರು.

ಇದನ್ನೂ ಓದಿ: ಬಿಜೆಪಿ ವಕ್ತಾರೆ ನೂಪೂರ್ ಶರ್ಮಾ ಬಂಧನಕ್ಕೆ ಹೆಚ್ಚಿದ ಒತ್ತಡ: ಶಹಾಬಾದನಲ್ಲಿ ಪ್ರತಿಭಟನೆ

ಇತಿಹಾಸ ಸಂಶೋಧಕರು, ಹಿರಿಯ ವಕೀಲ ಭಾಸ್ಕರರಾವ್ ಮುಡಬೂಳ ಮಾತನಾಡಿ, ಸುರಪುರ ಸಂಸ್ಥಾನಕ್ಕೆ ರಾಷ್ಟ್ರ ಮಾತ್ರವಲ್ಲದೇ ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಮಹತ್ವವಿದೆ. ಇಂಗ್ಲೆಂಡಿನ ಮ್ಯೂಸಿನಂನಲ್ಲಿ ಗರುಡಾದ್ರಿ ಕಲೆಯ ೭೦ ಚಿತ್ರಗಳು ಇರುವುದಕ್ಕೆ ಸಾಕ್ಷಿಯಾಗಿದೆ. ಸುರಪುರ ಅರಸ ಔರಂಗಜೇಬನ ವಿರುದ್ಧ ಯುದ್ಧದಲ್ಲಿ ಸೋತಿದ್ದರೆ ದಕ್ಷಿಣ ಭಾರತದ ಹೆಸರಾಂತ ದೇವಾಲಯಗಳು ಇರುತ್ತಿರಲಿಲ್ಲ. ಇವುಗಳನ್ನು ರಕ್ಷಿಸಿದ ಕೀರ್ತಿ ಸುರಪುರ ಅರಸರಗಿಗೆ ಸಲ್ಲುತ್ತದೆ. ಸಂಸ್ಥಾನದ ಪದ್ಧತಿಗಳು, ಆಚರಣೆಗಳು ಇಂದಿಗೂ ಜೀವಂತವಾಗಿವೆ ಎಂದು ತಿಳಿಸಿದರು.

ರಾಜಾ ಸೀತರಾಮನಾಯಕ, ರಾಜಾ ಲಕ್ಷ್ಮೀನಾರಾಯಣ ನಾಯಕ, ಬಸವರಾಜ್ ನಿಷ್ಠಿ ದೇಶಮುಖ, ಬಸವರಾಜ ಜಮದ್ರಾಖಾನಿ, ಗಣಪತಿರಾವ್ ಜಾಹಗೀರದಾರ, ಸೈಯ್ಯದ್ ಅಹ್ಮದ್ ಸಾಬ್, ವೀರೇಂದ್ರ ನಿಷ್ಠೆ ದೇಶಮುಖ, ದಿನೇಶ ಮಂತ್ರಿ, ಸುನೀಲ ಸರಪಟ್ಟಣಶೆಟ್ಟಿ, ಶಿವಕುಮಾರ ಮಸ್ಕಿ ಇದ್ದರು.

ಇದನ್ನೂ ಓದಿ: ಹಾಡು ಹಗಲೇ ತಲ್ವಾನಿಂದ ಯುವಕ ಓರ್ವನ ಮೇಲೆ ಮರಣಾಂತಿಕ ಹಲ್ಲೆ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here